ಮಡಿಕೇರಿ, ಫೆ. ೧೯: ಆನ್ಲೈನ್ನಲ್ಲಿ ಔಷಧ ವ್ಯಾಪಾರಕ್ಕೆ ಕಡಿವಾಣ ಹಾಕದೇ ಹೋದಲ್ಲಿ ಮಾದಕ ದ್ರವ್ಯಗಳಿಗೂ ಸಂಪೂರ್ಣ ತಡೆ ಸಾಧ್ಯವಾಗದು ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆರ್. ರಘುನಾಥ ರೆಡ್ಡಿ, ಆನ್ಲೈನ್ ಮೂಲಕ ಮಾದಕ ದ್ರವ್ಯ ಸಾಗಾಣಿಕೆ ಊಹೆಗೂ ಮೀರಿ ಬೆಳೆಯುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
ನಗರದಲ್ಲಿ ಕೊಡಗು ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾದ ಸಂಘದ ಕಚೇರಿ, ಸಭಾಂಗಣವನ್ನು ಹೊಂದಿರುವ ಎರಡಂತಸ್ತಿನ ಫಾರ್ಮಾ ಭವನ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯ ಸಾಗಾಣಿಕೆ ದೇಶವ್ಯಾಪಿ ವಿಸ್ತಾರಗೊಳ್ಳುತ್ತಿದೆ. ಆನ್ ಲೈನ್ ನಲ್ಲಿ ಔಷಧಿ ವಹಿವಾಟು ನೆಪದಲ್ಲಿ ಮಾದಕ ದ್ರವ್ಯ ಸಾಗಾಣಿಕೆಯೂ ಹೆಚ್ಚಾಗುತ್ತಿದೆ. ಇಂಥ ಸಂದರ್ಭ ಅನಗತ್ಯವಾಗಿ ಔಷಧಿ ವ್ಯಾಪಾರಿಗಳನ್ನು ತನಿಖಾ ಸಂಸ್ಥೆಗಳು ವಿಚಾರಣೆಗೊಳಪಡಿಸುತ್ತಿವೆ. ಆನ್ ಲೈನ್ ಮೂಲಕ ಮಾದಕ ವಸ್ತುಗಳನ್ನು ಸಲೀಸಾಗಿ ಸಾಗಾಣಿಕೆ ಮಾಡುವ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆನ್ ಲೈನ್ ಔಷಧಿ ವಹಿವಾಟಿಗೆ ತಡೆಯೊಡ್ಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕೆAದು ಒತ್ತಾಯಿಸಿದರು. ಸಂಘದ ಅಧೀನದಲ್ಲಿರುವ ಔಷಧ ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಮಾದಕ ಪದಾರ್ಥಗಳು, ಮಾದಕ ದ್ರವ್ಯಗಳ ಮಾರಾಟಕ್ಕೆ ಅವಕಾಶ ನೀಡಬಾರದೆಂದೂ ಈಗಾಗಲೇ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ ಎಂದೂ ರಘುನಾಥ ರೆಡ್ಡಿ ಹೇಳಿದರು.
ಕರ್ನಾಟಕದಲ್ಲಿ ಪ್ರಸ್ತುತ ೨೬ ಸಾವಿರ ಔಷಧ ಅಂಗಡಿಗಳಿದ್ದು, ೪೫ ಸಾವಿರದಷ್ಟು ಔಷಧ ವ್ಯಾಪಾರಿಗಳಿದ್ದಾರೆ. ಔಷಧ ವ್ಯಾಪಾರಿಗಳು ಸಮಾಜಮುಖಿಯಾಗಿ ನಿಯಮಪಾಲಿಸಿಕೊಂಡು ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಹೀಗಿದ್ದರೂ ಸರ್ಕಾರಗಳು ಒಂದಿಲ್ಲೊAದು ನಿಯಮಗಳ ಮೂಲಕ ಔಷಧ ವ್ಯಾಪಾರಿಗಳಿಗೆ ಸಮಸ್ಯೆಯುಂಟು ಮಾಡುತ್ತಿವೆ ಎಂದೂ ರಘುನಾಥ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿAದ ಮುಂದಿನ ದಿನಗಳಲ್ಲಿ ಸಂಘದ ಸದಸ್ಯರ ಆರ್ಥಿಕತೆಗೆ ನೆರವಾಗುವ ನಿಟ್ಟಿನಲ್ಲಿ ಬ್ಯಾಂಕ್ ಪ್ರಾರಂಭಿಸುವAತೆ ಅವರು ಸಲಹೆ ನೀಡಿದರು. ಫಾರ್ಮಾ ಭವನ ಕೊಡಗಿನ ಔಷಧ ವ್ಯಾಪಾರಸ್ಥಲ್ಲರ ಒಗ್ಗಟ್ಟಿನ ಪ್ರತೀಕದ ಭವನವಾಗಲಿ ಎಂದೂ ರಘುನಾಥ ರೆಡ್ಡಿ ಹಾರೈಸಿದರು.
