ನಾಪೋಕ್ಲು, ಮಾ. ೨: ಸಹಕಾರಿ ಮಹಿಳಾ ಸಮಾಜ ನಾಪೋಕ್ಲು ಇದರ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಬಿದ್ದಾಟಂಡ ಮೇರಿ ಚಿಟ್ಯಪ್ಪ ಆಯ್ಕೆಯಾದರು

ಸಮಾಜದ ಸಭಾಂಗಣದಲ್ಲಿ ಜರುಗಿದ ಪದಾಧಿಕಾರಿಗಳ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಕೆಲ್ಲೇಟಿರ ಬಿ. ಮುತ್ತಮ್ಮ, ನಿರ್ದೇಶಕರಾಗಿ ಕುಲ್ಲೇಟಿರ ಹೇಮಾವತಿ ಅರುಣ್, ಕೆಲ್ಲೇಟಿರ ದಿವ್ಯ ಮುತ್ತಪ್ಪ, ಕುಟ್ಟನ್ಜಟ್ಟಿರ ವಿನಿತಾ ಸೋಮಣ್ಣ, ಕಾಂಡAಡ ಲೀಲಾವತಿ ಪೊನ್ನಣ್ಣ, ಹೇಮಾವತಿ ರಾಮಕೃಷ್ಣ, ಮಣವಟ್ಟಿರ ಜಾನ್ಸಿ ತಿಮ್ಮಯ್ಯ, ಮುಂಡAಡ ಕವಿತಾ ಅಯ್ಯಣ್ಣ, ಬಿದ್ದಾಟಂಡ ಗಿರಿಜಾ ಬೋಪಣ್ಣ, ಬೊಪ್ಪಂಡ ಶೈಲಾ ಬೋಪಯ್ಯ, ರಾಜೇಶ್ವರಿ ಲೋಕೇಶ್ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಪ್ರದೀಪ್ ಭಾಗವಹಿಸಿದ್ದರು.