ಮಡಿಕೇರಿ, ಫೆ. ೧೨: ಶಿವರಾತ್ರಿ ಪ್ರಯುಕ್ತ ಮಡಿಕೇರಿಯ ರಾಮಾಂಜನೇಯ ಭಜನಾ ಮಂಡಳಿಯ ನೇತೃತ್ವದಲ್ಲಿ ೨೫ ಭಜನಾ ತಂಡಗಳಿAದ ನಗರ ಸಂಕೀರ್ತನೆ ಕಾರ್ಯಕ್ರಮ ತಾ.೧೫ ರಂದು ಸಂಜೆ ೬ ಗಂಟೆಯಿAದ ೮ ಗಂಟೆಯವರೆಗೆ ನಡೆಯಲಿದೆ ಎಂದು ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಸಂಚಾಲಕ ಮಹೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ ವರ್ಷ ೧೭ ತಂಡಗಳು ನಗರ ಸಂಕೀರ್ತನೆಯಲ್ಲಿ ಪಾಲ್ಗೊಂಡಿದ್ದವು, ಈ ವರ್ಷ ೨೫ ತಂಡಗಳು ಪಾಲ್ಗೊಳ್ಳಲಿವೆ. ಈ ಪೈಕಿ ೧೫ ತಂಡಗಳು ಮಡಿಕೇರಿ ನಗರ ವ್ಯಾಪ್ತಿಯ ಭಜನಾ ತಂಡಗಳಾಗಿದ್ದು ಉಳಿದವು ಮಡಿಕೇರಿ ಗ್ರಾಮಾಂತರದಿAದ ಆಗಮಿಸಿ ಭಾಗವಹಿಸಲಿವೆ ಎಂದರು. ನಗರ ಸಂಕೀರ್ತನೆಯು ನಗರದ ಮಲ್ಲಿಕಾರ್ಜುನ ನಗರದಲ್ಲಿರುವ ಕೋದಂಡರಾಮ ದೇವಾಲಯದಿಂದ ಆರಂಭಗೊಳ್ಳಲಿದೆ. ರಾಜರಾಜೇಶ್ವರಿ ದೇವಾಲಯದ ಧರ್ಮದರ್ಶಿ ಗೋವಿಂದಸ್ವಾಮಿ ಹಾಗೂ ನಗರಸಭಾ ಅಧ್ಯಕ್ಷೆ ಕಲಾವತಿ ಅವರು ಸಂಕೀರ್ತನೆಗೆ ಚಾಲನೆ ನೀಡಲಿದ್ದಾರೆ.
೨೫ ತಂಡಗಳು ಭಜನೆಯನ್ನು ಮಾಡುತ್ತ ಕೋದಂಡರಾಮ ದೇವಾಲಯದಿಂದ, ಮುತ್ತಪ್ಪ ದೇವಾಲಯ, ಬನ್ನಿ ಮಂಟಪ, ಮಹದೇವಪೇಟೆ, ಚೌಕಿ, ಹಳೆ ಖಾಸಗಿ ಬಸ್ ನಿಲ್ದಾಣ, ಪೊಲೀಸ್ ಠಾಣೆ, ಜನರಲ್ ತಿಮ್ಮಯ್ಯ ವೃತ್ತ ಬಳಿಕ ಅಲ್ಲಿಂದ ಆಂಜನೇಯ ದೇವಸ್ಥಾನದವರೆಗೆ ಸಾಗಿ ಅಲ್ಲಿಂದ ಓಂಕಾರೇಶ್ವರ ದೇವಾಲಯದಲ್ಲಿ ಭಜನಾ ಮೆರವಣಿಗೆ ಸಮಾಪ್ತಿಗೊಳ್ಳಲಿದೆ. ಓಂಕಾರೇಶ್ವರದಲ್ಲಿ ಕೊನೆಗ ಭಜನೆಯೊಂದಿಗೆ ಮಂಗಳ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ರಾಮಾಂಜನೇಯ ಭಜನಾ ಮಂಡಳಿಯ ದಿನೇಶ್ ಕುಮಾರ್ ಅವರು ಮಾತನಾಡಿ, ೨೫ ತಂಡಗಳಲ್ಲಿ ೩ ವಿಭಾಗಗಳನ್ನಾಗಿ ಮಾಡಿ ಪ್ರತಿ ವಿಭಾಗದಲ್ಲೂ ಕುಣಿತ ಭಜನೆಯ ತಂಡ ಇರಲಿದೆ. ಈ ತಂಡದವರು ದಾರಿಯುದ್ದಕ್ಕೂ ಕುಣಿಯುತ್ತಾ ಭಜನೆ ಮಾಡುತ್ತಾ ನಗರ ಸಂಕೀರ್ತನೆಗೆ ಮೆರಗು ನೀಡಲಿದ್ದಾರೆ ಎಂದರು. ಭಜನೆ ತಂಡದವರಲ್ಲದೆ ಎಲ್ಲ ಹಿಂದೂ ಬಾಂಧವರು ಕೂಡ ಭಾಗವಹಿಸಬಹುದೆಂದರು.
