ಮಡಿಕೇರಿ, ಫೆ. ೨೩: ನೆಲ್ಯಹುದಿಕೇರಿಯ ಅಭ್ಯತ್‌ಮಂಗಲ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಕುಶಾಲನಗರ ಐನ್ ಆಪ್ಟಿಕಲ್ಸ್ ಅಪ್ರೋಮೆಟ್ರಿ ಕ್ಲಿನಿಕ್ ಆಶ್ರಯದಲ್ಲಿ ಅಭ್ಯತ್‌ಮಂಗಲ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಚಿಕಿತ್ಸೆ ಶಿಬಿರವನ್ನು ಕೊಡಗು ಜಿಲ್ಲಾ ಜೆಡಿಎಸ್ ಸಾಮಾಜಿಕ ಜಾಲತಾಣ ಉಪಾಧ್ಯಕ್ಷರಾದ ನೆಲ್ಯಹುದಿಕೇರಿ ಜೆಡಿಎಸ್ ಗ್ರಾಮ ಸಮಿತಿ ಅಧ್ಯಕ್ಷರಾದ ಶಿಯಾಬುದ್ದೀನ್ ವಿ.ಪಿ ಎಸ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಂಸ್ಥೆಯು ನಡೆಸುತ್ತಿರುವÀ ಕಣ್ಣಿನ ತಪಾಸಣೆ ಹಾಗೂ ಉಚಿತ ಸೇವೆಯನ್ನು ಗ್ರಾಮಸ್ಥರು ಸದುಪಯೋಗ ಪಡೆದುಕೊಳ್ಳಬೇಕೆಂದರು.

೫೦ಕ್ಕಿಂತಲೂ ಅಧಿಕ ಮಂದಿ ಉಚಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡರು.

ಸAಸ್ಥೆಯ ಮುಖ್ಯಸ್ಥರಾದ ಫಾಸಿಲ್ ರಹೀಮ್, ಅನ್ಸಾರ್, ಅನ್ಸಾರುದ್ದೀನ್, ಶಿಫಾನತ್, ಫಾತಿಮತ್ ಅಫೀಫ ಇಬ್ರಾಹಿಂ, ಉಪಸ್ಥಿತರಿದ್ದರು.