ಕೂಡಿಗೆ, ಫೆ.೧೩: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರದ ಪುರಸಭೆಯ ಕಸ ವಿಲೇವಾರಿ ಘಟಕಕ್ಕೆ ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿ ಗಿರೀಶ್ ಸೇರಿದಂತೆ ಆರೋಗ್ಯ ಅಧಿಕಾರಿ ಉದಯ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ೧೫ ವರ್ಷಗಳಿಂದಲೂ ಕಸ ವಿಲೇವಾರಿ ಘಟಕದಿಂದ ಸುತ್ತಮುತ್ತಲಿನ ಪ್ರದೇಶಗಳ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದು, ದುರ್ವಾಸನೆಯಿಂದಾಗಿ ಅನೇಕ ಬಾರಿ ಗ್ರಾಮಸ್ಥರು ಪುರಸಭೆ ಅಧಿಕಾರಿ ವರ್ಗದವರಿಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದರು.

ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಪ್ರಯತ್ನದಿಂದಾಗಿ ಈ ಸಾಲಿನಲ್ಲಿ ಸ್ವಚ್ಛ ಭಾರತ್ ಯೋಜನೆ ಅಡಿ ಘಟಕದ ಕೇಂದ್ರದಲ್ಲಿ ಕಸ ವಿಲೇವಾರಿಗೆ ಸಂಬAಧಿಸಿದAತೆ ನಗರ ಪ್ರದೇಶಗಳಲ್ಲಿ ಅಳವಡಿಕೆ ಮಾಡಿರುವಂತೆ ಆಧುನಿಕ ತಂತ್ರಜ್ಞಾನದ ನೂತನ ಯಂತ್ರಗಳ ಬಳಕೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಲಾಗುತ್ತದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಗಿರೀಶ್ ತಿಳಿಸಿದರು.

ಭುವನಗಿರಿ ಕಸ ವಿಲೇವಾರಿ ಘಟಕದಲ್ಲಿ ಈಗಾಗಲೇ ಟೆಂಡರ್ ಪಡೆದ ಗುತ್ತಿಗೆದಾರ ನೂತನ ಯಂತ್ರಗಳ ಅಳವಡಿಕೆಗೆ ಸಂಬAಧಿಸಿದAತೆ ಬೃಹತ್ ಯಂತ್ರಗಳನ್ನು ತಂದು ಅಳವಡಿಕೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಅಲ್ಲದೆ ರೂ. ೭೫ ಲಕ್ಷದಲ್ಲಿ ೪ ನೂತನ ಕಸ ವಿಲೇವಾರಿ ಯಂತ್ರಗಳು ಮತ್ತು ರೂ. ೩೩ ಲಕ್ಷ ವೆಚ್ಚದಲ್ಲಿ ಅದಕ್ಕೆ ಸಂಬAಧಿಸಿದ ಹಸಿ ಕಸ-ಒಣ ಕಸ ಮತ್ತು ಪ್ಲಾಸ್ಟಿಕ್‌ಗಳು ವಿಭಾಗವಾಗಲು ಹಲವಾರು ಯಂತ್ರಗಳ ಅಳವಡಿಕೆ ಕಾರ್ಯವು ಕಸ ವಿಲೇವಾರಿ ಘಟಕದಲ್ಲಿ ನಡೆಯುತ್ತಿದೆ.

ಇದರ ಜೊತೆಯಲ್ಲಿ ನಗರಾಭಿವೃದ್ಧಿ ಕೋಶದ ¸ಅನುದಾನದ ಮೂಲಕ ಭುವನಗಿರಿ ಕಸ ವಿಲೇವಾರಿ ಘಟಕದಲ್ಲಿ ಪಾರಂಪರಿಕ ಕಸ ವಿಲೇವಾರಿ ಮಾಡುವ ಕಾಮಗಾರಿಯು ಶೀಘ್ರ ಆರಂಭಗೊಳ್ಳಲಿದೆ.

ಇದರಿAದಾಗಿ ಬಹುದಿನಗಳ ಬೇಡಿಕೆಯಾಗಿದ್ದ ಘಟಕದ ಸಮೀಪದಲ್ಲಿರುವ ಗ್ರಾಮಗಳ ರೈತರ ಮತ್ತು ಗ್ರಾಮಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವಂತದಾಗುತ್ತದೆ.

ಪಾರAಪರಿಕ ಕಸ ವಿಲೇವಾರಿ ಮಾಡುವ ಟೆಂಡರ್ ಪಡೆದಿರುವ ಗುತ್ತಿಗೆದಾರ ಹಳೆಯ ಕಸವನ್ನು ಸಂಪೂರ್ಣವಾಗಿ ಘಟಕದಿಂದ ತೆಗೆದು ಅದರಲ್ಲಿರುವ ಪ್ಲಾಸ್ಟಿಕ್, ಒಣ ಕಸ ಸೇರಿದಂತೆ ಬೇರೆ ಬೇರೆ ಹಂತಗಳಲ್ಲಿ ವಿಭಾಗ ಮಾಡಿ ಸಿಮೆಂಟ್ ಕಾರ್ಖಾನೆಗೆ ಕಳುಹಿಸುವ ವ್ಯವಸ್ಥೆ ಮಾಡಲಿದ್ದಾರೆ ಎಂದು ಪುರಸಭೆಯ ಆರೋಗ್ಯ ಅಧಿಕಾರಿ ಉದಯ್ ಕುಮಾರ್ ತಿಳಿಸಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.