ನಗರ ಸಂಕೀರ್ತನೆ ಸಂಜೆ ೬ ರಿಂದ ೮ ಗಂಟೆಯವರೆಗೆ ನಡೆಯಲಿದ್ದು ಸಂಜೆ ಹಲವೆಡೆ ದಾನಿಗಳ ಸಹಕಾರದಿಂದ ಉಪಹಾರ ವ್ಯವಸ್ಥೆ ಇರಲಿದೆ. ಸುಮಾರು ೧,೫೦೦ ಮಂದಿ ಸೇರುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಮಾಂಜನೇಯ ಭಜನಾ ಮಂಡಳಿಯ ಚಂದ್ರಶೇಖರ್, ರಂಜಿತ್ ಜಯರಾಮ್ ಹಾಗೂ ಕೋದಂಡರಾಮ ಭಜನಾ ಮಂಡಳಿಯ ವಿಶಾಲಾಕ್ಷಿ ಹಾಜರಿದ್ದರು.
ಭಾಗವಹಿಸುವ ತಂಡಗಳು
ರಾಮಾAಜನೇಯ ಭಜನಾ ಮಂಡಳಿ-ಮಡಿಕೇರಿ, ಶೃತಿಲಯ ಭಜನಾ ಮಂಡಳಿ-ಮಡಿಕೇರಿ, ವಿಜಯ ವಿನಾಯಕ ಭಜನಾ ಮಂಡಳಿ-ಮಡಿಕೇರಿ, ಕೋದಂಡರಾಮ ಭಜನಾ ಮಂಡಳಿ-ಮಲ್ಲಿಕಾರ್ಜುನ ನಗರ-ಮಡಿಕೇರಿ, ಮುತ್ತಪ್ಪ ಭಜನಾ ಮಂಡಳಿ-ಮಡಿಕೇರಿ, ಚೌಡೇಶ್ವರಿ ಭಜನಾ ಮಂಡಳಿ- ಮಹದೇವಪೇಟೆ-ಮಡಿಕೇರಿ, ಕನ್ನಿಕಾ ಪರಮೇಶ್ವರಿ ಭಜನಾ ಮಂಡಳಿ-ಮಹದೇವಪೇಟೆ-ಮಡಿಕೇರಿ, ವನಚಾಮುಂಡಿ ಭಜನಾ ಮಂಡಳಿ-ಜ್ಯೋತಿ ನಗರ-ಮಡಿಕೇರಿ, ಪ್ರಸನ್ನ ಗಣಪತಿ ಭಜನಾ ಮಂಡಳಿ-ಹೊಸ ಬಡಾವಣೆ-ಮಡಿಕೇರಿ, ವೆಂಕಟೇಶ್ವರ ಕಲಾ ತಂಡ-ಅಶೋಕಪುರ-ಮಡಿಕೇರಿ, ಸತ್ಯಸಾಯಿ ಭಜನಾ ಮಂಡಳಿ-ಮಡಿಕೇರಿ, ರಾಜರಾಜೇಶ್ವರಿ-ಭಜನಾ ಮಂಡಳಿ-ಮAಗಳಾದೇವಿ ನಗರ-ಮಡಿಕೇರಿ, ಭಕ್ತಿ ಲಹರಿ ಭಜನಾ ತಂಡ-ಮಡಿಕೇರಿ, ಇಸ್ಕಾನ್, ರಾಜರಾಜೇಶ್ವರಿ ಭಜನಾ ಮಂಡಳಿ-೨ನೇ ಮೊಣ್ಣಂಗೇರಿ, ಚಾಮುಂಡೇಶ್ವರಿ ಭಜನಾ ಮಂಡಳಿ-ದೇವರಕೊಲ್ಲಿ, ಶ್ರೀದೇವಿ ಭಜನಾ ಮಂಡಳಿ-ಜೋಡುಪಾಲ, ಮದೆಮಹೇಶ್ವರ ಭಜನಾ ಮಂಡಳಿ-ಮದೆನಾಡು, ದುರ್ಗಾಭಗವತಿ ಭಜನಾ ಮಂಡಳಿ-ತಾಳತ್‌ಮನೆ, ಸನಾತನ ಭಜನಾ ಮಂಡಳಿ-ಕಗ್ಗೋಡ್ಲು, ವಿನಾಯಕ ಸೇವಾ ಸಮಿತಿ- ತೊಂಬತ್ತುಮನೆ, ಆದಿಶಕ್ತಿ ವಿನಾಯಕ ಭಜನಾ ಮಂಡಳಿ-ಉಡೋತ್, ವಿನಾಯಕ ಸೇವಾ ಟ್ರಸ್ಟ್-ಕತ್ತಲೆಕಾಡು, ಉದ್ಭವ ವಿನಾಯಕ ಭಜನಾ ಮಂಡಳಿ-ಪುಟಾಣಿ ನಗರ, ಗಣಪತಿ ಭಜನಾ ಮಂಡಳಿ-ಮರಗೋಡು, ಒಟ್ಟು ೨೫ ತಂಡಗಳು ಭಾಗವಹಿಸಲಿವೆ.