ಪೊನ್ನಂಪೇಟೆ, ಫೆ.೨೦: ಮುಂಬರುವ ೨೦೨೬ರ ಹಜ್ ಕಾಲಾವಧಿಯಲ್ಲಿ ಭಾರತದಿಂದ ಹಜ್ ಸೂಪರಿಂಟೆAಡೆAಟ್ ಆಗಿ ಸೌದಿ ಅರೇಬಿಯಾದಲ್ಲಿ ಕಾರ್ಯ ನಿರ್ವಹಿಸಲು ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ತನಿಖೆ ವಿಭಾಗದ ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ (ಡಿ.ಪಿ.ಐ.) ಕೊಡಗಿನ ಕುಪ್ಪೋಡಂಡ ಎ. ರಫೀಕ್ ಅವರು ಆಯ್ಕೆಯಾಗಿದ್ದಾರೆ. ಇವರು ಈ ವರ್ಷ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಹಜ್ ಸೂಪರಿಂಟೆAಡೆAಟ್ ಆಗಿ ಆಯ್ಕೆಯಾದ ಏಕೈಕ ವ್ಯಕ್ತಿಯಾಗಿದ್ದಾರೆ. ಪ್ರಸಕ್ತ ಹಜ್ ಅವಧಿಯಲ್ಲಿ ಇವರು ಮಕ್ಕಾ, ಮದೀನಾ ಮತ್ತು ಜಿದ್ದಾ ಸೇರಿದಂತೆ ಸೌದಿ ಅರೇಬಿಯಾದಲ್ಲಿ ೩ ತಿಂಗಳ ಕಾಲ ನಿಯೋಜನೆ (ಡೆಪ್ಯುಟೇಶನ್) ಮೇರೆಗೆ ಕಾರ್ಯ ನಿರ್ವಹಿಸಲಿದ್ದಾರೆ. ಈ ವಿಶೇಷ ಕರ್ತವ್ಯ ನಿರ್ವಹಣೆಗಾಗಿ ಇವರು ಮುಂದಿನ ತಿಂಗಳು ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಹಜ್ ವಿಭಾಗದಿಂದ ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತದಿಂದ ಆಯ್ಕೆಗೊಂಡ ಹಜ್ ಸೂಪರಿಂಟೆAಡೆAಟ್ ಗಳಿಗಾಗಿ ಆಯೋಜಿಸಲಾಗಿದ್ದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಕುಪ್ಪೋಡಂಡ ಎ. ರಫೀಕ್ ಅವರು ಭಾಗವಹಿಸಿದ್ದರು.