ಮಡಿಕೇರಿ, ಫೆ. ೧೮; ಕಡಿಯತ್ತೂರು ಗ್ರಾಮದ ಶಾಸ್ತಾವು, ಭಗವತಿ, ಅಯ್ಯಪ್ಪ ಹಾಗೂ ಚಾಮುಂಡಿ ದೇವರ ವಾರ್ಷಿಕ ಕುಂಬ್ಯಾರ್ ಉತ್ಸವವು ತಾ.೨೦ರಿಂದ ೨೨ರವರೆಗೆ ನಡೆಯಲಿದೆ.
ತಾ.೨೦ರಂದು ಬೆಳಿಗ್ಗೆ ತಕ್ಕರ ಮನೆಯಿಂದ ಭಂಡಾರ ತರುವುದು, ಎತ್ತು ಪೋರಾಟ ನಡೆಯಲಿದ್ದು, ಸಂಜೆ ಈಶ್ವರ, ಭಗವತಿ, ಅಯ್ಯಪ್ಪ ದೇವರ ಉದ್ದಮುಡಿ ಉತ್ಸವ ನಡೆಯಲಿದೆ. ತಾ.೨೧ರಂದು ಸಂಜೆ ವಿವಿಧ ಕೋಲಗಳು ಹಾಗೂ ಮೇಲೇರಿಗೆ ಅಗ್ನಿ ಸ್ಪರ್ಶ ನೆರವೇರಲಿದೆ. ತಾ.೨೨ರಂದು ಬೆಳಿಗ್ಗೆ ಅಜ್ಜಪ್ಪ ಕೋಲ, ಮಧ್ಯಾಹ್ನ ಗುಳಿಗ, ಚವುಂಡಿ ತೆರೆ ಮತ್ತು ಮೇಲೇರಿ ಪ್ರವೇಶ ನಡೆಯಲಿದೆ. ತಾ.೨೨ರಂದು ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.