ಕೂಡಿಗೆ, ಫೆ. ೨೫: ೭ನೇ ಹೊಸಕೋಟೆ ಗ್ರಾಮದ ಕಲ್ಲುಕೋರೆ ರಸ್ತೆಯಲ್ಲಿರುವ ಪುರಾತನ ಕಾಲದ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸ್ಥಳೀಯ ನಿವಾಸಿಯೂ ಆದ ನಿವೃತ್ತ ಸರಕಾರಿ ಅಧಿಕಾರಿಯೊಬ್ಬರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ದೇವಸ್ಥಾನ ಜೀರ್ಣೋದ್ಧಾರ ಸಮಿತಿಯವರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದಲ್ಲಿ ೨೯ ಸೆಂಟ್ ಜಾಗದಲ್ಲಿ ೨೦೧೬-೧೭ ರಲ್ಲಿ ಜೀರ್ಣೋದ್ಧಾರ ಕಾರ್ಯ ಆರಂಭಿಸಲಾಗಿದೆ. ದೇವಾಲಯ ನಿರ್ಮಾಣಕ್ಕೆ ಎಂ.ಪಿ, ಎಂ.ಎಲ್.ಎ ಎಂ.ಎಲ್.ಸಿ ಅನುದಾನ ಕೂಡ ದೊರೆತಿದೆ. ದೇವಾಲಯ ನಿರ್ಮಾಣಕ್ಕೆ ಅಡಿಪಾಯ ಕಾರ್ಯ ಕೂಡ ನಡೆದಿದೆ. ದೇವಾಲಯ ನಿರ್ಮಾಣಕ್ಕೆ ಅಗತ್ಯ ಕಲ್ಲು ಮತ್ತಿತರ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ಆದರೆ ದೇವಾಲಯ ಜಾಗಕ್ಕೆ ಹೊಂದಿಕೊAಡAತಿರುವ ಅಡಿಕೆ ತೋಟಕ್ಕೆ ಸಂಪರ್ಕ ಕಲ್ಪಿಸುವ ದಾರಿ ನಿರ್ಮಾಣಕ್ಕೆ ದೇವಾಲಯ ಜಾಗ ಒದಗಿಸಬೇಕೆಂದು ನಿವೃತ್ತ ಅಧಿಕಾರಿ ಪಟ್ಟು ಹಿಡಿದು ಅನಗತ್ಯ ಕಿರುಕುಳ ನೀಡುತ್ತಿರುವ ಕಾರಣ ದೇವಾಲಯ ಜೀರ್ಣೋದ್ಧಾರ ವಿಳಂಬವಾಗುತ್ತಿದೆ ಎಂದು ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಸಂಡ ರಮೇಶ್ ಅವರು ಮಾಧ್ಯಮಗಳೊಂದಿಗೆ ಮಾಹಿತಿ ನೀಡಿದರು.

ಇಲ್ಲಿ ಗ್ರಾಮ ಪಂಚಾಯಿತಿ ಮೂಲಕ ಸುಸಜ್ಜಿತ ಕಾಂಕ್ರಿಟ್ ರಸ್ತೆ ಕೂಡ ನಿರ್ಮಿಸಲಾಗಿದೆ. ಆದರೂ ಕೂಡ ದೇವಾಲಯ ಜಾಗದ ಮೇಲೆ ಕಣ್ಣು ಹಾಕಿ ನಮ್ಮ ವಿರುದ್ಧ ಅರಣ್ಯ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಬ್ರಿಟೀಷರ ಕಾಲದಲ್ಲೇ ಈ ದೇವಾಲಯಕ್ಕೆ ದಾನವಾಗಿ ಜಾಗ ದೊರೆತಿರುವ ಬಗ್ಗೆ ನಮ್ಮಲ್ಲಿ ದಾಖಲೆಯಿದೆ. ಯಾವುದೇ ಇಲಾಖೆಯಿಂದ ನಮಗೆ ಅಡಚಣೆ ಇಲ್ಲ. ಇದೇ ರೀತಿ ಕಿರುಕುಳ ಮುಂದುವರಿದರೆ ಸಮಿತಿ ವತಿಯಿಂದ ಎಸ್ಪಿ ಹಾಗೂ ಡಿಸಿಗೆ ದೂರು ನೀಡಲಾಗುವುದು ಎಂದು ಸಮಿತಿಯ ನಿರ್ದೇಶಕರಾದ ದಾಸಂಡ ಜಗದೀಶ್ ಮಾದಪ್ಪ, ಬಿ.ಎಸ್ ಬಾಲಕೃಷ್ಣ ರೈ, ಬಿ.ಎಸ್ ಜಗನ್ನಾಥ ರೈ ಮತ್ತಿತರರು ತಿಳಿಸಿದರು. ಈ ಸಂದರ್ಭ ಸಮಿತಿ ನಿರ್ದೇಶಕರಾದ ರಿಜೇಶ್, ಕಿರಣ, ಜೀವನ್, ಈರಪ್ಪ, ಕುಮಾರ್, ಶಿವಪ್ಪ, ರುಕ್ಮಯ್ಯ, ಮಹೇಶ್, ಶರವಣ, ವಿಕ್ರಂ, ಸುಜು, ಸುನಿಲ್, ಪೆಮ್ಮಯ್ಯ, ಆಕಾಶ್, ರಾಜ, ನಂದ, ಪೊನ್ನಪ್ಪ, ಮಹೇಶ್, ರಮೇಶ್, ಬಸವರಾಜ, ಉಣ್ಣಿ, ಜೀವನ್, ಚಂದ್ರ, ಚೇತನ್, ಶೇಖರ್, ಮತ್ತಿತರರು ಇದ್ದರು.