ವೀರಾಜಪೇಟೆ, ಫೆ. ೧೨: ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗಿ ಸದೃಢರಾಗಲು ಸಾಧ್ಯ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಜಾನಪದ ಪರಿಷತ್ ವೀರಾಜಪೇಟೆ ಘಟಕ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಸಹಯೋಗದಲ್ಲಿ ನಗರದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಗ್ರಾಮೀಣ ಕ್ರೀಡಾಕೂಟವನ್ನು ಕಂಜರ ಬಾರಿಸಿ ಹಾಗೂ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪೊನ್ನಣ್ಣ ಅವರು, ನಮ್ಮ ಸಂಸ್ಕೃತಿಯಲ್ಲಿ ಗ್ರಾಮೀಣ ಕ್ರೀಡೆಯು ಒಂದು ಭಾಗವಾಗಿದೆ. ಅದನ್ನು ನಾವೆಲ್ಲ ಉಳಿಸಿ, ಬೆಳೆಸಬೇಕು. ಕ್ರೀಡಾ ಜೀವನದಲ್ಲಿ ಸೋಲು-ಗೆಲುವು ಹೇಗೆ ಸಹಜವೋ. ಅದೇ ರೀತಿ ಆರೋಗ್ಯವಂತ ಸಮಾಜದಲ್ಲಿ ನೂರು ಬಾರಿ ಸೋತರೂ ಮತ್ತೆ ಗೆಲ್ಲುವ ಪ್ರಯತ್ನ ಮಾಡುವಂತಾಗಬೇಕು. ಗ್ರಾಮೀಣ ಕ್ರೀಡಾಕೂಟ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲೆ ನಾವೆಲ್ಲ ಕಾರ್ಯೋನ್ಮುಖಗೊಳ್ಳಬೇಕು. ಉಳಿಸಲು ಕಟಿಬದ್ಧರಾಗಬೇಕು. ಮುಂದಿನ ಪೀಳಿಗೆಗೆ ಗ್ರಾಮೀಣ ಕ್ರೀಡೆಯನ್ನು ಹಸ್ತಾಂತರಿಸಬೇಕು. ಇಂದಿನ ಯುವ ಜನಾಂಗ ಕ್ರೀಡಾ ಮನೋಭಾವನೆ ಬೆಳಿಸಿಕೊಳ್ಳಬೇಕು, ಕ್ರೀಡೆ ಎಲ್ಲರ ಚೇತನವಾಗಬೇಕು ಎಂದು ಹೇಳಿದರು. ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷÀ ಬಿ.ಜಿ.ಅನಂತಶಯನ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಎಲೆಮರೆಯ ಕಾಯಿಯಂತಿರುವ ಕಲಾವಿದರನ್ನು ಗುರುತಿಸಿ ಕಳೆದ ೧೦ ವರ್ಷಗಳಿಂದಲೂ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಜಾನಪದದಲ್ಲಿ ಅಹಂ ಇರಬಾರದು. ಒಂದು ಕುಟುಂಬದವರAತೆ ಇರಬೇಕು. ಕಲಾವಿದರು ಸಿಗುª ವೇದಿಕೆಯ ಅವಕಾಶವನ್ನು ಬಳಸಿಕೊಂಡು ಸಾಧನೆ ಮಾಡಬೇಕು. ವೀರಾಜಪೇಟೆ ಕ್ಷೇತ್ರದ ಶಾಸಕರು ಕ್ರೀಡೆಗಳಿಗೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶದ ಬದುಕಿನಲ್ಲಿ ಹಾಡುತ್ತ ಬಂದ ಗೀತೆಗಳು ಜಾನಪದ ಗೀತೆಗಳಾಗಿ ಬೆಳೆದು ಅತ್ಯಂತ ಶ್ರೀಮಂತ ಕಲೆಯಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಕರ್ನಾಟಕದಲ್ಲಿರುವ ಎಲ್ಲಾ ವಿಧದ ಜಾನಪದ ಕಲೆ, ಕ್ರೀಡೆಗಳು ಕೊಡಗಿನಲ್ಲಿ ಮಾತ್ರ ಕಂಡುಬರಲು ಸಾಧ್ಯ. ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಬೇರೆ ಜಿಲ್ಲೆಗಳಲ್ಲಿ ಇಷ್ಟು ಕಲೆ, ಕ್ರೀಡೆ ಇಲ್ಲ. ಜಾನಪದ ಅಕಾಡೆಮಿ ಸ್ಥಾಪನೆ ಮಾಡುವ ಮೂಲಕ ಕೊಡಗಿನ ಕಲೆ ಅನಾವರಣ ಹಾಗೂ ಕಲೆಗೆ ಪ್ರೋತ್ಸಾಹ ನೀಡುವಂತಾಗಲು ಶಾಸಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕಿ ಲೀಲಾವತಿ ಮಾತನಾಡಿ, ಮಹಿಳೆಯರು ಮನೆಯಲ್ಲಿ ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿರುತ್ತಾರೆ. ಇಂತಹ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶವನ್ನು ಸರಕಾರ ಮತ್ತು ಸಂಘ ಸಂಸ್ಥೆಗಳು ಮಾಡಿಕೊಟ್ಟಿರುವುದು ಉತ್ತಮ ಕಾರ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಪುರಸಭೆ ನಿಕಟಪೂರ್ವ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ, ಜಿಲ್ಲಾ ಜಾನಪದ ಪರಿಷತ್ ಕಾರ್ಯದರ್ಶಿ ಉಜ್ವಲ್ ರಂಜಿತ್, ವೀರಾಜಪೇಟೆ ಘಟಕದ ಅಧ್ಯಕ್ಷ ಟಾಮಿ ಥೋಮಸ್, ಪ್ರಧಾನ ಕಾರ್ಯದರ್ಶಿ ರಜಿತಾ ಕಾರ್ಯಪ್ಪ, ಪೊನ್ನಂಪೇಟೆ ಘಟಕದ ಅಧ್ಯಕ್ಷ ದಿಲನ್ ಚಂಗಪ್ಪ, ಪ್ರಧಾನ ಕಾರ್ಯದರ್ಶಿ ಗೀತಾ ನಾಯ್ಡು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪಿ. ಹರೀಶ್, ಕುಶಾಲನಗರ ಘಟಕದ ಅಧ್ಯಕ್ಷ ಚಂದ್ರಮೋಹನ್, ಜಿಲ್ಲಾ ಘಟಕದ ಖಜಾಂಚಿ ಸಂಪತ್ ಕುಮಾರ್, ನವೀನ್ ಅಂಬೇಕಲ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಶಿವಕುಮಾರ್, ಸೇವಾ ಪ್ರತಿನಿಧಿಗಳಾದ ಮೀನಾಕ್ಷಿ, ವೀಣಾ, ಜೇಮ್ಸ್, ಬಿಂದು, ಜಾನಪದ ಪರಿಷತ್ತಿನ ಪದಾಧಿಕಾರಿಗಳಾದ ವೀಣಾ ರವಿ, ಫ್ಯಾನ್ಸಿ ಮುತ್ತಣ್ಣ, ರಂಜಿತ ಕವಲಪಾರ, ರಂಜಿತ್ ಕಿಗ್ಗಾಲು, ರಂಜಿನಿ, ಪ್ರಮೀಳಾ ನಾಚಯ್ಯ, ಗೌರು ನಂಜಪ್ಪ, ಶೋಭಾ ಸುಬ್ಬಯ್ಯ, ಕೃಪಾ ದೇವರಾಜ್, ಜಿಲ್ಲಾ ಘಟಕದ ಉಪಾಧ್ಯಕ್ಷ ಅಂಬೇಕಲ್ ಕುಶಾಲಪ್ಪ, ಪದಾಧಿಕಾರಿಗಳಾದ ನಳಿನಾಕ್ಷಿ, ಅನಿತಾ, ರಾಜೇಶ್, ಟಿ.ಡಿ. ಮೋಹನ್, ಚಂಬAಡ ಮುದ್ದಪ್ಪ, ಗಿರೀಶ್ ಕಿಗ್ಗಾಲು, ಹರೀಶ್ ಕಿಗ್ಗಾಲು, ಹಾ.ತಿ. ಜಯಪ್ರಕಾಶ್, ಸಿದ್ದರಾಜು ಬೆಳ್ಳಯ್ಯ, ಪ್ರೇಮ ರಾಘವಯ್ಯ, ವೈಲೇಶ್, ವಾಂಚೀರ ನಾಣಯ್ಯ ಸೇರಿದಂತೆ ಹಲವರಿದ್ದರು. ಗೌರಮ್ಮ ದತ್ತಿನಿಧಿ ಪ್ರಶಸ್ತಿ ವಿಜೇತರಾದ ಸಾಹಿತಿ ಕೃಪಾ ದೇವರಾಜು ಅವರಿಗೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ವಿವಿಧ ಗ್ರಾಮೀಣ ಕ್ರೀಡಾಕೂಟ ನಡೆಯಿತು.