ಕೂಡಿಗೆ, ಫೆ. ೧೯: ಶಕ್ತಿ ದಿನ ಪತ್ರಿಕೆಯಲ್ಲಿ ಪ್ರಕಟವಾದ ಮೂರು ತಲೆಮಾರು ಕಳೆದರೂ ದೊರಕದ ಹಕ್ಕುಪತ್ರ ವರದಿಗೆ ಕುಶಾಲನಗರ ತಾಲೂಕು ತಹಶೀಲ್ದಾರ್ ಸ್ಪಂದಿಸಿದ್ದಾರೆ. ಈ ಸಂಬAಧ ಮಾಹಿತಿ ನೀಡಿದ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ಅವರು ಸೀತಾ ಕಾಲೋನಿ ಹಾಡಿಯಲ್ಲಿರುವ ೧೫ ಕುಟುಂಬಗಳಲ್ಲಿ ೭ ಕುಟುಂಬದವರು ಮನೆಗಳ ಹಕ್ಕು ಪತ್ರಗಳನ್ನು ಪಡೆದಿರುತ್ತಾರೆ. ಅದರಲ್ಲಿ ೩ ಕುಟುಂಬದವರು ಅರ್ಜಿ ಸಲ್ಲಿಸಿದರೂ ಸಹ ಅದಕ್ಕೆ ಸಂಬAಧಿಸಿದ ಇಲಾಖೆಯ ನಿಯಮಾನುಸಾರದ ಚಲನ್ ಕಟ್ಟದೆ ಇರುವುದರಿಂದ ಹಕ್ಕು ಪತ್ರ ವಿತರಣೆ ಅಗಿರುವುದಿಲ್ಲ. ಉಳಿದ ೫ ಕುಟುಂಬದವರಿಗೆ ಹಲವಾರು ಬಾರಿ ತಿಳಿಸಿದರೂ ಅನ್ ಲೈನ್ ಮೂಲಕ ಅರ್ಜಿ ಹಾಕಿರುವುದಿಲ್ಲ ಎಂದರು. ೧೫ ಕುಟುಂಬದ ಯರವÀ ಕುಟುಂಬದ ಕೃಷಿ ಭೂಮಿಗೆ ಸಂಬAಧಿಸಿದAತೆ ಕೃಷಿ ಮಾಡುತ್ತಿರುವ ಭೂಮಿ ಗ್ರಾಮ ನಕಾಶೆಯಲ್ಲಿ ಸಂಬAಧಿಸಿದ ಸರ್ವೆ ನಂಬರ್ ಅಳವಡಿಕೆ ಆಗಿರುವುದಿಲ್ಲ. ಅಲ್ಲದೆ ಇಲಾಖೆಯ ನೂತನ ವ್ಯವಸ್ಥೆ ಅಡಿಯಲ್ಲಿ ಮೊಬೈಲ್ ಆ್ಯಪ್ಗೆ ಹೊಂದಾಣಿಕೆ ಬಾರದ ಕಾರಣದಿಂದಾಗಿ ಭೂಮಿ ಸಾಗುವಳಿ ಚೀಟಿಯನ್ನು ನೀಡಲು ಸಾಧ್ಯವಾಗಿಲ್ಲ. ಇದಕ್ಕೆ ಸಂಬAಧಿಸಿದAತೆ ರಾಜ್ಯ ಭೂಮಿ ಸಂರಕ್ಷಣಾ ಮುಖ್ಯ ಕಛೇರಿಗೆ ಸರ್ವೆ ನಂಬರ್ ತಿದ್ದುಪಡಿಗೆ ಸಂಬAಧಿಸಿದAತೆ ಈಗಾಗಲೇ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.