ಕೊಡಗು ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕರಾದ ಅಜಯ್ ರಾಜ್ ಷಾ ಮಾತನಾಡಿ, ಭೂಮಿಯಲ್ಲಿ ಜನಿಸಿದವರೆಲ್ಲರೂ ಪ್ರವಾಸಿಗರಂತೆ ಆಗಿದ್ದೇವೆ. ಆ ದೇವನು ಪ್ರವಾಸಿ ಮಾರ್ಗದರ್ಶಕನಂತೆ ನಮಗೆ ದಾರಿದೀಪವಾಗಿದ್ದಾನೆ. ಹೀಗಿರುವಾಗ ಜೀವಿಸುವ ಅಲ್ಪಾವಧಿಯಲ್ಲಿ ಸ್ವಾರ್ಥಿಗಳಾಗದೇ ಪರರ ಹಿತಚಿಂತನೆಯನ್ನೂ ಮಾಡುವಂತೆ ಸಲಹೆ ನೀಡಿದರು.
ಸಂಘದ ರಾಜ್ಯ ಕಾನೂನು ಸಲಹೆಗಾರ ಕೆ.ಹರೀಶ್ ಮಾತನಾಡಿ, ಸರ್ಕಾರಗಳು ಸದಾ ಒಂದೊAದು ನಿಯಮಗಳ ಮೂಲಕ ಔಷಧ ವ್ಯಾಪಾರಿಗಳ ನೆಮ್ಮದಿ ಕಸಿಯುತ್ತಿವೆ. ಅವೈಜ್ಞಾನಿಕವಾದ ಕಾನೂನುಗಳು ವ್ಯಾಪಾರಸ್ಥ ರನ್ನು ಅತಂತ್ರಗೊಳಿಸುತ್ತಿವೆ. ಹೀಗಿದ್ದರೂ, ಇಂಥ ಕಾನೂನುಗಳ ವಿರುದ್ದ ರಾಜ್ಯ ಸಂಘವು ನಿರಂತರ ಹೋರಾಟ ಮಾಡುತ್ತಾ ಔಷಧ ವ್ಯಾಪಾರಿಗಳ ಹಿತಚಿಂತನೆ ಕಾಯಲು ಬದ್ಧವಾಗಿದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಂಬೇಕಲ್ ಜೀವನ್ ಕುಶಾಲಪ್ಪ ಮಾತನಾಡಿ, ಔಷಧ ವ್ಯಾಪಾರಿಗಳು ಸಮಾಜದ ಆರೋಗ್ಯ ರಕ್ಷಕರಂತೆ ಇದ್ದಾರೆ. ವೈದ್ಯರು ಸೂಚಿಸುವ ಔಷಧವನ್ನು ರೋಗಿಗೆ ಸುರಕ್ಷಿತವಾಗಿ ತಲುಪಿಸುವ ಸೇತುವೆಯಂತೆ ಔಷಧಿ ವ್ಯಾಪಾರಸ್ಥರಿದ್ದಾರೆ. ಔಷಧಿ ವ್ಯಾಪಾರಸ್ಥರದ್ದು ಖಂಡಿತಾ ಕೇವಲ ವಹಿವಾಟಲ್ಲ. ನಿಜಾರ್ಥದಲ್ಲಿ ಅವರದ್ದು ಮಹೋನ್ನತ ಸೇವೆಯಾಗಿದೆ ಎಂದರು. ಹೊಸ ಫಾರ್ಮಾಭವನ ಕೊಡಗಿನ ಔಷಧ ವ್ಯಾಪಾರಿಗಳ ಪಾಲಿಗೆ ನವನವೀನ ಚಿಂತನೆಯ ಸ್ವರೂಪವಾಗಿದೆ. ಇಲ್ಲಿ ಕೈಗೊಳ್ಳುವ ನಿರ್ಧಾರಗಳು ವ್ಯಾಪಾರಸ್ಥರ ರಕ್ಷಣೆಗೋಸ್ಕರ ಇರಲಿದೆ. ಫಾರ್ಮಾ ಭವನ ಜಿಲ್ಲೆಯ ಔಷಧಿ ವ್ಯಾಪಾರಸ್ಥರ ಒಗ್ಗಟ್ಟಿನ ಮನೆಯಂತಿರಲಿದೆ ಎಂದರು. ಸಂಘವು ಜನರ ಆರೋಗ್ಯದ ಹಿತಚಿಂತನೆಯೊAದಿಗೆ, ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿದೆ ಎಂದೂ ಅವರು ಹೇಳಿದರು. ಜಿಲ್ಲೆಯ ಔಷಧ ವ್ಯಾಪಾರಸ್ಥರು ನೈತಿಕತೆಯೊಂದಿಗೆ, ನ್ಯಾಯಯುತ ಮಾರ್ಗದಲ್ಲಿ ಮುಂದೆ ಹೆಜ್ಜೆಯಿಡಲಿದ್ದಾರೆ ಎಂದೂ ಜೀವನ್ ಭರವಸೆಯಿಂದ ನುಡಿದರು. ಕರ್ನಾಟಕ ಔಷದ ವ್ಯಾಪಾರಿಗಳ ಸಂಘದ ಖಜಾಂಚಿ ಬಿ. ಉಮೇಶ್, ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಗೌರವ ಕಾರ್ಯದರ್ಶಿ ಡಿ.