ಮಡಿಕೇರಿ, ಮಾ. ೨: ತ್ರಿವೇಣಿ ಪೊಮ್ಮಕ್ಕಡ ಕೂಟದ ವತಿಯಿಂದ ಮಡಿಕೇರಿಯ ಶಕ್ತಿ ವೃದ್ಧಾಶ್ರಮದಲ್ಲಿನ ವೃದ್ಧರಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು. ಆಶ್ರಮದಲ್ಲಿರುವ ೧೪ ಮಹಿಳೆಯರು ಹಾಗೂ ೬ ಪುರುಷರು, ಒಟ್ಟು ಇಪ್ಪತ್ತು ಸದಸ್ಯರಿಗೆ ಕೂಟದ ವತಿಯಿಂದ ಅಗತ್ಯ ವಸ್ತುಗಳ ಕಿಟ್ ಅನ್ನು ವಿತರಿಸಿ ಉಪಹಾರ ಹಾಗೂ ರಾತ್ರಿಯ ಭೋಜನದ ವ್ಯವಸ್ಥೆಯನ್ನ ಕೂಡ ಏರ್ಪಡಿಸಲಾಯಿತು.
ಈ ಸಂದರ್ಭ ಕೂಟದ ಅಧ್ಯಕ್ಷರಾದ ಕಿಕ್ಕೇರಿಯಂಡ ಲೀಲಾ ಅಯ್ಯಪ್ಪ, ಉಪಾಧ್ಯಕ್ಷರಾದ ಬೊಪ್ಪಂಡ ಸರಳ ಕರುಂಬಯ್ಯ, ಕಾರ್ಯದರ್ಶಿ ಮಲ್ಚೀರ ಯಶೋಧ ದೇವಯ್ಯ, ಸದಸ್ಯರುಗಳಾದ ಕೂಪದಿರ ಜೂನಾ ವಿಜಯ್, ಉಡುವೇರ ರೇಖಾ ರಘು, ಅಮ್ಮಂಡಿರ ರಾಣಿ ಮುತ್ತಮ್ಮ, ಮುಕ್ಕಾಟಿರ ಸವಿತಾ, ಕರವಂಡ ಸೀಮಾ, ಚಿಂಡಮಾಡ ಸರಿತಾ ಮೊಣ್ಣಪ್ಪ ಕೊಡಂದೇರ ಸ್ವಾತಿ ಲವ ಅವರುಗಳು ಹಾಜರಿದ್ದರು.