ಮಡಿಕೇರಿ, ಫೆ. ೨೨: ರೋಟರಿ ದಿನಾಚರಣೆ ಅಂಗವಾಗಿ ಮಡಿಕೇರಿಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ತಾ.೨೩ ರಂದು ಮಹಿಳೆಯರಿಗಾಗಿ ರಕ್ತದಾನ ಶಿಬಿರ ಹಾಗೂ ಕೃತಕ ಕೈಕಾಲು ಜೋಡಣಾ ಶಿಬಿರ ಆಯೋಜಿಸಲಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ನ ವೃತ್ತಿ ಸೇವಾ ಯೋಜನಾ ನಿರ್ದೇಶಕ ಡಾ.ಚೆರಿಯಮನೆ ಪ್ರಶಾಂತ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರನ್ನು ರಕ್ತದಾನಕ್ಕೆ ಪ್ರೇರೇಪಿಸುವ ನಿಟ್ಟಿನಲ್ಲಿ ಮಹಿಳೆಯರಿಗಾಗಿಯೇ ವಿಶೇಷವಾಗಿ ರಕ್ತದಾನ ಶಿಬಿರವನ್ನು ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿಸಲಾಗಿದೆ. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯ ಸಹಭಾಗಿತ್ವದಲ್ಲಿ ೨೨ ಮಂದಿಗೆ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರವನ್ನು ರೋಟರಿ ದಿನಾಚರಣೆ ಸಂದರ್ಭ ತಾ.೨೩ ರಂದು ನಗರದ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ರೋಟರಿ ಜಿಲ್ಲೆ ೩೦೯೨ ನ ಮಾಜಿ ಗವರ್ನರ್ ನಾಗೇಂದ್ರ ಪ್ರಸಾದ್, ಕೊಡಗು ವೈದ್ಯಕೀಯ ಕಾಲೇಜಿನ ರಕ್ತ ನಿಧಿ ಕೇಂದ್ರದ ಅಧಿಕಾರಿ ಡಾ.ಕರುಂಬಯ್ಯ, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ದಿಲನ್ ಚಂಗಪ್ಪ, ವಲಯ ಸೇನಾನಿ ಕಾರ್ಯಪ್ಪ ಸೇರಿದಂತೆ ರೋಟರಿ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೂ ಡಾ. ಪ್ರಶಾಂತ್ ಮಾಹಿತಿ ನೀಡಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ರೋಟರಿ ಜಿಲ್ಲಾ ಯೋಜನೆ ಅಂಗವಾಗಿ ಮಿಸ್ಟಿ ಹಿಲ್ಸ್ನಿಂದ ೨.೫೦ ಲಕ್ಷ ರೂ. ವೆಚ್ಚದಲ್ಲಿ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರ ಹಮ್ಮಿಕೊಳ್ಳಲಾಗಿದ್ದು ಈಗಾಗಲೇ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯಿAದ ಗುರುತಿಸಲಾದ ಫಲಾನುಭವಿಗಳಿಗೆ ಕೈ ಮತ್ತು ಕಾಲು ಜೋಡಣೆ ನಡೆಯಲಿದೆ ಎಂದರು. ಮಹಿಳಾ ರಕ್ತದಾನ ಶಿಬಿರದ ಸಂಚಾಲಕಿ ರಶ್ಮಿದೀಪಾ ಮಾತನಾಡಿ. ಅನೀಮಿಯಾ ಮತ್ತು ರಕ್ತದಾನದ ಪ್ರಯೋಜನದ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಿಸ್ಟಿಹಿಲ್ಸ್ ವತಿಯಿಂದ ಮಹಿಳೆಯರೇ ರಕ್ತದಾನ ಮಾಡುವ ವಿನೂತನ ಶಿಬಿರ ಆಯೋಜಿಸಲ್ಪಟ್ಟಿದೆ. ಮಹಿಳೆಯರು ಯಾಕೆ ರಕ್ತದಾನ ಮಾಡಬೇಕು ಎಂಬ ಬಗ್ಗೆ ಹಾಗೂ ಮಹಿಳೆಯರಲ್ಲಿ ರಕ್ತದಾನದ ಬಗೆಗಿರುವ ತಪ್ಪು ಕಲ್ಪನೆ ಹೋಗಲಾಡಿಸುವ ಉದ್ದೇಶದಿಂದ ಈ ವಿನೂತನ ಶಿಬಿರ ಆಯೋಜಿಸಲ್ಪಟ್ಟಿದೆ ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಮುಂದಿನ ಸಾಲಿನ ಕಾರ್ಯದರ್ಶಿ ಡಾ.ಚೇತನ್ ಮಾತನಾಡಿ, ಶೇ. ೫ ರಷ್ಟು ಪ್ರಮಾಣದಲ್ಲಿ ಮಾತ್ರ ಮಹಿಳೆಯರು ರಕ್ತದಾನ ಮಾಡಲು ಮುಂದಾಗುತ್ತಿದ್ದಾರೆ. ಸಾಕಷ್ಟು ತಪ್ಪು ತಿಳುವಳಿಕೆಗಳು ಇರುವುದೇ ಮಹಿಳೆಯರಲ್ಲಿ ರಕ್ತದಾನದ ಹಿಂಜರಿಕೆಗೆ ಕಾರಣವಾಗಿದೆ. ರಕ್ತದಾನದ ಮೂಲಕ ರಕ್ತ ಅಗತ್ಯವುಳ್ಳ ಮತ್ತೊಂದು ಜೀವವನ್ನು ಉಳಿಸುವ ಮಹತ್ವದ ಹೊಣೆಗಾರಿಕೆ ನಿಭಾಯಿಸುವುದರೊಂದಿಗೆ ರಕ್ತದಾನದಿಂದ ಪ್ರತೀಯೋರ್ವರೂ ತಮ್ಮಲ್ಲಿರುವ ಅನೇಕ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಕೊಡಗು ಸಂಚಾಲಕ ಅಂಕಾಚಾರಿ ಮಾತನಾಡಿ, ಕೃತÀಕ ಕೈಕಾಲು ಜೋಡಣೆ ಶಿಬಿರದ ಮೂಲಕ ೨೧ ಮಂದಿಗೆ ಹೊಸ ಜೀವನ ನೀಡುವ ಪ್ರಯತ್ನ ಮಾಡಲಾಗಿದೆ. ವಿವಿಧ ಕಾರಣಗಳಿಂದ ಕಾಲು, ಕೈ ಸ್ವಾಧೀನ ಇಲ್ಲದವರಿಗೆ ಕೃತಕವಾಗಿ ಕೈಕಾಲು ಜೋಡಿಸಿ ಅವರಲ್ಲಿಯೂ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ರೋಟರಿ ಸಹಯೋಗದಲ್ಲಿ ಮಾಡಲಾಗುತ್ತಿದೆ ಎಂದರು. ಕೃತಕ ಕೈಕಾಲು ಜೋಡಣೆಯಿಂದ ಸಾಮಾನ್ಯರಂತೆ ಭವಿಷ್ಯದಲ್ಲಿ ಜೀವನ ಸಾಗಿಸಲು ಸಾಧ್ಯವಿದೆ ಎಂದು ಅಂಕಾಚಾರಿ ನುಡಿದರು.

ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ವಿಶ್ವದ ೪೬ ಸಾವಿರ ದೇಶಗಳಲ್ಲಿ ೧೩ ಲಕ್ಷ ಸದಸ್ಯರನ್ನೊಳಗೊಂಡ ರೋಟರಿ ಸೇವಾ ಸಂಸ್ಥೆಯು ಅಮೇರಿಕಾ ಮೂಲದ ಪೌಲ್ ಹೇರೀಸ್ ಅವರಿಂದ ಸ್ಥಾಪನೆಯಾಗಿ ೧೨೧ ವರ್ಷಗಳಾದ ದಿನವನ್ನೇ ರೋಟರಿ ದಿನವನ್ನಾಗಿ ತಾ.೨೩ ರಂದು ಆಚರಿಸಲಾಗುತ್ತಿದೆ. ವಿಶ್ವದಲ್ಲಿಯೇ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ರೋಟರಿ ಮೊದಲ ಸ್ಥಾನ ಪಡೆದಿದ್ದು, ವಿಭಿನ್ನ ಮತ್ತು ಜನರಿಗೆ ಸೇವಾ ಯೋಜನೆಯಂಥ ಅರ್ಥಪೂರ್ಣ ಕಾಂiðಕ್ರಮಗಳ ಮೂಲಕ ರೋಟರಿ ದಿನಾಚರಣೆ ಆಯೋಜಿಸಲ್ಪಟ್ಟಿದೆ ಎಂದು ವಿವರಿಸಿದರು.