ಮಡಿಕೇರಿ, ಫೆ. ೨೧: ಗಾಂಜಾ ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ವೀರಾಜಪೇಟೆ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೀರಾಜಪೇಟೆ ಸುಣ್ಣದ ಬೀದಿ ನಿವಾಸಿ ಅಸೈನಾರ್ (೪೩) ಹಾಗೂ ಬಾಳುಗೋಡು ಗ್ರಾಮದ ಎ.ಜಿ. ಮೋಹನ್ (೪೨) ಬಂಧಿತ ಆರೋಪಿಗಳು.
ಅಮ್ಮತ್ತಿ ಒಂಟಿಯAಗಡಿ ರಸ್ತೆಯ ಅಮ್ಮತ್ತಿ ಪ್ರೌಢಶಾಲೆಯ ಮೈದಾನದ ಮುಂದಿನ ಬಸ್ ನಿಲ್ದಾಣದ ಬಳಿಇ ಇಬ್ಬರು ಗಾಂಜಾ ಮಾರಾಟ ಮಾಡಲು ಯತ್ನಿಸಿರುವುದರ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಪೊಲೀಸರು ಇಬ್ಬರನ್ನು ಆರೋಪಿಗಳನ್ನು ವಶಪಡಿಸಿಕೊಂಡು ಪರಿಶೀಲಿಸಿದಾಗ ೧.೬೦ ಕೆಜಿ ಗಾಂಜಾ ಪತ್ತೆಯಾಗಿದೆ. ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.