ಗೋಣಿಕೊಪ್ಪಲು, ಫೆ. ೨೩: ರಾಷ್ಟಿçÃಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ದಕ್ಷಿಣ ಕೊಡಗಿನ ಕಾನೂರಿನಲ್ಲಿ ಹಿಂದೂ ಸಂಗಮ ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾನೂರು ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ನಡೆದ ಹಿಂದೂ ಸಂಗಮ ಕಾರ್ಯಕ್ರಮದ ಬೃಹತ್ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಸಮಾಗಮಗೊಂಡರು.

ಕಾರ್ಯಕ್ರಮದ ಅಂಗವಾಗಿ ಕಾನೂರು ಕೇಸರಿ ಭಾವುಟಗಳು, ಬಂಟಿAಗ್ಸ್ಗಳು ರಾರಾಜಿಸುತ್ತಿದ್ದವು. ಮುಖ್ಯರಸ್ತೆಯ ಎರಡು ಬದಿಯಲ್ಲಿ ಸ್ವಾಗತ ಕಮಾನುಗಳು ನಿರ್ಮಿಸಲಾಗಿದ್ದು, ಪಟ್ಟಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಬೆಳಿಗ್ಗೆ ನಗರದ ಪ್ರಾಥಮಿಕ ಶಾಲಾ ಮೈದಾನದ ರಸ್ತೆಯ ಸಮೀಪದಿಂದ ಮೆರವಣಿಗೆ ಆರಂಭವಾಯಿತು. ವಾಲಗ, ಬುಡಕಟ್ಟು ಜನಾಂಗದವರ ಸಾಂಪ್ರದಾಯಿಕ ಕುಣಿತದೊಂದಿಗೆ ಬೃಹತ್ ಶೋಭಾಯಾತ್ರೆಯಲ್ಲಿ ಸಾಂಸ್ಕೃತಿಕ ವೈಭವ ಮೇಳೈಸಿತು. ಮುಖ್ಯ ರಸ್ತೆಯಲ್ಲಿ ಶೋಭಾಯಾತ್ರೆ ಸಾಗಿ ನಂತರ ಕಾನೂರು ಪ್ಯಾಕ್ಸ್ನ ಅಮೃತ ಮಹೋತ್ಸವ ಸಭಾಂಗಣದ ಆವರಣದಲ್ಲಿ ಸಂಪನ್ನಗೊAಡಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಾಜಿ ಸೈನಿಕ ಸಂಘದ ಜಿಲ್ಲಾಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ, ಹಿಂದೂಗಳಲ್ಲಿ ಒಗ್ಗಟ್ಟು ಮೂಡಿಸಲು ಹಿಂದೂ ಸಂಗಮ ಕಾರ್ಯಕ್ರಮವು ರಾಷ್ಟçದಾದ್ಯಂತ ನಡೆಯುತ್ತಿದೆ. ಜಾತಿ, ಧರ್ಮವನ್ನು ಬದಿಗೊತ್ತಿ ನಾವೆಲ್ಲರೂ ಹಿಂದೂ, ಒಂದು ಎಂಬ ಭಾವನೆ ಪ್ರತಿ ಭಾರತೀಯರಲ್ಲಿ ಮೂಡಬೇಕು. ನಮ್ಮ ಒಗ್ಗಟ್ಟು ಕಾಪಾಡಿಕೊಳ್ಳಬೇಕು. ಕೇವಲ ಜಾತಿಗೆ ಸೀಮಿತಗೊಂಡು ಕೆಲಸ ನಿರ್ವಹಿಸಬಾರದು ಎಂದು ಕರೆ ನೀಡಿದರು. ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ಮಂಗಳೂರಿನ ಗೋ ರಕ್ಷಣಾ ಸಮಿತಿಯ ಗಂಗಾಧರ್ ಮಾತನಾಡಿ, ಭಾರತ ದೇಶದ ಮೂಲೆ ಮೂಲೆಗಳಲ್ಲಿ ಸಂಘದ ಶಾಖೆಗಳು ನಡೆಯುತ್ತಿವೆ. ಭಾರತದಲ್ಲಿರುವ ಹಿಂದೂಗಳು ಪ್ರಕೃತಿಯ ಆರಾಧಕರಾಗಿದ್ದಾರೆ. ಹಿರಿಯರನ್ನು ಗೌರವಿಸುವ ಬಗ್ಗೆ ಜಾಗೃತಿ ಮೂಡಿಸಬೇಕು. ಭಾರತ ಎಲ್ಲರಿಗೂ ಗೌರವವನ್ನು ನೀಡುವ ದೇಶವಾಗಿದೆ. ಆರ್‌ಎಸ್‌ಎಸ್ ಸಂಘಟನೆಯ ಮೂಲ ಉದ್ದೇಶ ಹಿಂದೂಗಳನ್ನು ಜಾಗೃತಿಗೊಳಿಸುವುದಾಗಿದೆ. ಪ್ರಪಂಚಕ್ಕೆ ಶ್ರೇಷ್ಠ ವಿಜ್ಞಾನಿಗಳನ್ನು ನೀಡಿದ ಕೀರ್ತಿ ಭಾರತಕ್ಕಿದೆ. ಧರ್ಮ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು. ಹೆತ್ತವರು ನಿಜವಾದ ದೇವರಾಗಿದ್ದು, ಅವರುಗಳನ್ನು ಗೌರವಿಸಬೇಕೆಂದು ಕರೆ ನೀಡಿದರು.

ನಿವೃತ್ತ ಪೊಲೀಸ್ ಅಧಿಕಾರಿ ಗಣೇಶ್, ಕಾಫಿ ಬೆಳೆಗಾರರಾದ ಚೆಪ್ಪುಡೀರ ನವೀನ್ ಅಯ್ಯಪ್ಪ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯ ಪ್ರಮುಖರಾದ ಕಾಡ್ಯಮಾಡ ಭರತ್, ಮಚ್ಚಮಾಡ ಬೋಪಣ್ಣ, ಚಿರಿಯಪಂಡ ಪವನ್ ಬಿದ್ದಪ್ಪ, ಮಾಚಿಮಾಡ ರವೀಂದ್ರ, ರಾಜೀವ್ ಬೋಪಯ್ಯ, ಸುಳ್ಳಿಮಾಡ ಸಂಪತ್, ಚಿರಿಯಪಂಡ ಈಶ, ಎಸ್.ಎಂ. ಬಸಪ್ಪ, ವಿ.ಎನ್. ದಿನೇಶ್, ಕೆ.ಆರ್. ಸುಮ, ಸುಳ್ಳಿಮಾಡ ರಾಕೇಶ್, ವಿಜಯ್, ರಾಜೇಶ್, ಮುಕ್ಕಾಟಿರ ಸೋನು, ಸುನೀಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಆರಂಭದಲ್ಲಿ ಉಳುವಂಗಡ ಲೋಹಿತ್ ಭೀಮಯ್ಯ ವಂದೇ ಮಾತರಂ ಗೀತೆ ಹಾಡಿದರು. ಚಿರಿಯಪಂಡ ಪವನ್ ಬಿದ್ದಪ್ಪ ಸ್ವಾಗತಿಸಿ, ಶಿಲ್ಪಾ ನಿರೂಪಿಸಿ, ವಿವೇಕ್ ವಂದಿಸಿದರು.