ಮಡಿಕೇರಿ, ಫೆ. ೨೧: ಇತ್ತೀಚೆಗೆ ನಿಧನರಾದ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯೆ, ಕವಯತ್ರಿ ನಾಯಕಂಡ ಬೇಬಿ ಚಿಣ್ಣಪ್ಪರ ನಿಧನಕ್ಕೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಸಂತಾಪ ಸೂಚಿಸಲಾಯಿತು.
ಅಕಾಡೆಮಿ ಕಚೇರಿಯಲ್ಲಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೇಬಿ ಚಿಣ್ಣಪ್ಪರ ನಿಧನಕ್ಕೆ ಕಂಬನಿ ಮಿಡಿಯಲಾಯಿತು.
ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಮಾತನಾಡಿ, ಕೊಡವ ಕವನ, ಕತೆಗಳನ್ನು ಓದುಗರ ಮನಮುಟ್ಟುವ ರೀತಿಯಲ್ಲಿ ಬರೆಯುತ್ತಿದ್ದ ಬೇಬಿ ಚಿಣ್ಣಪ್ಪ ಅವರ ಅಗಲಿಕೆ ಕೊಡವ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ನಷ್ಟವನ್ನುಂಟುಮಾಡಿದೆ ಎಂದರು.
ಸದಸ್ಯ ನಾಪಂಡ ಗಣೇಶ್ ಮಾತನಾಡಿ, ಮೃಧು ಸ್ವಭಾವ ಹೊಂದಿದ್ದ ಬೇಬಿ ಚಿಣ್ಣಪ್ಪ ಅವರು ಅಕಾಡೆಮಿಯ ಕಾರ್ಯಕ್ರಮಗಳೆಂದರೆ ಅಭಿಮಾನದಿಂದ ಪಾಲ್ಗೊಳ್ಳುತ್ತಿದ್ದರೆಂದು ಸ್ಮರಿಸಿದರು.
ಸದಸ್ಯರಾದ ಕೊಂಡಿಜಮ್ಮನ ಎಂ. ಬಾಲಕೃಷ್ಣ, ನಾಯಂದಿರ ಆರ್. ಶಿವಾಜಿ, ಕುಡಿಯರ ಕಾವೇರಪ್ಪ ಮಾತನಾಡಿದರು.
ರಿಜಿಸ್ಟಾçರ್ ಚಿನ್ನಸ್ವಾಮಿ, ಅಕಾಡೆಮಿಯ ಸದಸ್ಯರುಗಳಾದ ಚೊಟ್ಟೆಯಂಡ ಸಂಜು ಕಾವೇರಪ್ಪ, ಕಂಬೆಯAಡ ಡೀನಾ ಬೋಜಣ್ಣ, ಪುತ್ತರಿರ ಪಪ್ಪು ತಿಮ್ಮಯ್ಯ, ಪಾನಿಕುಟ್ಟಿರ ಕೆ. ಕುಟ್ಟಪ್ಪ ಹಾಗೂ ಸಿಬ್ಬಂದಿ ಹಾಜರಿದ್ದರು