ಮಡಿಕೇರಿ, ಫೆ. ೨೭: ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ತೋರಿ, ಸಂಬAಧಿತ ಆಯ್ಕೆದಾರರ ಮೂಲಕ ಆಯ್ಕೆಗೊಂಡು ಕೊಡವ ಹಾಕಿ ಅಕಾಡೆಮಿ ಮೂಲಕ ಶಿಫಾರಸ್ಸು ಪಡೆಯುವ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ನೀಡಲು ಪ್ರತಿಷ್ಠಿತ ಆರ್.ವಿ. ಯೂನಿವರ್ಸಿಟಿ ಮುಂದೆ ಬಂದಿದೆ. ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಅವರ ಪ್ರಯತ್ನದ ಫಲವಾಗಿ ಈ ಸೌಲಭ್ಯ ನೀಡಲು ಆರ್.ವಿ. ಯೂನಿವರ್ಸಿಟಿ (ಮೈಸೂರು ಕ್ಯಾಂಪಸ್) ಒಪ್ಪಿಗೆ ನೀಡಿದೆ.

ಹಾಕಿ ಉತ್ಸವದಲ್ಲಿ ಪಾಲ್ಗೊಂಡು ಗುರುತಿಸಲ್ಪಡುವ ಪ್ರತಿಭಾನ್ವಿತ ಹಾಕಿ ಆಟಗಾರ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣಕ್ಕೆ ಆರ್.ವಿ. ಯೂನಿವರ್ಸಿಟಿ ಪದವಿ ಶಿಕ್ಷಣದ ಶೇ ೧೦೦ ರಷ್ಟು ಶುಲ್ಕವನ್ನು ವಿದ್ಯಾರ್ಥಿ ವೇತನದ ಮೂಲಕ ಭರಿಸಲಿದೆ. ಈ ಯೂನಿವರ್ಸಿಟಿಯ ಮೈಸೂರು ಕ್ಯಾಂಪಸ್‌ನಲ್ಲಿ ಬಿಎಸ್‌ಸಿ, ಬಿ.ಟಿ., ಬಿ.ಸಿ., ಬಿಬಿಎ ಅಥವಾ ಬಿಸಿಎ ವಿಷಯಗಳ ಯಾವುದಾದರು ವಿಷಯದಲ್ಲಿ ಪದವಿ ಪಡೆಯಲು ವಿದ್ಯಾರ್ಥಿ ವೇತನ ಶಿಕ್ಷಣ ಶುಲ್ಕವನ್ನು ಶೇ ೧೦೦ರಷ್ಟು ನೀಡಲಾಗುವುದು. ಸ್ನಾತಕೋತ್ತರ ಶಿಕ್ಷಣಕ್ಕೂ ಇದು ಅನ್ವಯವಾಗಲಿದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಉತ್ತಮ ಪ್ರತಿಭಾನ್ವಿತ ಹಾಕಿ ಆಟಗಾರರನ್ನು ಕೌಟುಂಬಿಕ ಹಾಕಿ ಉತ್ಸವದಲ್ಲಿ ಇದಕ್ಕಾಗಿ ನಿಗದಿ ಮಾಡಿರುವ ತಂಡ ಗುರುತಿಸಿ ಆಯ್ಕೆ ಮಾಡಲಿದೆ. ಇವರಿಗೆ ಕೊಡವ ಹಾಕಿ ಅಕಾಡೆಮಿ ಶಿಫಾರಸಿನೊಂದಿಗೆ ಮಾನ್ಯತಾ ಪತ್ರ ನೀಡಲಿದ್ದು, ಇದನ್ನು ಆಧರಿಸಿ ಆರ್.ವಿ. ಯೂನಿವರ್ಸಿಟಿ (ಮೈಸೂರು ಕ್ಯಾಂಪಸ್) ಮೂಲಕ ಷರತ್ತಿಗೊಳಪಟ್ಟು ಸೌಲಭ್ಯ ಒದಗಿಸಲಾಗುವ ವಿನೂತನ ಕಾರ್ಯಕ್ರಮ ಇದಾಗಿದೆ. ಯುವಕ-ಯುವತಿಯರಿಗೆ ಈ ಸೌಲಭ್ಯ ಸಿಗಲಿದೆ ಎಂದು ಅಕಾಡೆಮಿ ನಿರ್ದೇಶಕರಾದ ಮುದ್ದಂಡ ರಶಿನ್ ಸುಬ್ಬಯ್ಯ ಮಾಹಿತಿ ನೀಡಿದ್ದಾರೆ.