ವೀರಾಜಪೇಟೆ, ಫೆ. ೨೧: ಪಟ್ಟಣದಲ್ಲಿ ತಾ. ೨೫ ರಂದು ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿ ಅಧ್ಯಕ್ಷ ಕುಪ್ಪಂಡ ರಾಜೀವ್ ಕಾರ್ಯಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಾಜಪೇಟೆಯ ಮೂರು ಕಡೆಗಳಲ್ಲಿ ಶೋಭಾಯಾತ್ರೆ ನಡೆಯಲಿದೆ. ಬೆಳಿಗ್ಗೆ ೧೦ ಗಂಟೆಗೆ ಪಟ್ಟಣದ ತೆಲುಗರ ಬೀದಿಯ ಮಾರಿಯಮ್ಮ ಗುಡಿಯಿಂದ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊAದಿಗೆ ಶೋಭಾಯಾತ್ರೆ ಪ್ರಾರಂಭಗೊಳ್ಳಲಿದೆ. ಅದೇ ಸಮಯಕ್ಕೆ ಮೀನುಪೇಟೆ ಮುತ್ತಪ್ಪ ದೇವಾಲಯದಿಂದ, ಪಂಜರುಪೇಟೆ ಸರ್ವೋದಯ ಕಾಲೇಜಿನಿಂದ ಮತ್ತೊಂದು ತಂಡದ ಶೋಭಾಯಾತ್ರೆಯೂ ಹೊರಡಲಿದೆ.

ಮೀನುಪೇಟೆ ಶೋಭಾಯಾತ್ರೆ ಮತ್ತು ಪಂಜರುಪೇಟೆ ಶೋಭಾಯಾತ್ರೆಗಳು ಪಟ್ಟಣದ ಮಾಂಸ ಮಾರ್ಕೆಟ್ ಬಳಿ ಸಮಾಗಮಗೊಳ್ಳಲಿದೆ. ಮೂರು ಕಡೆಗಳಿಂದ ಹೊರಟ ಶೋಭಾಯಾತ್ರೆ ದೊಡ್ಡಟ್ಟಿ ಚೌಕಿ ಬಳಿ ಸಂಗಮಗೊAಡು ಎಫ್‌ಎಂಸಿ ರಸ್ತೆಯ ಮೂಲಕ ತಾಲೂಕು ಮೈದಾನದಲ್ಲಿ ಮುಕ್ತಾಯವಾಗಲಿದೆ ಎಂದು ವಿವರಿಸಿದರು.

ಅಂದಾಜು ೫ ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಭಾ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಕಲಾ ತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಸಂಯೋಜಕಿ ಮನೆಯಪಂಡ ಕಾಂತಿ ಸತೀಶ್ ಮಾತನಾಡಿ, ರಾಜಕೀಯ ರಹಿತವಾಗಿ ಈ ಕಾರ್ಯಕ್ರಮ ನಡೆಯಲಿದೆ. ಪಟ್ಟಣದ ಗಣಪತಿ ದೇವಾಲಯದ ಮುಂದೆ ಸಾಂಸ್ಕೃತಿಕ ನೃತ್ಯ ನಡೆಯಲಿದೆ. ಎಲ್ಲರ ಸಹಕಾರ ಅಗತ್ಯ ಎಂದು ಕೋರಿದರು.

ಗೋಷ್ಠಿಯಲ್ಲಿ ಸಂಯೋಜಕರಾದ ರೀನಾ ಪ್ರಕಾಶ್, ಅಂಜಪರವAಡ ಅನಿಲ್ ಮಂದಣ್ಣ, ಸಹ ಸಂಯೋಜಕ್ ಕೂತಂಡ ಸಚಿನ್ ಉಪಸ್ಥಿತರಿದ್ದರು.