ಮಡಿಕೇರಿ, ಫೆ. ೨೩: ಭಾರತದಲ್ಲಿ ಉತ್ತಮ ಉದ್ದೇಶಕ್ಕಾಗಿ ದಾನ ನೀಡುವವರ ಸಂಖ್ಯೆ ಕಡಿಮೆಯಾಗಿಲ್ಲ.. ಆದರೆ ಈ ರೀತಿ ನೀಡಿದ ದಾನ ಸದ್ಬಳಕೆ ಆಗುವಂತೆ ನೋಡಿಕೊಳ್ಳುವ ಕರ್ತವ್ಯ ದಾನ ಸ್ವೀಕರಿಸಿದವರ ಮೇಲಿದೆ ಎಂದು ಬೆಂಗಳೂರಿನ ಪೀಣ್ಯ ರೋಟರಿ ಸಂಸ್ಥೆಯ ಪ್ರಮುಖ ಮಾಜಿ ಗವರ್ನರ್ ನಾಗೇಂದ್ರ ಪ್ರಸಾದ್ ಹೇಳಿದರು.

ನಗರದ ರೋಟರಿ ಸಭಾಂಗಣದಲ್ಲಿ ರೋಟರಿಯ ೧೨೧ ನೇ ದಿನಾಚರಣೆ ಸಂದರ್ಭದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಯುಕ್ತಾಶ್ರಯದಲ್ಲಿ ೨೨ ಮಂದಿ ವಿಶೇಷ ಚೇತನರಿಗೆ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರವನ್ನು ಉದ್ಘಾಟಿಸಿ ನಾಗೇಂದ್ರ ಪ್ರಸಾದ್ ಮಾತನಾಡಿದರು.

ಭಾರತದಲ್ಲಿ ದಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ದಾನಿಗಳು ತಾವು ಶ್ರಮಪಟ್ಟು ಗಳಿಸಿದ ಸಂಪಾದನೆಯನ್ನು ದಾನವಾಗಿ ನೀಡಿದ ಸಂದರ್ಭ ಆ ಹಣ ಎಷ್ಟರ ಮಟ್ಟಿಗೆ ಉತ್ತಮ ಕಾರ್ಯಗಳಿಗೆ ವಿನಿಯೋಗಿಸಲ್ಪಡುತ್ತದೆ ಎಂಬುದನ್ನು ಗಮನಿಸುತ್ತಾರೆ. ಹಾಗಾಗಿ ಲಭಿಸಿದ ಕೊಡುಗೆಯನ್ನು ಸಮರ್ಪಕವಾಗಿ ಬಳಕೆ ಮಾಡುವುದು ದಾನ ಪಡೆದ ವ್ಯಕ್ತಿಗಳ ಜವಾಬ್ದಾರಿ ಎಂದರು. ಪೀಣ್ಯ ರೋಟರಿ ಸಂಸ್ಥೆ ಮೂಲಕ ೨೨ ವರ್ಷಗಳಿಂದ ಕೃತಕ ಕಾಲು, ಕೈ ಜೋಡಣಾ ಶಿಬಿರ ಆಯೋಜಿಸಲ್ಪಡುತ್ತಿದ್ದು, ಪ್ರತೀ ವμð ೧೦ ದಿನ ಆಯೋಜಿತ ಶಿಬಿರದಲ್ಲಿ ೧ ಕೋಟಿ ರೂ ವೆಚ್ಚದಲ್ಲಿ ೨,೫೦೦ ಜನರಿಗೆ ಕೃತಕ ಕೈ, ಕಾಲು ಜೋಡಣೆ ಮಾಡಲಾಗುತ್ತಿದೆ ಎಂದೂ ನಾಗೇಂದ್ರ ಪ್ರಸಾದ್ ಮಾಹಿತಿ ನೀಡಿದರು.ರೋಟರಿ ಜಿಲ್ಲೆ ೩೧೮೧ ನ ಚುನಾಯಿತ ಗವ£ðರ್ ಯಶಸ್ವಿ ಸೋಮಶೇಖರ್ ಮಾತನಾಡಿ, ರೋಟರಿಯ ಈ ವμðದ ಧ್ಯೇಯವಾಕ್ಯವಾದ ಒಳಿತಿಗಾಗಿ ಒಂದಾಗೋಣ ಎಂಬAತೆ ರೋಟರಿ ಸದಸ್ಯರೆಲ್ಲರೂ ಸಮಾಜಕ್ಕೆ ಒಳಿತುಂಟುಮಾಡುವ ಉದ್ದೇಶದಿಂದ ಒಂದಾಗಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ ಎಂದರು.

