ಕಣಿವೆ, ಫೆ.೧೪: ಅದೊಂದು ಅವಿಭಕ್ತ ಕುಟುಂಬಗಳ ಮಂದಿ ವಾಸವಿರುವಂತಹ ಬೃಹತ್ತಾದ ನಿವಾಸ.

ಅವರಲ್ಲೊಬ್ಬರು ಆಗರ್ಭ ಶ್ರೀಮಂತರು. ಕೊಡಗಿನ ಪ್ರಸಿದ್ಧ ಕೈಗಾರಿಕೋದ್ಯಮಿ.

ಕುಶಾಲನಗರದ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಗಳನ್ನು ತೆರೆದು ಕನ್ನಡಿಗರಿಗೆ ಉದ್ಯೋಗ ನೀಡಿದ್ದರು ಸರಳತೆ ಅವರಲ್ಲಿ ಎದ್ದು ಕಾಣುತ್ತದೆ.

ಗುರುಕುಲ ಮಾದರಿಯ ನಳಂದ ಶಿಕ್ಷಣ ಸಂಸ್ಥೆಯನ್ನು ಕೊಡಗು ಮೈಸೂರು ಗಡಿ ಭಾಗದಲ್ಲಿ ತೆರೆಯುವ ಮೂಲಕ ಶೈಕ್ಷಣಿಕ ಸೇವೆಗೂ ದಾಪುಗಾಲಿಟ್ಟವರು ಇವರು.

ಕುಶಾಲನಗರದ ಕೈಗಾರಿಕಾ ಪ್ರದೇಶದ ಲೆವಿಸ್ಟಾ ಕಾಫಿ ಸಂಸ್ಥೆಯ ಮಾಲೀಕರಾದ ಎನ್. ಸಾತಪ್ಪನ್, ತಮ್ಮ ನೇತೃತ್ವದ ವಿದ್ಯಾಸಂಸ್ಥೆಯ ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳನ್ನು ಅದು ನರ್ಸರಿಯಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳನ್ನು ಕುಶಾಲನಗರ ಮಡಿಕೇರಿ ರಾಷ್ಟಿçÃಯ ಹೆದ್ದಾರಿಯಲ್ಲಿನ ತಮ್ಮ ನಿವಾಸಕ್ಕೆ ಆಹ್ವಾನಿಸಿ ದಿನವಿಡೀ ವಿದ್ಯಾರ್ಥಿಗಳೊಂದಿಗೆ ಸೇರಿ ಅವರೊಡನೆ ವಿವಿಧ ಆಟಗಳಾಡಿ, ಅವರೊಂದಿಗೆ ಕೆಲವು ಕನ್ನಡದ ಚಿತ್ರಗೀತೆಗಳು ಹಾಗೂ ಭಾವಗೀತೆಗಳನ್ನು ಹಾಡಿ ಸಂಭ್ರಮಿಸಿದರು.

ಸಾಮಾನ್ಯರAತೆ ಶಾಲೆಯ ಮಕ್ಕಳೊಂದಿಗೆ ಬೆರೆತು ನೋಡುಗರಿಗೆ ಬೆರಗು ಮೂಡಿಸಿದರು.

ಇದೇ ಸಂದರ್ಭ ಸರಿಗಮಪ ೨೦೧೯ ರ ಸೀಸನ್ ವಿಜೇತ ವಿದ್ಯಾರ್ಥಿನಿ ಕುಶಾಲನಗರದ ಪ್ರಗತಿ ಬಡಿಗೇರ್ ಹಾಗೂ ಹಾಡುಗಾರ ಶಿಕ್ಷಕ ಬಸವರಾಜ್ ಬಡಿಗೇರ್ ಅವರನ್ನು ಆಹ್ವಾನಿಸಿ ಶಾಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನೀ ಮೀಟಿದಾ ನೆನಪೆಲ್ಲವು...

ಎಂದೆAದೂ ನಿನ್ನನು ಮರೆತು... ನಗುವಾ ನಯನ ಮಧುರ ಮೌನ... ಹೀಗೆ ಹತ್ತಾರು ಹಳೆಯ ಗೀತೆಗಳನ್ನು ಹಾಡಿಸುವ ಮೂಲಕ ರಂಜಿಸಿದರು.

