ಸುಂಟಿಕೊಪ್ಪ, ಫೆ. ೨೧: ಜನ್ಮ ಸಾರ್ಥಕವಾಗಲು ಸಂಸ್ಕಾರಯುತ ಜೀವನ ನಡೆಸುವುದು ಮುಖ್ಯ. ಸ್ವಾರ್ಥ ಜೀವನದಿಂದ ಬದುಕಿನ ನೆಮ್ಮದಿ ಹಾಳಾಗುತ್ತದೆ ಎಂದು ಶ್ರೀ ಕೋಡಿಮಠದ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ ಹೇಳಿದರು.
ಜಂಬೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ೧೨ನೇ ವರ್ಷದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮನುಕುಲ ಶ್ರೇಷ್ಠವಾದುದು. ಗಳಿಕೆಯ ಕಡೆ ಹೆಚ್ಚಿನ ಒತ್ತು ನೀಡದೆ ಸಂಸ್ಕಾರ ಸಹಿತವಾದ ಸ್ವಾರ್ಥ ರಹಿತ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ಧಾರ್ಮಿಕ ಪ್ರವಚನ ನೀಡಿದ ಶನಿವಾರಸಂತೆ ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ಧಲಿಂಗಾ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ಮೊದಲು ಮಾನವರಾಗಿ ಬದುಕಲು ಎಲ್ಲರೂ ಕಲಿಯಬೇಕು ಪಾಪ ಕಾರ್ಯದಲ್ಲಿ ಅಸಕ್ತಿ ಹೊಂದದೆ ಪುಣ್ಯ ಕಾರ್ಯದಲ್ಲಿ ತೊಡಗಬೇಕು. ಮಹಿಳೆಯರು ಮಕ್ಕಳಿಗೆ ಸಂಸ್ಕೃತಿ, ಆಚಾರ-ವಿಚಾರವನ್ನು ಕಲಿಸಲು ಮುಂದಾಗಬೇಕೆAದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಪ್ರತಿ ಊರಿನಲ್ಲಿ ದೇವಾಲಯ ಸ್ಥಾಪನೆಯಾಗಬೇಕು. ನಮ್ಮ ಆಚಾರ-ವಿಚಾರ, ಸಂಸ್ಕೃತಿಯನ್ನು ಉಳಿಸಲು ಮಠಾಧೀಶರುಗಳೊಂದಿಗೆ ಕೈಜೋಡಿಸಬೇಕು. ಹಿಂದೂ ಧರ್ಮದ ಬಗ್ಗೆ ಮಕ್ಕಳಲ್ಲಿ ಆರಿವು ಮೂಡಿಸುವ ಕಾರ್ಯವಾಗಬೇಕು ಎಂದರು.
ಅಧ್ಯಕ್ಷತೆಯನ್ನು ವೀರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲಿಕಾರ್ಜುನ ಸ್ವಾಮೀಜಿ ವಹಿಸಿ ಮಾತನಾಡಿ, ಮನುಷ್ಯ ಅಂತರAಗ ದಾರಿದ್ರö್ಯವನ್ನು ಹೋಗಲಾಡಿಸುವ ಆತ್ಮಸ್ಥೆöÊರ್ಯವನ್ನು ಬೆಳೆಸಿಕೊಂಡು ಸಮಾಜಕ್ಕೆ, ದೇಶಕ್ಕೆ ಕೊಡುಗೆ ನೀಡಬೇಕೆಂದು ಕರೆ ನೀಡಿದರು.
ಅರ್ಚಕ ಎಸ್.ಸಿ. ಹಿರೇಮಠ ಅವರ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದವು. ವೇದಿಕೆಯಲ್ಲಿ ಸ್ವಾಮಿ ಸೋಮನಾಥ ನಂದಪುರಿ, ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ, ಜಿ.ಪಂ. ಮಾಜಿ ಸದಸ್ಯ ಟಿ.ಪಿ. ಸಂದೇಶ, ಮಾದಾಪುರ ಗ್ರಾ.ಪಂ. ನಿಕಟಪೂರ್ವ ಉಪಾಧ್ಯಕ್ಷ ಸುರೇಶ್ ಬಾವೆ, ಸದಸ್ಯ ಅಂತೋಣಿ, ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಸ್.ಕಾವೇರಪ್ಪ, ಉಪಾಧ್ಯಕ್ಷ ಪಿ.ಎಸ್. ರತೀಶ, ಪ್ರಧಾನ ಕಾರ್ಯದರ್ಶಿ ಮಂಜು, ಕಾರ್ಯದರ್ಶಿ ತಿಲಕ್ ಕುಮಾರ್, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಜೆ.ಜೆ. ಸೇರಿದಂತೆ ಮತ್ತಿತರರು ಇದ್ದರು.