ಮಡಿಕೇರಿ, ಮಾ. ೨: ಪ್ರಸಕ್ತ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವ ಚೇನಂಡ ಕಪ್ ಮುಂದಿನ ತಿಂಗಳಿನಿAದ ಪ್ರಾರಂಭಗೊಳ್ಳಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಈ ನಿಟ್ಟಿನಲ್ಲಿ ಇಂದು ಕೊಡವ ಹಾಕಿ ಅಕಾಡೆಮಿ, ಹಾಕಿ ಕರ್ನಾಟಕ, ಹಾಕಿ ಕೂರ್ಗ್ ಹಾಗೂ ಆಯೋಜಕರಾದ ಚೇನಂಡ ಕುಟುಂಬಸ್ಥರ ಜಂಟಿ ಸಭೆ ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆಯಿತು.

ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ವೀರಾಜಪೇಟೆ ಕೊಡವ ಸಮಾಜದ ಆವರಣದಲ್ಲಿ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡAಡ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಾಪೋಕ್ಲುವಿನಲ್ಲಿ ನಡೆಯುವ ಚೇನಂಡ ಕಪ್ ಕೊಡವ ಹಾಕಿ ಉತ್ಸವಕ್ಕೆ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ಘೋಷಿಸಲಾಯಿತು.

ಹಾಕಿ ಕೂರ್ಗ್ ಸಂಸ್ಥೆ ತಾಂತ್ರಿಕ ಸಹಕಾರ ನೀಡಲು ಒಪ್ಪಿಗೆ ಸೂಚಿಸಿತು. ಹಾಕಿ ಅಂಪೈರ್‌ಗಳಿಗೆ ನೀಡಲಾಗುವ ವೃತ್ತಿಪರ ಶುಲ್ಕಗಳು ಮತ್ತು ತಾಂತ್ರಿಕತೆಯ ಕುರಿತು ಚರ್ಚಿಸಲಾಯಿತು. ತಾಂತ್ರಿಕ ಸಿಬ್ಬಂದಿಯ ಪ್ರಯಾಣ ಭತ್ಯೆಯ ಬಗ್ಗೆ ನಿರ್ಧರಿಸಲಾಯಿತು.

ಚೇನಂಡ ಕುಟುಂಬಸ್ಥರು ಹಾಕಿ ಉತ್ಸವದ ಸಿದ್ಧತೆಯನ್ನು ವಿವರಿಸಿದರು. ಕಳೆದ ಬಾರಿ ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿ ಪರಿಚಯಿಸಿದಂತೆ ಮಹಿಳಾ ಹಾಕಿ ೫ಎ ಸೈಡ್ ಪಂದ್ಯಾಟವನ್ನು ಮುಂದುವರಿಸಲಾಗುವುದು ಎಂದು ಪ್ರಮುಖರು ತಿಳಿಸಿದರು.

ಇದೇ ಸಂದರ್ಭ ನಾಯಕಂಡ ದೀಪಕ್ ಚಂಗಪ್ಪ ಅವರನ್ನು ಪಂದ್ಯಾವಳಿಯ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಸಭೆಯಲ್ಲಿ ಹಾಕಿ ಕರ್ನಾಟಕದ ಎ.ಬಿ. ಸುಬ್ಬಯ್ಯ, ಕೂತಂಡ ಪೂಣಚ್ಚ, ಹಾಕಿ ಕೂರ್ಗ್ನ ಪಳಂಗAಡ ಲವ, ಅಮ್ಮಂಡೀರ ಚೇತನ್, ಯಮುನಾ ಚಂಗಪ್ಪ, ಬಡಕಡ ದೀನ, ಅಂಜಪರವAಡ ಕುಶ, ಕೊಡವ ಹಾಕಿ ಅಕಾಡೆಮಿಯ ಚೆಪ್ಪುಡಿರ ಪೂಣಚ್ಚ, ಕೂತಂಡ ಸುರೇಶ್ ಅಪ್ಪಯ್ಯ, ಬಾಚಿನಾಡಂಡ ಪ್ರದೀಪ್, ಕುಲ್ಲೇಟಿರ ಅರುಣ್ ಬೇಬ, ನಾಯಕಂಡ ದೀಪಕ್ ಚಂಗಪ್ಪ, ಕಂಬೀರAಡ ರಾಖಿ, ಮುಕ್ಕಾಟಿರ ಸೋಮಯ್ಯ, ಸುಳ್ಳಿಮಾಡ ದೀಪಕ್, ಮಂಡೇಪAಡ ಮುಖೇಶ್, ಕಲಿಯಂಡ ಸಂಪನ್, ಮುದ್ದಂಡ ರಶಿನ್ ಸುಬ್ಬಯ್ಯ ಹಾಗೂ ಚೇನಂಡ ಕುಟುಂಬದ ಪ್ರಮುಖರು ಉಪಸ್ಥಿತರಿದ್ದರು.