ಶ್ರೀಮಂಗಲ, ಫೆ. ೨೭: ಅಖಿಲ ಕೊಡವ ಸಮಾಜದ ಕೇಂದ್ರೀಯ ಸಮಿತಿಗೆ ಗುರುವಾರ ವೀರಾಜಪೇಟೆ ಕಾವೇರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿಶೇಷ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಸ್ವಾತಂತ್ರö್ಯ ಪೂರ್ವದಿಂದ ಅಂದರೆ ೧೯೪೨ ರಿಂದ ಅ.ಕೊ.ಸ. ಕೊಡವ ಜನಾಂಗದ ವಿಶೇಷ ಸಂಸ್ಥೆಯಾಗಿದ್ದು, ಕೊಡವ ಜನಾಂಗದ ಶ್ರೇಯೋಭಿವೃದ್ಧಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಅಖಿಲ ಕೊಡವ ಸಮಾಜದ ಅಧ್ಯಕ್ಷ ದೇಶತಕ್ಕ ಪರದಂಡ ಸುಬ್ರಮಣಿ ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಆಯ್ಕೆ ಅಂತಿಮಗೊಳಿಸಲಾಯಿತು. ೪೩ ಜನರಿಗೆ ಕೊಡವ ಸಮಾಜದ ಹೊಣೆಗಾರಿಕೆ ನೀಡಲಾಯಿತು. ದೇಶತಕ್ಕರ ಸ್ಥಾನ, ನಾಡ್ ತಕ್ಕರ ಜವಾಬ್ದಾರಿ ನಿಭಾಯಿಸುವ ಹೊಣೆ, ಕೊಡವ ಸಮಾಜಗಳ ಆಯ್ಕೆ, ಕಾನೂನು ಸಲಹೆಗಾರರ ನೇಮಕ, ಕೊಡವ ಒಕ್ಕದ ಜವಾಬ್ದಾರಿಗೆ ಸ್ಥಾನ ನೀಡಲಾಯಿತು.
ದೇಶತಕ್ಕರ ಪರವಾಗಿ ಪರದಂಡ ಸುಬ್ರಮಣಿ ಕಾವೇರಪ್ಪ (ಅಖಿಲ ಕೊಡವ ಸಮಾಜ ಅಧ್ಯಕ್ಷರು) ಮತ್ತು ಪೋರೆರ ಬಿದ್ದಪ್ಪ, ನಾಡ್ ತಕ್ಕರಾಗಿ ಕಲ್ಯಾಟಂಡ ಮುತ್ತಪ್ಪ (ನಾಲ್ ನಾಡ್), ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕೇಲೇಟಿರ ರಂಜನ್ (ನೂರಂಬಡ ನಾಡ್), ಕಾಯಪಂಡ ಸುನಿಲ್ (ಮರೆನಾಡ್), ತಾತಪಂಡ ನಯನ (ನೆಲ್ಲಿಪುದಿಕೇರಿ ನಾಡ್), ಚೆಕ್ಕೇರ ರಾಜೇಶ್ (ಅಂಜಿಕೇರಿ ನಾಡ್), ಅಜ್ಜಮಾಡ ಚಂಗಪ್ಪ (ಕುರ್ಚಿತೊರೆ ನಾಡ್), ಮೇದುರ ಗಪ್ಪು ಪೂವಯ್ಯ (ಸೂರ್ಲಬ್ಬಿ ನಾಡ್), ಐಚೆಟ್ಟಿರ ಕುಟ್ಟಯ್ಯ (ಬೆಪ್ಪು ನಾಡ್), ಅಡ್ಡಂಡ ಪ್ರಕಾಶ್ ಕುಶಾಲಪ್ಪ (ಬೊಟ್ಟಿಯಾತ್ ನಾಡ್) ಅವರನ್ನು ಆಯ್ಕೆ ಮಾಡಲಾಯಿತು.
ಕೊಡವ ಸಮಾಜ ಪರವಾಗಿ ವೀರಾಜಪೇಟೆ ಕೊಡವ ಸಮಾಜ, ಮೂರ್ನಾಡ್ ಕೊಡವ ಸಮಾಜ, ನಾಪೋಕ್ಲು ಕೊಡವ ಸಮಾಜ, ಮಕ್ಕಂದೂರ್ ಕೊಡವ ಸಮಾಜ, ಕುಶಾಲನಗರ ಕೊಡವ ಸಮಾಜ, ಪೊನ್ನಂಪೇಟೆ ಕೊಡವ ಸಮಾಜ, ಟಿ. ಶೆಟ್ಟಿಗೇರಿ ಕೊಡವ ಸಮಾಜ, ಅಮ್ಮತ್ತಿ ಕೊಡವ ಸಮಾಜ, ಗೋಣಿಕೊಪ್ಪ ಕೊಡವ ಸಮಾಜ, ಬೆಪ್ಪುನಾಡ್ ಕೊಡವ ಸಮಾಜ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಯಿತು.
ಕೊಡವ ಒಕ್ಕದಿಂದ ಪ್ರತಿನಿಧಿಗಳಾಗಿ ಅನ್ನಡಿಯಂಡ ದಿಲೀಪ್ ಕುಮಾರ್, ಮಂಞÂÃರ ಉಮೇಶ್ ಅಪ್ಪಣ್ಣ, ಚೊಟ್ಟಂಡ ಪ್ರಭು ಸೋಮಯ್ಯ, ಚೆಟ್ಟೋಳೀರ ಗಿರೀಶ್ ಅಪ್ಪಯ್ಯ, ಪಟ್ಟಡ ಪೂವಣ್ಣ, ಮಂಡೇಪAಡ ರತನ್ ಕುಟ್ಟಯ್ಯ, ಚೇಂದ್ರಿಮಾಡ ಪ್ರಥ್ವಿ ಚೀರಂಡ ಕಂದಾ ಸುಬ್ಬಯ್ಯ, ಕಾಣತಂಡ ಜಗದೀಶ್, ಮನ್ನೇರ ಸರಸ್ವತಿ, ಅಜ್ಜಮಾಡ ಸಾವಿತ್ರಿ, ಕುಲ್ಲಚಂಡ ಬೋಪಣ್ಣ ಅವರನ್ನು ನೇಮಕ ಮಾಡಲಾಗಿದೆ.
ಕೊಡವ ಜನಾಂಗಕ್ಕೆ ಕ್ರಿಯಾತ್ಮಕ ಸೇವೆ ಸಲ್ಲಿಸಿ ವಿವಿಧ ಕ್ಷೇತ್ರಗಳಲ್ಲಿ ಮುಖ್ಯಸ್ಥರಾಗಿರುವವರಲ್ಲಿ ಡಾ. ಚೆಪ್ಪುಡೀರ ಕುಶಾಲಪ್ಪ, ಅಣ್ಣೀರ ಹರೀಶ್ ಮಾದಪ್ಪ, ಚೋಕಂಡ ಸಂಜು ಸುಬ್ಬಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಕೊಡವ ಮಹಿಳೆಯರ ಪರವಾಗಿ ಕೊಡಂದೇರ ಮಮತಾ ಸುಬ್ಬಯ್ಯ, ಮಂಡೇಪAಡ ಚೋಂದಮ್ಮ ಅಪ್ಪಯ್ಯ, ಮೀದೇರಿರ ಕವಿತ ರಾಮು, ಕೊಡವ ಯುವಕ - ಯುವತಿಯರ ಪರವಾಗಿ ನೆರ್ಪಂಡ ಪ್ರತಿಕ್ ಪೊನ್ನಣ್ಣ, ಚೊಟ್ಟೆಯಂಡ ಸಂಜು ಕಾವೇರಪ್ಪ, ನಡಿಕೇರಿಯಂಡ ರಕ್ಷಾ ಅಯ್ಯಪ್ಪ ಅವರನ್ನು ಮತ್ತು ಕಾನೂನು ಸಲಹೆಗಾರರಾಗಿ ಕುಟ್ಟಂಡ ವಿಜಯ್ ಉತ್ತಪ್ಪ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.