ಪೊನ್ನAಪೇಟೆ, ಫೆ. ೧೪: ರಾಷ್ಟಿçÃಯ ಸ್ವಯಂಸೇವಕ ಸಂಘ ನೂರು ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಹಿಂದೂ ಸಮಾಜದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊನ್ನಂಪೇಟೆ ತಾಲೂಕಿನ ಬಾಳೆಲೆ ಮಂಡಲದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಾಳೆಲೆಯ ಗಣೇಶ ದೇವಸ್ಥಾನದಲ್ಲಿ ಅರ್ಚಕರಾದ ವಿಷ್ಣು ಮೂರ್ತಿ ಭಟ್ ಅವರು ಗಣಪತಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಬಾಳಲೆಯ ಮುಖ್ಯ ರಸ್ತೆಯ ಮೂಲಕ ಭಾರತಾಂಬೆಯ ಶೋಭಾಯಾತ್ರೆ ನಡೆಯಿತು. ಸ್ಥಳೀಯ ಕೊಡವ ಸಮಾಜದವರೆಗೆ ಹೊರಟ ಮೆರವಣಿಗೆಯಲ್ಲಿ, ಕೇಸರಿ ಶಾಲು ಧರಿಸಿದ ಮಹಿಳೆಯರು, ಮಕ್ಕಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದರು.
ಬಾಳೆಲೆಯ ಕೊಪ್ಪಲು ಭಾಗದ ಕಲಶ ಹೊತ್ತ ಮಹಿಳೆಯರು, ಶ್ರೀ ರಾಮ, ಲಕ್ಷö್ಮಣ, ಸೀತೆ, ಮುಂತಾದ ಮಹನೀಯರ ಛದ್ಮವೇಷ ಧರಿಸಿದ್ದ ಪ್ರತಿಭಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ನೃತ್ಯ ಮಾಡುತ್ತಾ, ಚೆಂಡೆ ವಾದ್ಯದೊಂದಿಗೆ, ಪಟಾಕಿ ಸಿಡಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ನಂತರ ಸ್ಥಳೀಯ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗಾಯಕ ಆನ್ವಿತ್ ಕುಮಾರ್ ವಂದೇ ಮಾತರಂ ಗೀತೆ, ಪೊಡಮಾಡ ಭವಾನಿ ನಾಣಯ್ಯ ಅವರ ಪ್ರಾರ್ಥನೆ ಗೀತೆಯೊಂದಿಗೆ ನೆರದಿದ್ದ ಗಣ್ಯರು ಜ್ಯೋತಿ ಬೆಳಗಿಸಿ, ಭಾರತಾಂಬೆÉಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಹಿಂದೂ ಜಾಗರಣ ವೇದಿಕೆಯ ಸಹ ಸಂಚಾಲಕ ಮಹೇಶ್ ಕಡಗದಾಳು ಮಾತನಾಡಿ, ಹಿಂದೂ ಸಂಸ್ಕೃತಿ, ಆಚಾರ-ವಿಚಾರಗಳು ವಿಭಿನ್ನವಾಗಿದ್ದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಧರ್ಮವಾಗಿದೆ. ಹಿರಿಯರಿಗೆ ಗೌರವ ನೀಡುವುದು ತಲೆಬಾಗಿ ನಮಸ್ಕರಿಸುವುದು ಹೀಗೆ ಹತ್ತು ಹಲವು ಆಚಾರಗಳನ್ನು ಒಳಗೊಂಡ ಧರ್ಮ ಹಿಂದೂ ಧರ್ಮವಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಫಿ ಬೆಳೆಗಾರ ಹಾಗೂ ಸ್ಥಳೀಯ ವಿಜಯ ಬ್ಯಾಂಕ್ ಮಾಜಿ ಅಧ್ಯಕ್ಷ ಶಂಕರಿ ಸೋಮಯ್ಯ, ಹಿರಿಯರು, ಕಿರಿಯರಿಗೆ ಹಿಂದೂ ಧರ್ಮದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಬೇಕು. ಇದರಿಂದ ಮಕ್ಕಳು ಮತಾಂತರಗೊಳ್ಳುವುದನ್ನು ತಪ್ಪಿಸಿ ಹಿಂದೂ ಧರ್ಮದ ಉನ್ನತಿಗೆ ಶ್ರಮಿಸಲು ಸಹಕಾರಿಯಾಗುತ್ತದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಪ್ರತಿಭಾ ಆಂಗ್ಲ ಮಾಧ್ಯಮ ಶಾಲೆಯ ನಿವೃತ್ತ ಶಿಕ್ಷಕಿ ಅಡ್ಡೇಂಗಡ ಪೊನ್ನಮ್ಮ ಅವರು ಕಾಶ್ಮೀರದ ಪುಲ್ವಾಮ ಘಟನೆಯಲ್ಲಿ ಪ್ರಾಣತೆತ್ತ ವೀರ ಯೋಧರಿಗೆ ಗೌರವ ಸಮರ್ಪಣೆ ಮಾಡಿ ಮಾತನಾಡಿ, ಹಿಂದೂ ಧರ್ಮದ ಉಳಿವಿಗಾಗಿ ಮೊದಲು ಸ್ವದೇಶಿ ವಸ್ತುಗಳನ್ನು ಬಳಸುವುದು ಉತ್ತಮ ಎಂದರು.
ಈ ಸಂದರ್ಭ ಬಾಳೆಲೆ ಕೃಷಿ ಉತ್ಪನ್ನ ಹಾಗೂ ವ್ಯವಸಾಯೋತ್ಪನ್ನ ಸಹಕಾರ ಸಂಘದ ಅಧ್ಯಕ್ಷ ಅರಮಣಮಾಡ ಸುಗುಣ ಗಣಪತಿ, ನಿರ್ದೇಶಕಿ ಮುಕ್ಕಾಟೀರ ಜಾನಕಿ, ಸದಸ್ಯರಾದ ಮಾಪಂಗಡ ಯಮುನಾ ಚಂಗಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಗಣಪತಿ, ಬಾಳೆಲೆ ವಿಜಯಲಕ್ಷಿö್ಮ ಕಾಲೇಜಿನ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೊಕ್ಕೇಂಗಡ ಸ್ಮಿತಾ ಪೊನ್ನಪ್ಪ, ಹಿಂದೂ ಸಂಗಮ ಅಧ್ಯಕ್ಷ ಪೋಡಮಾಡ ಸುಕೇಶ್, ಕಾರ್ಯದರ್ಶಿ ಅಡ್ಡೇಂಗಡ ಅಜಯ್, ಸಂಚಾಲಕರಾದ ಅಡ್ಡೇಂಗಡ ರಾಕೀ ನಾಣಯ್ಯ, ಪೋಡಮಾಡ ಜ್ಯೋತಿ ನಾಚಪ್ಪ, ಅಡ್ಡೇಂಗಡ ಅರುಣ, ನವೀನ್, ಕೊಕ್ಕಲೆಮಾಡ ನಾಣಯ್ಯ, ಆಟೋ ಅನಿಲ್, ಅವಿನಾಶ್, ಶಬರಿ, ಪ್ರಕಾಶ್ ಮತ್ತಿತರರು ಇದ್ದರು.