ಶನಿವಾರಸAತೆ, ಮಾ. ೨: ಶನಿವಾರಸಂತೆ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಶೋಭಾ ಯಾತ್ರೆ ಅದ್ದೂರಿಯಾಗಿ ಜರುಗಿತು. ಶನಿವಾರಸಂತೆ ಮಂಡಲ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಕೇಸರಿ ಧ್ವಜ ಹಾಗೂ ಬಂಟಿAಗ್ಸ್ನಿAದ ಅಲಂಕಾರಗೊAಡಿತ್ತು.

ಪಟ್ಟಣದ ಭಾರತಿ ವಿದ್ಯಾಸಂಸ್ಥೆಯಿAದ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಚಂಡೆ ಹಾಗೂ ನಾಸಿಕ್ ಬ್ಯಾಂಡ್‌ನೊAದಿಗೆ ಆರಂಭವಾದ ಶೋಭಾಯಾತ್ರೆ ಹಿಂದೂಪರ ಘೋಷಣೆಗಳನ್ನು ಕೂಗುತ್ತಾ ಮುಖ್ಯರಸ್ತೆಯಲ್ಲಿ ಸಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡಿತು.

ನಂತರ ಶ್ರೀ ನಂದೀಶ್ವರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ಆರಂಭವಾಯಿತು. ದೀಪ ಬೆಳಗಿಸಿ, ಶಿವಾಜಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರಿನ ನಿವೃತ್ತ ಪ್ರಾಂಶುಪಾಲ ನಾರಾಯಣ ಶೆಣೈ ದಿಕ್ಸೂಚಿ ಭಾಷಣ ಮಾಡುತ್ತಾ, ಜಾತ್ಯತೀತತೆ, ಹಿಂದೂತ್ವಕ್ಕೆ ಮೂಲ ಪ್ರೇರಣೆಯಾದ ಛತ್ರಪತಿ ಶಿವಾಜಿ ಸಾಮರಸ್ಯದ ಪಾಠಕ್ಕೆ ಸ್ಫೂರ್ತಿಯಾಗಿದ್ದಾರೆ. ಸಾಮರಸ್ಯದ ಬದುಕನ್ನು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ ಎಂದರು. ಕುಟುಂಬದಲ್ಲಿ ತಾಯಿಯಿಂದ ಸಂಸ್ಕಾರ, ಮೌಲ್ಯಗಳ ಕಲಿಕೆ ಆರಂಭವಾಗಬೇಕು ಎಂದು ಕರೆ ನೀಡಿದರು. ಸುಪ್ರಜ ಗುರುಕುಲ ವಿದ್ಯಾಸಂಸ್ಥೆ ಅಧ್ಯಕ್ಷೆ ಸುಜಲಾದೇವಿ ಮಾತನಾಡಿ, ಸಾಮರಸ್ಯದಿಂದ ಬದುಕುವಂತೆ ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿಂದೂ ಸಂಗಮ ಆಯೋಜನಾ ಸಮಿತಿ ಗೌರವಧ್ಯಕ್ಷ ಶೇಷಾರಾಂ ಮಾತನಾಡಿ, ಹಿಂದೂ ಧರ್ಮದ ಭೂಮಿ ಭಾರತದಲ್ಲಿ ಪ್ರತಿಯೊಬ್ಬರು ಭ್ರಾತೃತ್ವದ ಸದ್ಭಾವನೆಯಿಂದ, ಐಕ್ಯತೆಯಿಂದ ಬಾಳಬೇಕು ಎಂದರು.

ಪ್ರಶಾಂತ್ ದೇಶಭಕ್ತಿ ಗೀತೆ ಹಾಡಿದರು. ಸುಪ್ರಜ ಗುರುಕುಲ ವಿದ್ಯಾಸಂಸ್ಥೆ ವಿದ್ಯಾರ್ಥಿನಿಯರು ವಂದೇ ಮಾತರಂ ಹಾಡಿದರು. ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ರಕ್ಷಿತ್ ರವೀಂದ್ರ, ಕಾರ್ಯದರ್ಶಿ ಎಂ.ಸಿ.ಕಾAತರಾಜ್, ಖಜಾಂಚಿ ಅಶೋಕ್ ರೈ, ಸದಸ್ಯರು, ಮುಖಂಡರಾದ ಎಸ್.ಎನ್.ರಘು ಹಾಗೂ ದಿವಾಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಗಾನವಿ ಪ್ರಾರ್ಥಿಸಿ, ದಿವಾಕರ್ ಸ್ವಾಗತಿಸಿ, ಕಾರ್ಯದರ್ಶಿ ಕಾಂತರಾಜ್ ವಂದಿಸಿ, ಎಸ್.ಎನ್.ರಘು ಕಾರ್ಯಕ್ರಮ ನಿರ್ವಹಿಸಿದರು.