ಕೂಡಿಗೆ, ಫೆ. ೨೮: ಕರಕುಶಲ ಸೇವಾ ಕೇಂದ್ರ ಮೈಸೂರು ವತಿಯಿಂದ ಕೊಡಗು ಜಿಲ್ಲೆಯ ಗಡಿ ಭಾಗವಾದ ಶಿರಂಗಾಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕರಕುಶಲ ವಸ್ತುಗಳ ತಯಾರಿಕೆಗೆ ಸಂಬAಧಿಸಿದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ಕಾರ್ಯಾಗಾರದಲ್ಲಿ ಶಿರಂಗಾಲ, ತೊರೆನೂರು ಮತ್ತು ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೮೦ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಆಯುಕ್ತರು (ಕರಕುಶಲ) ವಸ್ತೊçÃದ್ಯಮ ಸಚಿವಾಲಯದ ವಿವಿಧ ಯೋಜನೆಗಳನ್ನು ಮೈಸೂರು ವಿಭಾಗದ ಅಧಿಕಾರಿ ಸಬೀರಾ ಎಂ.ಬಿ., ಸ್ವದೇಶ್ ಘರಾ (hಚಿಟಿಜiಛಿಡಿಚಿಜಿಣs ಠಿಡಿomoಣioಟಿ oಜಿಜಿiಛಿeಡಿ) ಅವರು ವಿವರಿಸಿದರು.

ಪೇಹಚಾನ್ ಐಡಿಕಾರ್ಡ್ನ ಲಾಭಗಳು, ಮುದ್ರಾ ಸಾಲಗಳು ಹಾಗೂ ಮಾರುಕಟ್ಟೆ ಸಹಾಯದ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಟಿ.ಕೆ. ಪಾಂಡುರAಗ ಮಾತನಾಡಿ, ಯೋಜನೆಯ ತರಬೇತಿಯನ್ನು ಪಡೆದು ನಂತರ ಸ್ವ ಉದ್ಯೋಗದ ಮುಖೇನ ಕರಕುಶಲ ವಸ್ತುಗಳು ತಯಾರಿಸಲು ಇಲಾಖೆಯ ವತಿಯಿಂದ ಮೊದಲ ಹಂತದಲ್ಲಿ ಪ್ರಾಯೋಗಿಕ ತರಬೇತಿಗಳನ್ನು ನೀಡಬೇಕೆಂದು ಮನವಿ ಮಾಡಿದರು, ನಂತರ ಅರ್ಹ ಸದಸ್ಯರುಗಳನ್ನು ನೋಂದಣಿ ಮಾಡಿಕೊಂಡು ತರಬೇತಿ ನೀಡಬೇಕೆಂದು ತಿಳಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ.ಆರ್. ಹೇಮಲತ. ವೆಂಕಟೇಶ್, ಕೊಡಗು ಕೈಮಗ್ಗ ಮತ್ತು ವಸ್ತç ಸಂಘದ ಅಧ್ಯಕ್ಷ ವೆಂಕಟೇಶ್, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ರಾಕೇಶ್, ನೇಕಾರ ಸಂಘದ ಪದಾಧಿಕಾರಿಗಳಾದ ಧರ್ಮಪ್ಪ ಮತ್ತು ಸವಿತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬ್ಯಾಂಕ್ ವ್ಯವಸ್ಥಾಪಕರು ಮುದ್ರಾ ಯೋಜನೆ, ಪಿಎಂಜೆಜೆಬಿವೈ (Pಒಎಎಃಙ) ಮತ್ತು ಪಿಎಮ್‌ಎಸ್‌ಬಿವೈ (PಒSಃಙ) ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಫಲಿತಾಂಶವಾಗಿ ಹೊಸ ಕ್ಲಸ್ಟರ್ ಒಂದನ್ನು ಸ್ಥಾಪಿಸಲಾಗಿದೆ. ಒಟ್ಟು ೭೫ ಪೇಹಚಾನ್ ಕಾರ್ಡ್ ಅರ್ಜಿಗಳನ್ನು ಸಂಗ್ರಹಿಸಲಾಗಿದೆ ಮತ್ತು ಹ್ಯಾಂಡ್ ಎಂಬ್ರಾಯ್ಡರಿ ತರಬೇತಿ ಪಡೆಯಲು ಕರಕುಶಲಕಾರರು ಆಸಕ್ತಿ ಹೊಂದಿರುವುದು ಗಮನಕ್ಕೆ ಬಂದಿದೆ.