ಐಗೂರು, ಫೆ. ೨೫: ಭಾರತ ಧರ್ಮದ ದೇಶವಾಗಬೇಕು, ಶಿವಾಜಿಯ ಮನೋ ಇಚ್ಛೆಯಂತೆ ಗೋ ಹತ್ಯೆಯ ನಿಷೇಧದ ಹೋರಾಟಕ್ಕೆ ಯುವಕರು ಶ್ರಮಿಸಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ದೀಪಕ್ ಅವರು ಕರೆ ನೀಡಿದರು.

ಅವರು ಐಗೂರಿನಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾರಾಷ್ಟçದ ಶಿವನೇರಿ ಕೋಟೆಯಲ್ಲಿ ಸಹಾಜಿ ಬೋಸಲೆ, ಜೀಜಾಬಾಯಿ ದಂಪತಿ ಪುತ್ರನಾಗಿ ಜನಿಸಿದ ಶಿವಾಜಿ, ಕೇವಲ ಯೋಧರಾಗಿರಲಿಲ್ಲ ಹಿಂದೂ ಧರ್ಮದ ಸಂಸ್ಕೃತಿ, ರಕ್ಷಣೆ ಮತ್ತು ಮತಾಂತರಕ್ಕೆ ವಿರೋಧ ವ್ಯಕ್ತಪಡಿಸಿದ ಮಹಾನ್ ನಾಯಕನಾಗಿದ್ದರು. ಇತ್ತೀಚೆಗೆ ಜಿಲ್ಲೆಗೆ ಅಕ್ರಮ ಬಾಂಗ್ಲಾ ವಲಸಿಗರು ಆಗಮಿಸಿ ಗೋ ಹತ್ಯೆ ಮತ್ತು ಮಾದಕ ವಸ್ತುಗಳ ಜಾಲದಲ್ಲಿ ತೊಡಗಿ ಜಿಲ್ಲೆಗೆ ಕಂಟಕವಾಗಿದ್ದಾರೆ. ಈ ಸಂಬAಧ ಸೋಮವಾರಪೇಟೆಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಐಗೂರಿನ ಯುವಕರು ಭಾಗವಹಿಸಬೇಕೆಂದರು.

ಪ್ರಾರAಭದಲ್ಲಿ ಶಿವಾಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ನಮನ ಸಲ್ಲಿಸಲಾಯಿತು. ಶಿವಾಜಿ ಜಯಂತಿಯ ಪ್ರಯುಕ್ತ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ, ದ್ವಿತೀಯ ಸ್ಥಾನಗಳಿಸಿದ ತಂಡಗಳಿಗೆ ದಾನಿಗಳಿಂದ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಉಪಹಾರದ ವ್ಯವಸ್ಥೆಗೆ ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಕಿರುಗಂದೂರು ಸಹಕಾರ ನೀಡಿದರು. ಸಜಿ ಭರತ್ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಅಶೋಕ್ ಕುಮಾರ್, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎ ಪ್ರಭಾಕರ, ಸಜಿ ಭರತ್, ಯತೀಶ್ ರೈ, ವಿಶ್ವ ಪೂಜಾರಿ, ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ, ಜಿಲ್ಲಾ ಯುವ ಘಟಕ ಅಧ್ಯಕ್ಷ ವಸಂತ್, ಭಗತ್ ಸಿಂಗ್ ಬಳಗ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.