ಪಾಲಿಬೆಟ್ಟ, ಫೆ. ೨೦: ಅಮ್ಮತ್ತಿ-ಪಾಲಿಬೆಟ್ಟ ಲಯನ್ಸ್ ಕ್ಲಬ್‌ಗೆ ಗವರ್ನರ್ ಕುಡ್ಪಿ ಅರವಿಂದ ಶೆಣೈ ವಾರ್ಷಿಕ ಭೇಟಿ ನೀಡಿ ಸಮಾರಂಭದಲ್ಲಿ ಪಾಲ್ಗೊಂಡರು.

ಪಾಲಿಬೆಟ್ಟ ಅನುಗ್ರಹ ಲಯನ್ಸ್ ಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲಯನ್ಸ್ ಅಂತರರಾಷ್ಟಿçÃಯ ಸಂಸ್ಥೆ ಜಗತ್ತಿನ ೨೧೦ ದೇಶಗಳಲ್ಲಿ ಸುಮಾರು ೫೦ ಸಾವಿರ ಗ್ರಾಮಗಳಲ್ಲಿ ಕೆಲಸ ನಿರ್ವಹಿಸುತ್ತಿದೆ, ೧೪ ಲಕ್ಷ ಸದಸ್ಯತ್ವದಲ್ಲಿ ಭಾರತದಲ್ಲಿ ೩ ಲಕ್ಷ ಸದಸ್ಯತ್ವ ಹೊಂದಿದ್ದು ಲಯನ್ಸ್ ೩೧೭ ಡಿ ಸಂಸ್ಥೆಗಳಲ್ಲಿ ನಾಲ್ಕುವರೆ ಸಾವಿರ ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ೧೨ ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿದ್ದು ಇದರಲ್ಲಿ ಐವತ್ತು ವರ್ಷಗಳು ಪೂರೈಸಿರುವ ಪಾಲಿಬೆಟ್ಟ ಲೈಯನ್ಸ್ ಕ್ಲಬ್ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಪರಿಸರ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಮ್ಮತ್ತಿ ಕ್ಲಬ್ ಕೂಡ ಎಂಟು ವರ್ಷಗಳಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ ಅವರು ಸಂಸ್ಥೆ ಮೂಲಕ ಸಂಘಟಿತರಾಗಿ ಸೇವಾ ಮನೋಭಾವದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನಡೆಯಬೇಕೆಂದರು.

ಪಾಲಿಬೆಟ್ಟ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಎಸ್ ಸುಬ್ರಮಣಿ ಮಾತನಾಡಿ, ಸದಸ್ಯರ ಸಹಕಾರದೊಂದಿಗೆ ಲಯನ್ಸ್ ಕ್ಲಬ್ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬÀರುತ್ತಿದ್ದು ಆರೋಗ್ಯ, ಶಿಕ್ಷಣ, ಪರಿಸರ, ಜಾಗೃತಿ ಸೇರಿದಂತೆ ಹಲವಾರು ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದೆ. ಶಾಲೆಗಳ ಅಭಿವೃದ್ಧಿಗೂ ಸಹಕಾರ ನೀಡಲಾಗಿದೆ ಎಂದರು.

೫೦ ವರ್ಷ ಪೂರೈಸಿರುವ ಲಯನ್ಸ್ ಕ್ಲಬ್ ಮತ್ತಷ್ಟು ಜನಪರ ಕಾರ್ಯಗಳನ್ನು ಮಾಡುವುದಾಗಿ ಹೇಳಿದರು.

ಇದೇ ಸಂದರ್ಭ ಪಾಲಿಬೆಟ್ಟ ಹಾಗೂ ಅಮ್ಮತಿ ಲಯನ್ಸ್ ಕ್ಲಬ್ ವತಿಯಿಂದ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ ಮತ್ತು ಮಮತಾ ಶೆಣೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಲಯನ್ಸ್ ಕ್ಲಬ್‌ಗಳ ಪ್ರಾಂತ್ಯ ಅಧ್ಯಕ್ಷರಾದ ಡಾ. ಕೋಟೆರ ಪಂಚಮ್ ತಿಮ್ಮಯ್ಯ, ಅಮ್ಮತ್ತಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಎಸ್ ಪೂಣಚ್ಚ, ಕಾರ್ಯದರ್ಶಿ ಯು.ಟಿ ಕಾರ್ಯಪ್ಪ, ಖಜಾಂಚಿ ಕೋಡಿರ ದಿನೇಶ್, ಪಾಲಿಬೆಟ್ಟ ಲಯನ್ಸ್ ಕ್ಲಬ್ ಕಾರ್ಯದರ್ಶಿ ಸದಾ ಕುಶಾಲಪ್ಪ, ಖಜಾಂಚಿ ಜಿ.ಜಿ ಭವಿಷ್ಯ ಕುಮಾರ್ ಸೇರಿದಂತೆ ಲಯನ್ಸ್ ಕ್ಲಬ್‌ನ ಹಲವಾರು ಪದಾಧಿಕಾರಿಗಳು, ಪ್ರಮುಖರು ಹಾಜರಿದ್ದರು.