ಮಡಿಕೇರಿ, ಫೆ. ೨೩: ಕನ್ನಡ ಸಾಹಿತ್ಯ ಲೋಕದ ಅತ್ಯಂತ ಜನಪ್ರಿಯ ತ್ರಿಪದಿ ಕವಿ ಸರ್ವಜ್ಞ ಅವರು ಬರೆದಿರುವ ಪುಸ್ತಕ/ಹೊತ್ತಿಗೆಯನ್ನು ಎಲ್ಲಾ ಭಾಷೆಗಳಿಗೂ ಭಾಷಾಂತರ ಮಾಡಬೇಕು ಎಂದು ಕುಶಾಲನಗರ ಅನುಗ್ರಹ ಪದವಿ ಕಾಲೇಜಿನ ಪ್ರಾಧ್ಯಾಪಕಿ ಲೀಲಾಕುಮಾರಿ ತೊಡಿಕಾನ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಇವರ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ನಡೆದ ‘ಕವಿ ಸರ್ವಜ್ಞ ಜಯಂತಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ವಜ್ಞ ಅವರು ಬರೆದಿರುವ ತ್ರಿಪದಿ ಪದ್ಯಗಳು ಸಾರ್ವಕಾಲಿಕವಾಗಿದ್ದು, ಇಂಗ್ಲೀಷ್, ಹಿಂದಿ ಸೇರಿದಂತೆ ರಾಷ್ಟçದ ಎಲ್ಲಾ ಭಾಷೆಗಳಿಗೂ ಭಾಷಾಂತರಿಸಿದಲ್ಲಿ ಪ್ರತಿಯೊಬ್ಬರಿಗೂ ತಲುಪಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಲೀಲಾಕುಮಾರಿ ತೊಡಿಕಾನ ಹೇಳಿದರು. ತ್ರಿಪದಿಗಳ ಬ್ರಹ್ಮ, ಚಕ್ರವರ್ತಿ ಎಂಬ ಬಿರುದು ಪಡೆದಿರುವ ಸರ್ವಜ್ಞ ಅವರು ಶ್ರೇಷ್ಠ ದಾರ್ಶನಿಕ, ಮಹಾನ್ ಮಾನವತಾವಾದಿಯಾಗಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ಮೂರು ಸಾಲಿನಲ್ಲಿ ಪದ್ಯಗಳನ್ನು ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಬರೆದಿರುವುದು ಶ್ಲಾಘನೀಯ ಎಂದರು. ಕುಲಾಲ ಕುಂಬಾರ ಸಂಘದ ಸ್ಥಾಪಕ ಅಧ್ಯಕ್ಷೆ ಮುತ್ತಮ್ಮ ಮಾತನಾಡಿ, ೨೦೧೫ ರಿಂದ ಕವಿ ಸರ್ವಜ್ಞ ಅವರ ಜಯಂತಿಯನ್ನು ಸರ್ಕಾರ ಆಚರಿಸಿಕೊಂಡು ಬರುತ್ತಿದೆ. ಕವಿ ಸರ್ವಜ್ಞ ಜಯಂತಿ ಸಂದರ್ಭದಲ್ಲಿ ಕುಲಾಲ ಕುಂಬಾರ ಸಂಘದವರು ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟವನ್ನು ಆಯೋಜಿಸುವಂತಾಗಬೇಕು ಇದಕ್ಕೆ ಜಿಲ್ಲಾಡಳಿತದ ಸಹಕಾರ ಅತ್ಯಗತ್ಯ ಎಂದು ಕೋರಿದರು.
ಕುಲಾಲ/ಕುಂಬಾರ ಸಂಘದ ಮಾಜಿ ಅಧ್ಯಕ್ಷ ಎಂ.ಡಿ. ನಾಣಯ್ಯ ಮಾತನಾಡಿ, ಕವಿ ಸರ್ವಜ್ಞರ ಜಯಂತಿಯನ್ನು ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದ್ದು, ಸರ್ವಜ್ಞರ ಹೆಸರಿನಲ್ಲಿ ಎಲ್ಲರೂ ಸಂಘಟಿತರಾಗಬೇಕು ಎಂದು ಹೇಳಿದರು.
ಕುಲಾಲ-ಕುಂಬಾರ ಸಂಘದ ಕಾರ್ಯದರ್ಶಿ ಅರುಣ್ ಕುಮಾರ್ ಕೂಡಿಗೆ ಮಾತನಾಡಿದರು. ಕುಲಾಲ-ಕುಂಬಾರ ಸಂಘದ ಜಿಲ್ಲಾ ಅಧ್ಯಕ್ಷ ಕೆ. ಕುಶಾಲಪ್ಪ ಮೂಲ್ಯ ಮಾತನಾಡಿ, ಕವಿ ಸರ್ವಜ್ಞ ಅವರು ಹಾವೇರಿ ಜಿಲ್ಲೆಯ ಹಿರೆಕೆರೂರು ತಾಲೂಕು ಅಂಬಲೂರು ಗ್ರಾಮದಲ್ಲಿ ಜನಿಸಿ, ಕನ್ನಡ ಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿದ್ದಾರೆ ಎಂದರು.
ಕುಲಾಲ/ಕುAಬಾರ ಮಹಿಳಾ ಸಂಘದ ಅಧ್ಯಕ್ಷೆ ಕಾಂತಿಮಣಿ, ಚಂದ್ರಶೇಖರ್ ಕುಲಾಲ, ಗಿಡ್ಡಪ್ಪ, ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಸ್ವಾಗತಿಸಿದರು, ಕಲಾವತಿ ಮತ್ತು ತಂಡದವರು ನಾಡಗೀತೆ ಹಾಡಿದರು. ಸುಂಟಿಕೊಪ್ಪ ಪಿಡಿಓ ವಿ.ಜಿ. ಲೋಕೇಶ್ ನಿರೂಪಿಸಿ, ವಂದಿಸಿದರು.