ಮಡಿಕೇರಿ. ಫೆ. ೧೪: ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದಲ್ಲಿ ತಾ. ೧೯ ರಂದು ಶ್ರೀ ರಾಮಕೃಷ್ಣ ಪರಹಂಸರ ೧೯೧ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ.

ಅಂದು ಬೆಳಿಗ್ಗೆ ೫:೩೦ಕ್ಕೆ ಮಂಗಳಾರತಿ ಹಾಗೂ ಉಷಾ ಕೀರ್ತನೆ ನೆರವೇರಲಿದೆ. ಬೆಳಿಗ್ಗೆ ೭:೩೦ಕ್ಕೆ ವಿಶೇಷ ಪೂಜೆ, ೯:೩೦ಕ್ಕೆ ವೇದ ಪಾರಾಯಣ ಮತ್ತು ಭಜನೆ, ೧೦:೩೦ಕ್ಕೆ ಹೋಮ, ೧೧:೧೫ಕ್ಕೆ ಶ್ರೀರಾಮಕೃಷ್ಣರ ಜೀವನ ಚರಿತ್ರೆಯಿಂದ ವಾಚನ ಮತ್ತು ಪ್ರವಚನ, ೧೨:೧೫ಕ್ಕೆ ಭಜನೆ, ೧೨:೪೫ಕ್ಕೆ ಮಹಾಮಂಗಳಾರತಿ ಮತ್ತು ಪುಷ್ಪಾಂಜಲಿ, ೧ ಗಂಟೆಗೆ ಭೋಜನ ನಡೆಯಲಿದೆ. ಸಂಜೆ ೬:೩೦ಕ್ಕೆ ಆರತಿ ಮತ್ತು ವಿಶೇಷ ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.