ಮಡಿಕೇರಿ, ಫೆ. ೧೭: ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಸ್ಫೋಟಿಸುವುದಾಗಿ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದ ಹಿನ್ನೆಲೆ ನಗರದ ವಿದ್ಯಾನಗರದಲ್ಲಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು.

ಬೆಳಿಗ್ಗೆ ಆಡಳಿತಾಧಿಕಾರಿ ಕಚೇರಿಗೆ ಆಗಮಿಸಿ ಕಂಪ್ಯೂಟರ್‌ನಲ್ಲಿ ಇ-ಮೇಲ್ ಪರಿಶೀಲಿಸುತ್ತಿದ್ದ ಸಂದರ್ಭ ಅನಾಮಿಕ ಐಡಿಯಿಂದ ‘ಮಧ್ಯಾಹ್ನ ೧೨-೧೫ಕ್ಕೆ ನ್ಯಾಯಾಲಯ ಸಂಕೀರ್ಣ ಸ್ಫೋಟಿಸುವುದಾಗಿ’ ಸಂದೇಶ ಬಂದಿದ್ದು, ಇದರಿಂದ ಆತಂಕಗೊAಡ ಅವರು, ನ್ಯಾಯಾಧೀಶರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ದೌಡಾಯಿಸಿದ ಪೊಲೀಸರು, ಶ್ವಾನದಳ ಹಾಗೂ ಬಾಂಬ್ ನಿಷ್ಕಿçಯ ದಳ ಸಿಬ್ಬಂದಿಗಳು ಇಡೀ ನ್ಯಾಯಾಲಯದ ಆವರಣ ಹಾಗೂ ಕಚೇರಿ, ಕೊಠಡಿ ಸೇರಿದಂತೆ ಕ್ಯಾಂಟೀನ್, ವಕೀಲರ ಭವನವನ್ನು ಪರಿಶೀಲಿಸಲು ಆರಂಭಿಸಿದರು. ಸಹಜವಾಗಿ ಕರ್ತವ್ಯಕ್ಕೆ ಬಂದ ಸಿಬ್ಬಂದಿ ವರ್ಗ, ವಕೀಲರು, ಸಾರ್ವಜನಿಕರು ಕೂಡ ಬೆದರಿಕೆ ಸಂದೇಶದಿAದ ಆತಂಕಕ್ಕೆ ಒಳಗಾದರು. ತಕ್ಷಣ ನ್ಯಾಯಾಲಯದ ಪ್ರವೇಶ ದ್ವಾರವನ್ನು ಬಂದ್ ಮಾಡಿದ ಪೊಲೀಸರು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದರು. ನ್ಯಾಯಾಲಯ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಯಿತು. ಮಧ್ಯಾಹ್ನ ೧೨.೧೫ರ ತನಕವೂ ಬಾಂಬ್ ನಿಷ್ಕಿçಯ ದಳ, ಶ್ವಾನದಳ ಇಡೀ ನ್ಯಾಯಾಲಯವನ್ನು ಪರಿಶೀಲನೆಗೈದು ಯಾವುದೇ ಬಾಂಬ್ ಇಲ್ಲ ಎಂದು ದೃಢಪಡಿಸಿದ ನಂತರ ನ್ಯಾಯಾಧೀಶರು, ವಕೀಲರು, ಕಕ್ಷಿದಾರರು ಹಾಗೂ ಸಿಬ್ಬಂದಿ ವರ್ಗದವರಿಗೆ ನ್ಯಾಯಾಲಯದ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು. ಖುದ್ದು ಡಿವೈಎಸ್‌ಪಿ ಸೂರಜ್, ಮಡಿಕೇರಿ ಗ್ರಾಮಾಂತರ ಇನ್ಸ್ಪೆಕ್ಟರ್ ಚಂದ್ರಶೇಖರ್ ಸೇರಿದಂತೆ ಪೊಲೀಸ್ ವರ್ಗದವರು ಸ್ಥಳದಲ್ಲಿದ್ದು ಮೇಲ್ವಿಚಾರಣೆ ನಡೆಸಿದರು.

ಕಲಾಪದಲ್ಲಿ ವ್ಯತ್ಯಯ : ಮಡಿಕೇರಿ ಸೇರಿದಂತೆ ರಾಜ್ಯದ ದಾವಣಗೆರೆ ಹಾಗೂ ತುಮಕೂರು ನ್ಯಾಯಾಲಯಗಳಿಗೆ ಒಂದೇ ದಿನ ಈ ರೀತಿಯ ಸಂದೇಶ ಬಂದಿರುವುದು ಮತ್ತಷ್ಟು ಆತಂಕಕ್ಕೆ ದೂಡಿತು. ವಿವಿಧ ಹಂತದ ನ್ಯಾಯಾಧೀಶರು ಕೂಡ ನ್ಯಾಯಾಲಯದ ಗೇಟ್‌ನ ಹೊರಗಡೆ ನಿಂತು ಮಾಹಿತಿ ಪಡೆದುಕೊಂಡರು. ಮಧ್ಯಾಹ್ನ ೧೨.೧೫ರ ನಂತರ ಕೋರ್ಟ್ ಆರಂಭಗೊAಡ ಹಿನ್ನೆಲೆ ಕಲಾಪದಲ್ಲಿ ವ್ಯತ್ಯಯ ಉಂಟಾಯಿತು. ಆಗಮಿಸಿದ್ದ ಸಾರ್ವಜನಿಕರು, ವಕೀಲರು ಬಿಸಿಲಿನ ನಡುವೆ ಕಾದು ಬಸವಳಿದರು. ಸಾಮಾಜಿಕ ಜಾಲತಾಣದಲ್ಲಿ ವಿಷಯ ಹರಿದಾಡುತ್ತಿದಂತೆ ಸುತ್ತಮುತ್ತಲಿನ ನಿವಾಸಿಗಳು ಕೂಡ ಕೋರ್ಟ್ ಬಳಿ ಕಿಕ್ಕಿರಿದು ಸೇರಿದರು. ಈ ಸಂಬAಧ ಆಡಳಿತಾಧಿಕಾರಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸಂದೇಶ ಕಳುಹಿಸಿದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.