ಚೆಯ್ಯಂಡಾಣೆ, ಫೆ. ೨೨: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇ ತಾಲೂಕು ಕೊಳಕೇರಿ ಮುಖ್ಯರಸ್ತೆಯ ನೂರಂಬಡ ಗ್ರಾಮದಲ್ಲಿ ನಾಪೋಕ್ಲು ಗ್ರಾ.ಪಂ. ವತಿಯಿಂದ ನಿರ್ಮಿಸಿದ ನೂತನ ಪ್ರಯಾಣಿಕರ ತಂಗುದಾಣವನ್ನು ಲೋಕಾರ್ಪಣೆ ಗೊಳಿಸಲಾಯಿತು.

ನಾಪೋಕ್ಲು ಗ್ರಾ.ಪಂ. ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ತಂಗುದಾಣವನ್ನು ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆಗೊಳಿಸಿದರು. ಸ್ಥಳೀಯ ನಿವಾಸಿಗಳ ಮನವಿ ಮೇರೆಗೆ ಪಂಚಾಯಿತಿಯ ೧೫ನೇ ಹಣಕಾಸು ಯೋಜನೆಯಡಿಯಲ್ಲಿ ಬಿಡುಗಡೆಯಾದ ಅನುದಾನದಿಂದ ನೂತನ ತಂಗುದಾಣವನ್ನು ನಿರ್ಮಿಸಲಾಗಿದ್ದು, ಸಾರ್ವಜನಿಕರು ಶುಚಿತ್ವವನ್ನು ಕಾಪಾಡಿಕೊಂಡು ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ನಾಪೋಕ್ಲು ಸಹಕಾರ ಸಂಘದ ನಿರ್ದೇಶಕ ಎಚ್.ಎ. ಬೊಳ್ಳು ಮಾತನಾಡಿ, ಹಲವು ಸಮಯದ ಬೇಡಿಕೆ ಇದೀಗ ಈಡೇರಿದೆ. ತಂಗುದಾಣದಿAದ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕುಲ್ಲೇಟಿರ ಹೇಮಾವತಿ, ಮಹಮ್ಮದ್ ಕುರೇಶಿ, ಕಾಳೆಯಂಡ ಸಾಬ ತಿಮ್ಮಯ್ಯ, ಕುಲ್ಲೇಟಿರ ಅರುಣ್ ಬೇಬ, ಟಿ.ಎ.ಮಹಮ್ಮದ್, ಲಲಿತಾ, ಗುತ್ತಿಗೆದಾರ ಉಂಬಾಯಿ, ಸ್ಥಳೀಯರಾದ ಉಮಾಲಕ್ಷಿö್ಮ, ಅಪ್ಪಾಜಿ ಚಂಗಪ್ಪ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಮತ್ತಿತರರು ಹಾಜರಿದ್ದರು