ಐ. ಪುರುಷೋತ್ತಮ್, ಉಪಾಧ್ಯಕ್ಷರುಗಳಾದ ಅಂಬೆಕಲ್ ವಿನೋದ್, ಮೇರ್ವಿನ್ ಫರ್ನಾಂಡೀಸ್, ಜಂಟಿ ಕಾರ್ಯದರ್ಶಿ ಕೆ.ವಸಂತ್ ಕುಮಾರ್, ಖಜಾಂಚಿ ಪ್ರಸಾದ್ ಗೌಡ, ನಿರ್ದೇಶಕ ಜಗನ್ನಾಥ್, ಡಾ. ಸುಧಾಕರ್ ಶೆಟ್ಟಿ ವೇದಿಕೆಯಲ್ಲಿದ್ದರು. ಶ್ರದ್ಧಾ ಶಾಸ್ತಿç ಪ್ರಾರ್ಥಿಸಿ, ಡಿ.ಐ. ಪುರುಷೋತ್ತಮ್ ಸ್ವಾಗತಿಸಿ, ಜಂಟಿ ಕಾರ್ಯದರ್ಶಿ ವಸಂತ್ ಕುಮಾರ್ ವಂದಿಸಿ, ವಿನಯ್ ಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಕೊಡಗಿನ ವಿವಿಧೆಡೆಗಳಿಂದ ಬಂದಿದ್ದ ಔಷಧ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.
ಸನ್ಮಾನ
ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿAದ ನಿರ್ಮಿಸಲಾದ ಫಾರ್ಮಾ ಭವನದ ಉದ್ಘಾಟನೆ ಸಂದರ್ಭ ಹಿರಿಯ ಔಷಧ ವ್ಯಾಪಾರಸ್ಥರನ್ನು ಸನ್ಮಾನಿಸಿ ಗೌರವಿಸಲಾಯಿತು.
ಫಾರ್ಮಾ ಭವನದ ಲೋಕಾರ್ಪಣೆ ಸಂದರ್ಭ ಕೊಡಗಿನ ಹಿರಿಯ ಔಷಧ ವ್ಯಾಪಾರಸ್ಥರುಗಳಾದ ವೀರಾಜಪೇಟೆಯ ಗಣೇಶ್ ಮೆಡಿಕಲ್ಸ್ನ ಸುದರ್ಶನ್ ರೈ, ಕುಶಾಲನಗರದ ರಾಧಾಕೃಷ್ಣ ಮೆಡಿಕಲ್ಸ್ನ ಶ್ರೀಪತಿ ಎಸ್.ಎಲ್., ಸುಂಟಿಕೊಪ್ಪದ ಅಶ್ವಿನಿ ಮೆಡಿಕಲ್ಸ್ನ ಕೆ. ಗೋಪಾಲ ಭಟ್, ನಾಪೋಕ್ಲುವಿನ ರಾಘವೇಂದ್ರ ಮೆಡಿಕಲ್ಸ್ ನ ಎಂ.ಎA.ನರೇAದ್ರ, ಸೋಮವಾರಪೇಟೆಯ ಮೆಡಿಕಲ್ ಎಂಪೋರಿಯA ಮೇರ್ವಿನ್ ಫೆರ್ನಾಂಡೀಸ್, ಮಡಿಕೇರಿಯ ವಿನೋದ್ ಮೆಡಿಕಲ್ಸ್ನ ಅಂಬೆಕಲ್ ಕುಶಾಲಪ್ಪ, ಶನಿವಾರಸಂತೆಯ ಅನ್ನಪೂರ್ಣ ಮೆಡಿಕಲ್ಸ್ನ ಹೆಚ್.ಎಸ್. ಸುರೇಶ್, ಕೊಡ್ಲಿಪೇಟೆಯ ಶ್ರೀನಿವಾಸ ಮೆಡಿಕಲ್ಸ್ನ ಎಸ್.ಎಸ್. ಶ್ರೀನಿವಾಸ್, ಗೋಣಿಕೊಪ್ಪಲುವಿನ ಕಾವೇರಿ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ನ ಎನ್.ಯು. ಭೀಮಯ್ಯ ಸಂಘದ ಪೂರ್ವಾಧ್ಯಕ್ಷರಾದ ಮಡಿಕೇರಿಯ ರಾಜ್ ಮೆಡಿಕಲ್ಸ್ನ ಜಿ.ಎಸ್. ಬಸವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಾರ್ಮಾ ಭವನದ ಗುತ್ತಿಗೆದಾರರಾದ ಮನೋಜ್ಞ ಮತ್ತು ಇಂಜಿನಿಯರ್ ಪ್ರಮೋದ್ ಕುಮಾರ್ ರೈ, ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎ.ಕೆ. ಜೀವನ್, ಸುಮಾ ಜೀವನ್ ಅವರನ್ನೂ ಈ ಸಂದರ್ಭ ಸನ್ಮಾನಿಸಲಾಯಿತು.