ಕೊಡಗು ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖಾಧಿಕಾರಿ ವಿಮಲ ಮಾತನಾಡಿ, ಸಮಾಜದ ಜನತೆ, ದುರ್ಬಲರು, ಅಸಹಾಯಕರನ್ನು ಗುರುತಿಸಿ ಅವರ ಸೇವೆಗೆ ಮುಂದಾಗುವ ರೋಟರಿಯಂತಹÀ ಸೇವಾ ಸಂಸ್ಥೆಗಳ ಪಾತ್ರ ಶ್ಲಾಘನೀಯ ಎಂದರು. ಅನೇಕರ ಪರಿಶ್ರಮದಿಂದಾಗಿ ತಾವು ಪಡೆದಿರುವ ಸಾಧನ ಸಲಕರಣೆಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಸ್ವಾಗತಿಸಿ, ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ ವಂದಿಸಿದರು. ರೋಟರಿ ವಲಯ ೬ ರ ಸಹಾಯಕ ಗವರ್ನರ್ ಧಿಲನ್ ಚಂಗಪ್ಪ, ವಲಯ ಸೇನಾನಿ ಕಾರ್ಯಪ್ಪ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಸಂಚಾಲಕ ಅಂಕಾಚಾರಿ ವೇದಿಕೆಯಲ್ಲಿದ್ದರು, ಯೋಜನೆಯ ಸಂಚಾಲಕ ಡಾ.ಚೆರಿಯಮನೆ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ಕೃತಕ ಕೈ, ಕಾಲು ಉತ್ಪಾದನೆಯ ಮೈಸೂರಿನ ಪುನಶ್ಚೇತನ ಸಂಸ್ಥೆಯ ಸುಂದರೇಶ್ ಅವರನ್ನು ಸನ್ಮಾನಿಸಲಾಯಿತು. ದಾನಿಗಳಾದ ಶ್ರೀಹರಿ, ಅಂಬೆಕಲ್ ವಿನೋದ್, ಪ್ರಮೋದ್ ಕುಮಾರ್ ರೈ, ಪ್ರಸಾದ್ ಗೌಡ, ರತ್ನಾಕರ್ ರೈ, ಬಿ.ಕೆ. ಕಾರ್ಯಪ್ಪ, ಜಿ.ಆರ್. ರವಿಶಂಕರ್ ಅಶೋಕ್ ಪಿ.ವಿ. ಹಾಜರಿದ್ದರು.

ಕೃತಕಕಾಲು ಪಡೆದವರ ಭಾವನಾತ್ಮಕ ಮಾತುಗಳು

ಆಗಸದಲ್ಲಿ ಸ್ವಚ್ಚಂದವಾಗಿ ಹಾರಾಡುತ್ತಿರುವ ಹಕ್ಕಿಗೆ ರೆಕ್ಕೆಯೊಂದು ಇಲ್ಲದೇ ಆದಾಗ ಅದು ಅನುಭವಿಸುವ ಯಾತನೆಯಂತೆ ನಾವೂ ಕೂಡ ಕಾಲು ಕಳೆದುಕೊಂಡು ಪಾಡು ಪಟ್ಟೆವು. ಆದರೆ ಇದೀಗ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ಕೃತಕ ಕಾಲು ದೊರಕಿದ್ದು ಹಕ್ಕಿಗೆ ಮತ್ತೆ ರೆಕ್ಕೆ ದೊರಕಿದಷ್ಟೇ ಸಂತೋಷವಾಗಿದೆ. ಮನುಷ್ಯನಿಗೆ ಅಂಗಾAಗ ಇಲ್ಲದೇ ಹೋದಾಗ ಆತನಿಗೆ ಆಗುವ ಸಂಕಟ ಅನುಭವಿಸಿದವರಿಗೆ ಗೊತ್ತು. ಕೃತಕ ಕಾಲು ನನ್ನ ಪಾಲಿಗೆ ಹೊಸ ಜೀವನವನ್ನೇ ತಂದುಕೊಟ್ಟಿದೆ ಎಂದು ಒಂದೂವರೆ ವರ್ಷಗಳ ಹಿಂದೆ ಮೈಸೂರಿನಲ್ಲಿ ರೈಲು ಹತ್ತುವ ಸಂದರ್ಭ ಆಕಸ್ಮಿಕವಾಗಿ ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡ ಮಾಯಮುಡಿ ಗ್ರಾಮದ ಮೋಹನ್ ಕೃತಕ ಕಾಲು ಪಡೆದ ಬಳಿಕ ತಮ್ಮ ಅನುಭವವನ್ನು ಭಾವನಾತ್ಮಕವಾಗಿ ಹೇಳಿಕೊಂಡರು.

ಚೆಟ್ಟಿಮಾನಿ ಗ್ರಾಮದ ೭೬ ವರ್ಷದ ಮಾಜಿ ಸೈನಿಕ ಈಶ್ವರ ಮಾತನಾಡಿ, ಕಾಲುಕಳೆದುಕೊಂಡ ಸಂದರ್ಭ ನಮಗೆ ಯಾರೂ ಇಲ್ಲ ಎಂಬ ನೋವು ಇದ್ದ ಸಂದರ್ಭ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯವರು ಕೃತಕ ಕಾಲಿನ ಮೂಲಕ ಮತ್ತೆ ಆತ್ಮಸ್ಥೆರ್ಯ ತುಂಬಿದ್ದಾರೆ ಎಂದು ನುಡಿದರು. ವಿವಿಧ ಕಾರಣಗಳಿಂದ ಕಾಲು ಕಳೆದುಕೊಂಡ ೧೯ ಮಂದಿ ಮತ್ತು ಕೈ ಕಳೆದುಕೊಂಡ ಈರ್ವರು ಕೃತಕ ಕೈ, ಕಾಲು ಅಳವಡಿಸುತ್ತಿರುವಂತೆಯೇ ಭಾವುಕರಾದ ದೃಶ್ಯ ಸಮಾರಂಭದಲ್ಲಿ ಸೇರಿದ್ದವರ ಕಣ್ಣಾಲಿಗಳನ್ನೂ ತೇವಗೊಳಿಸಿತು.