ಸಿದ್ದಾಪುರ, ಫೆ. ೨೫: ತೋಟದ ನಡುವಿನಿಂದ ಬಂದೂಕಿನಿAದ ಗುಂಡು ಸ್ಫೋಟಿಸಿ ವ್ಯಕ್ತಿ ಗಾಯಗೊಂಡ ಪ್ರಕರಣ ಸಂಬAಧ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆನಂದಪುರ ನಿವಾಸಿ ಅರವಿನ್ ಜೆರಾಲ್ಡ್ (೫೧) ಬಂಧಿತ ಆರೋಪಿ. ಮಂಗಳವಾರ ಮಧ್ಯಾಹ್ನ ಆನಂದಪುರ ನಿವಾಸಿ ಅನೇಸ್ಟ ಡಿ.ಕುಂಞÂ ಎಂಬವರು ತಮ್ಮ ಮನೆಯ ಹಿಂಭಾಗಕ್ಕೆ ಸೌದೆ ತರುತ್ತಿದ್ದ ಸಂದರ್ಭ ತೋಟದ ಒಳಗಿನಿಂದ ಗುಂಡು ಹಾರಿ ಅನೇಸ್ಟ ಅವರ ಎದೆ, ಕಾಲು, ಕೈ ಸೊಂಟದ ಭಾಗಕ್ಕೆ ಹೊಕ್ಕಿ ಗಾಯಗಳಾಗಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಂಬAಧ ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡ ಪೊಲೀಸರು ಆನಂದಪುರ ನಿವಾಸಿ ಜೆರಾಲ್ಡ್ ಅರವಿಂದ್ (೫೧) ಎಂಬವರನ್ನು ಬಂಧಿಸಿದ್ದಾರೆ. ಆರೋಪಿಯು ತಾನು ಪಕ್ಷಿಗೆ ಗುಂಡು ಹಾರಿಸಿದ್ದು, ಇದು ಪಕ್ಕದ ಮನೆಯ ನಿವಾಸಿ ಅನೇಸ್ಟ ಎಂಬುವರಿಗೆ ತಗುಲಿದೆ ಎಂದು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ. ಬಂದೂಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.