ಹಾಸ್ಟೆಲ್ ಊಟೋಪಹಾರದಿಂದ ಮನೆಯಲ್ಲಿನ ಸವಿಯಾದ ವಿಶೇಷವಾದ ಖಾದ್ಯಗಳನ್ನು ಸಿದ್ದಪಡಿಸಿ ಮಕ್ಕಳೊಂದಿಗೆ ಸೇರಿ ಊಟ ಮಾಡಿ ಸವಿದರು.

ಬಳಿಕ ಎಲ್ಲಾ ಮಕ್ಕಳಿಗೂ ಮನೆಗೆ ಬಂದ ಸವಿನೆನಪಿಗೆ ಸವಿಯಾದ ಉಡುಗೊರೆಗಳೊಂದಿಗೆ ಶಾಲಾ ಬಸ್‌ಗಳಲ್ಲಿ ಮಕ್ಕಳನ್ನು ಬೀಳ್ಕೊಟ್ಟರು.

ಇದೇ ಸಂದರ್ಭ ಭೇಟಿಯಾದ ಶಕ್ತಿ ಯೊಂದಿಗೆ ಪ್ರತಿಕ್ರಿಯಿಸಿದ ಸಾತಪ್ಪನ್, ಶಾಲೆಯ ವಿದ್ಯಾರ್ಥಿಗಳಿಗೆ ಒಂದಷ್ಟು ಹೊಸತನ ಸಿಗಲೆಂಬ ಭಾವನೆಯಿಂದ ಹೀಗೊಂದು ವಿನೂತನ ಪ್ರಯತ್ನವಾಯಿತು. ಪೋಷಕರಿಂದ ದೂರ ಉಳಿದು ವ್ಯಾಸಂಗದಲ್ಲಿ ಮಗ್ನರಾಗುವ ಮಕ್ಕಳಿಗೆ ಹೊಸತನ, ಹೊಸ ಪರಿಸರ, ಹೊಸ ಕಲಿಕೆ, ಹಾಡು, ಆಟ, ಮನರಂಜನೆ ಜೊತೆಗೆ ಬಾಯಿ ರುಚಿಯ ಬಗೆ ಬಗೆತ ಖಾದ್ಯಗಳನ್ನು ಸಿದ್ದಪಡಿಸಲಾಯಿತು ಎಂದರು.

ಮೊಬೈಲ್‌ಗಳಿAದ ಹಾಗೂ ಪರಿವಾರದಿಂದ ದೂರ ಇರುವ ಮಕ್ಕಳು ಶೈಕ್ಷಣಿಕವಾಗಿ ಸಾಧಿಸಬಹುದಾದ ಆಯಾಮಗಳ ಕುರಿತು ಮಾಹಿತಿ ನೀಡಲಾಯಿತು. ಕೇವಲ ಪುಸ್ತಕದ ಶಿಕ್ಷಣವಷ್ಟೇ ಅಲ್ಲದೇ ನಿಸರ್ಗದ ನಿಜ ಜೀವನದ ಶಿಕ್ಷಣವನ್ನು ಕೂಡ ಮಕ್ಕಳು ಕಲಿಯಬೇಕು ಎಂಬ ಉದ್ದೇಶ ನಮ್ಮದು ಎಂದು ಅವರು ಹೇಳಿದರು.

ಈ ಸಂದರ್ಭ ಸಾತಪ್ಪನ್ ಪುತ್ರ ವೆಂಕಟ್ ಸಾತಪ್ಪನ್, ನಳಂದ ಗುರುಕುಲ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲಿನ ನಿರ್ದೇಶಕ ಸುರೇಂದ್ರನ್, ಪ್ರಾಂಶುಪಾಲರಾದ ಶಾಜಿ ಅಲುಂಗಲ್ ಜೋಸೆಫ್, ಡಾ. ಅಂಥೋಣಿ ಹಾಗೂ ಇತರರು ಇದ್ದರು.

-ಕೆ.ಎಸ್ ಮೂರ್ತಿ