ನಾಪೋಕ್ಲು, ಮಾ. ೨: ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಗ್ಗಾಲು ಗ್ರಾಮದ ವರ್ಷಿಣಿ ಪೂಜಾರಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದ ಹಿನ್ನೆಲೆಯಲ್ಲಿ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಂಚಾಯಿತಿ ಮಾಜಿ ಅಧ್ಯಕ್ಷ ಕುಶನ್ ರೈ, ಪಿಡಿಓ ಚಂದ್ರಮೌಳಿ ಮಾತನಾಡಿ ವರ್ಷಿಣಿ ಪೂಜಾರಿ ಸಾಧನೆ ಬಗ್ಗೆ ಶ್ಲಾಘಿಸಿದರು.

ಪುದಿಯೊಕ್ಕಡ ರಮೇಶ್ ಮಾತನಾಡಿದರು. ವರ್ಷಿಣಿ ಮೂರ್ನಾಡು ಗ್ರಾಮದ ಬಾಲು ಮತ್ತು ರೇಖಾ ದಂಪತಿಯ ಪ್ರಥಮ ಪುತ್ರಿಯಾಗಿದ್ದು ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ೨ನೆ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ.