ಮಡಿಕೇರಿ, ಫೆ. ೨೬: ನಗರದ ಜ್ಯೋತಿ ಬಡಾವಣೆಯ ಶ್ರೀ ವನಚಾಮುಂಡೇಶ್ವರಿ ಕ್ಷೇತ್ರದ ಬ್ರಹ್ಮಕಲಶ ಅಷ್ಟಬಂಧ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ನಗರದಲ್ಲಿ ಶೋಭಾಯಾತ್ರೆ ನಡೆಯಿತು.
ಇಲ್ಲಿನ ಗಾಂಧಿ ಮೈದಾನದಿಂದ ದೀಪಾಲಕೃಂತ ಮಂಟಪದಲ್ಲಿ ಭವ್ಯ ಕಳಸ ಮೆರವಣಿಗೆ ಆರಂಭಗೊAಡಿತು. ಚಿಂಗಾರಿ ಮೇಳ, ಚಂಡೆ ವಾದ್ಯ, ಭಜನಾ ಕುಣಿತ ಶೋಭಾಯಾತ್ರೆಯ ಮೆರುಗು ಹೆಚ್ಚಿಸಿತು. ಅನಂತರ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಲಾಯಿತು. ತಾ. ೨೭ ರಂದು ಬೆಳಿಗ್ಗಿನಿಂದ ವಿಶೇಷ ಪೂಜೆ ನಡೆಯಲಿದೆ.