ಸುಳ್ಯ, ಮಾ.೨: ಸುಳ್ಯ ಕೆ.ವಿ.ಜಿ ಇಂಜಿನಿಯರಿAಗ್ ಕಾಲೇಜಿನ ವಾಯುಜಿತ್ ರೇಸಿಂಗ್ ತಂಡವು ಕೊಯಂಬತೂರ್‌ನಲ್ಲಿ ನಡೆದ ಗೋ-ಕಾರ್ಟ್ ೮.೦ ಡಿಸೈನ್ ಚಾಲೆಂಜ್‌ನಲ್ಲಿ ರಾಷ್ಟçಮಟ್ಟದ ಚಾಂಪಿಯನ್‌ಶಿಪ್ ಗಳಿಸಿಕೊಂಡಿದೆ. ೧೫೦ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ಈ ಸ್ಪರ್ಧೆಯಲ್ಲಿ ಕೆ.ವಿ.ಜಿ ವಿದ್ಯಾರ್ಥಿಗಳು ಕಳೆದ ೮ ವರ್ಷಗಳಿಂದ ನಿರಂತರ ವಾಗಿ ಭಾಗವಹಿಸಿ, ಒಂದು ಬಾರಿ ರನ್ನರ್ ಅಪ್ ಹಾಗೂ ೪ ಬಾರಿ ಚಾಂಪಿಯನ್ ಆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ತಂಡದಲ್ಲಿ ೧೭ ವಿದ್ಯಾರ್ಥಿ ಗಳು ಭಾಗವಹಿಸಿದ್ದು, ದಿವಿನ್ ಕುಮಾರ್, ತಂಡದ ಕ್ಯಾಪ್ಟನ್ ಆಗಿದ್ದರು. ಈ ಸಾಧನೆಗಾಗಿ ಕಾಲೇಜಿನ ಆಡಳಿತ ಮಂಡಳಿ ಎ.ಒ.ಎಲ್.ಇ(ರಿ) ಕಮಿಟಿ ‘ಬಿ’ ವತಿಯಿಂದ ತಂಡಕ್ಕೆ ರೂ.೫೦,೦೦೦ ಪ್ರೋತ್ಸಾಹಧನ ನೀಡಲಾಯಿತು.