ಕುಶಾಲನಗರ, ಮಾ. ೨: ಕುಶಾಲನಗರ ರೋಟರಿಯ ಸುವರ್ಣ ಮಹೋತ್ಸವದ ಅಂಗವಾಗಿ ಪಟ್ಟಣದ ನಾಗರಿಕರಿಗೆ ನದಿ ಸಂರಕ್ಷಣೆ ಹಾಗೂ ಪಟ್ಟಣ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಬೃಹತ್ ಜಾಥಾ ಹಮ್ಮಿಕೊಳ್ಳಲಾಯಿತು.

ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ನೇತೃತ್ವದಲ್ಲಿ ರೋಟರಿ ಸಭಾಂಗಣದಿAದ ಹೊರಟ ಜಾಥಾ ಕುಶಾಲನಗರ ಪಟ್ಟಣ ಮೂಲಕ ಮುಖ್ಯ ರಸ್ತೆಯಲ್ಲಿ ತೆರಳಿ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿರುವ ಎಸ್‌ಎಲ್‌ಎನ್ ಗ್ರಾö್ಯಂಡ್ ತನಕ ಸಾಗಿತು. ಚೆಂಡೆ ಮೇಳದೊಂದಿಗೆ ರೋಟರಿ ಸದಸ್ಯರು ಕುಟುಂಬ ಸದಸ್ಯರು ಜಾಥಾದಲ್ಲಿ ಪಾಲ್ಗೊಂಡು ನದಿ ಸ್ವಚ್ಛತೆ ಪ್ರಕೃತಿ ಸಂರಕ್ಷಣೆ ಬಗ್ಗೆ ಫಲಕಗಳನ್ನು ಹಿಡಿದು ಸಾಗಿದರು. ಪಟ್ಟಣದ ಗಣಪತಿ ದೇವಾಲಯ ಮುಂಭಾಗ ಕೆಲಕಾಲ ಮಾನವ ಸರಪಳಿ ರಚಿಸಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.

ರೋಟರಿ ಕಾರ್ಯದರ್ಶಿ ಎಚ್.ಪಿ. ಮಂಜುನಾಥ, ಖಜಾಂಚಿ ಕೆ.ಎಂ. ಜಾಕಬ್, ಪ್ರಮುಖರಾದ ಎಸ್.ಕೆ. ಸತೀಶ್ ಡಾ. ಹರಿ ಎ ಶೆಟ್ಟಿ, ಮಹೇಶ್ ಕುಮಾರ್ ನಲ್ವಡೆ, ಕ್ರೆಜ್‌ವೆಲ್ ಕೋಟ್ಸ್, ರಾಜಶೇಖರ್, ಉಲ್ಲಾಸ್ ಕೃಷ್ಣ ಮಹಿಳಾ ಸದಸ್ಯರು ಸೇರಿದಂತೆ ರೋಟರಿ ಸದಸ್ಯರು ಇದ್ದರು.