ಮಡಿಕೇರಿ, ಮಾ. ೨: ಬಹುಭಾಷಾ ನಟಿ, ನ್ಯಾಷನಲ್ ಕ್ರಶ್ ಖ್ಯಾತಿಯ ಕೊಡಗು ಮೂಲದವರಾದ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರುಗಳ ವಿವಾಹ ಈಗಾಗಲೇ ನಡೆದಿದ್ದು, ದೇಶಾದ್ಯಂತ ಭಾರೀ ಸುದ್ದಿಯಾಗಿದೆ. ರಶ್ಮಿಕಾ-ವಿಜಯ್ ಜೋಡಿಯ ವಿವಾಹದ ಹಿನ್ನೆಲೆ ಇವರ ವತಿಯಿಂದ ದೇಶದ ೧೬ ದೇವಸ್ಥಾನಗಳಲ್ಲಿ ಅನ್ನದಾನಕ್ಕೆ ನೆರವು ನೀಡಲಾಗಿದ್ದು, ಹಲವು ಪ್ರಮುಖ ಪಟ್ಟಣಗಳಲ್ಲಿ ಸಿಹಿ ವಿತರಣೆ ಮಾಡಲಾಗಿದೆ. ರಶ್ಮಿಕಾ-ವಿಜಯ್ ಅವರ ಪಿಆರ್‌ಓಗಳ ಮೂಲಕ ಈ ಕೆಲಸವನ್ನು ನಿರ್ವಹಿಸಲಾಗಿದೆ. ಕರ್ನಾಟಕದಲ್ಲಿ ಕೊಡಗಿನ ಪಾಡಿಶ್ರೀ ಇಗ್ಗುತ್ತಪ್ಪ ದೇವಸ್ಥಾನವೂ ಇದರಲ್ಲಿ ಸೇರಿದೆ. ಇದನ್ನು ರಶ್ಮಿಕಾ ಕುಟುಂಬದ ಮೂಲವೂ ‘ಶಕ್ತಿ’ಗೆ ಖಚಿತಪಡಿಸಿದೆ. ರಾಜ್ಯದಲ್ಲಿ ಬೆಂಗಳೂರಿನ ಶಿವಂ ದೇವಾಲಯ, ಮೈಸೂರಿನ ಚಾಮುಂಡೇಶ್ವರಿ ದೇವಾಲಯ, ಬೆಂಗಳೂರಿನ ರಾಧಾಕೃಷ್ಣ ದೇಗುಲದಲ್ಲಿ ಅನ್ನದಾನ ಮಾಡಲಾಗಿದೆ. ಈ ದೇವಾಲಯಗಳಿಗೆ ಅನ್ನದಾನಕ್ಕೆ ಆರ್ಥಿಕ ನೆರವು ಒದಗಿಸಲಾಗಿದೆ. ಇಗ್ಗುತ್ತಪ್ಪ ದೇವಾಲಯಕ್ಕೂ ಹಣ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕರ್ನಾಟಕ, ಉತ್ತರ ಪ್ರದೇಶ, ಅಸ್ಸಾಂ, ಗುಜರಾತ್, ಚತ್ತೀಸ್‌ಘಡ್, ರಾಜಸ್ತಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶದ ಒಟ್ಟು ೧೬ ದೇವಾಲಯಗಳು ಇದರಲ್ಲಿ ಸೇರಿವೆ.

ಇದರೊಂದಿಗೆ ‘ವಿರೋಶ್’ ಸೆÀಲಬ್ರೇಷನ್ ಅಂಗವಾಗಿ ೨೧ಕ್ಕೂ ಅಧಿಕ ನಗರಗಳಲ್ಲಿ ಸಿಹಿ ವಿತರಣೆ ಮಾಡಲಾಗಿರುವ ತಾರಾ ಜೋಡಿಯ ವಿವಾಹದ ಸಂಭ್ರಮವಾಗಿದೆ. ವಿವಾಹದ ಬಳಿಕ ಈ ಜೋಡಿ ಕುಟುಂಬಸ್ಥರೊAದಿಗೆ ಆಂಧ್ರಪ್ರದೇಶದ ವಿವಿಧ ದೇವಾಲಯಗಳಲ್ಲಿ ಪೂಜಾ ವಿಧಿ-ವಿಧಾನಗಳಲ್ಲೇ ತೊಡಗಿಸಿ ಕೊಂಡಿದೆ. ಈ ನಡುವೆ ಸದ್ಯದಲ್ಲಿ ಹೈದರಬಾದ್‌ನಲ್ಲಿ ಜರುಗಲಿರುವ ಅದ್ದೂರಿ ಆರತಕ್ಷತೆಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಪ್ರಮುಖ ಗಣ್ಯರನ್ನು ಭೇಟಿಯಾಗಿ ಆಮಂತ್ರಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.