ಮಡಿಕೇರಿ, ಫೆ. ೧೪: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ಸಮೀಪದ ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಭಿಷೇಕ್ (೨೭), ಯೋಗೇಶ್ (೧೭) ಎಂಬವರುಗಳು ಮೃತಪಟ್ಟವರಾಗಿದ್ದಾರೆ. ಇವರಿಬ್ಬರೂ ಕೊಡಗಿನವರು ಎನ್ನಲಾಗಿದ್ದು, ಈ ಬಗ್ಗೆ ಖಚಿತಗೊಂಡಿಲ್ಲ. ಸಂಬAಧಿಕರ ಮನೆಗೆ ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಈ ಕುರಿತು ಪೊಲೀಸ್ ಮೂಲಗಳನ್ನು ಸಂಪರ್ಕಿಸಿದಾಗ ಮೃತಪಟ್ಟ ಯುವಕರು ಕೊಡಗಿನವರು ಎಂದು ಹೇಳಲಾಗುತ್ತಿದ್ದರೂ ಈ ಬಗ್ಗೆ ಸಮರ್ಪಕ ಮಾಹಿತಿ ಲಭಿಸಿಲ್ಲ. ಮೃತ ದೇಹಗಳು ಲಭ್ಯವಾಗಿಲ್ಲ ಹಾಗೂ ಮೃತರ ಸಂಬAಧಿಕರೂ ಇನ್ನೂ ದೂರು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಮೃತದೇಹಗಳು ದೊರೆತ ಬಳಿಕವಷ್ಟೆ ನಿಖರ ಮಾಹಿತಿ ಲಭ್ಯವಾಗಲಿದೆ ಎಂಬುದಾಗಿ ತಿಳಿಸಿವೆ.