ಮಡಿಕೇರಿ, ಫೆ. ೧೪: ಹೊದ್ದೂರು ಗ್ರಾಮದ ಶ್ರೀ ಶಾಸ್ತ - ಈಶ್ವರ ದೇವಾಲಯದ ೫ನೇ ವರ್ಷದ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ತಾ.೧೬ ರಿಂದ ೧೮ ರವರೆಗೆ ನಡೆಯಲಿದೆ. ತಾ. ೧೬ರಂದು ಸಂಜೆ ೭ ಗಂಟೆಗೆ ಅಂದಿ ಬೊಳಕ್, ತಾ. ೧೭ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ದೇವರ ನೃತ್ಯ ಬಲಿ ನಡೆಯಲಿದೆ. ೧೦ ಗಂಟೆಗೆ ಪ್ರತಿಷ್ಠ ವಾರ್ಷಿಕೋತ್ಸವದ ಪ್ರಯುಕ್ತ ಅಲಂಕಾರ ಪೂಜೆ ೧೧:೩೦ಕ್ಕೆ ಶ್ರೀ ಬೇಟೆ ಅಯ್ಯಪ್ಪ ಸನ್ನಿಧಿಯಲ್ಲಿ ಅಭಿಷೇಕ ಪೂಜೆ, ೧೧:೪೫ಕ್ಕೆ ಶ್ರೀ ವಿಷ್ಣುಮೂರ್ತಿ ದೈವ ನೆಲೆಯಲ್ಲಿ ಅಭಿಷೇಕ ಪೂಜೆ, ಮಂಗಳಾರತಿ, ೧೨ ಗಂಟೆಗೆ ದೇವರ ನೆರ್ಪು ಬಲಿ, ೧ ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ.

ಅಂದು ಸಂಜೆ ೪ ಗಂಟೆಗೆ ಶ್ರೀ ಶಾಸ್ತ - ಈಶ್ವರ ದೇವರ ಅವಭೃತ ಸ್ನಾನ, ಮೆರವಣಿಗೆಯೊಂದಿಗೆ ದೇವಸ್ಥಾನದಲ್ಲಿ ವಿವಿಧ ನೃತ್ಯ ಬಲಿ, ಸಂಪ್ರೋಕ್ಷಣೆ ನಡೆಯಲಿದೆ. ರಾತ್ರಿ ೯ ಗಂಟೆಗೆ ಅನ್ನ ಸಂತರ್ಪಣೆ ಬಳಿಕ ಶ್ರೀ ವಿಷ್ಣುಮೂರ್ತಿ ದೈವದ ತೋಯಾತ ತೆರೆ ಹಾಗೂ ಮೇಲೇರಿಗೆ ಅಗ್ನಿಸ್ಪರ್ಶ ನಡೆಯಲಿದೆ.

ತಾ. ೧೮ ರಂದು ಬೆಳಿಗ್ಗೆ ೯ ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ ಜರುಗಲಿದೆ ಎಂದು ದೇವಸ್ಥಾನ ಸಮಿತಿ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ತಿಳಿಸಿದ್ದಾರೆ.