ಮಡಿಕೇರಿ, ಫೆ. ೧೨: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಾಂದಲಪಟ್ಟಿಗೆ ಪ್ರವೇಶ ನಿರ್ಬಂಧಿಸಿ ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಆದೇಶ ಹೊರಡಿಸಿದ್ದಾರೆ.
ಮಾಂದಲ್‌ಪಟ್ಟಿ ಪ್ರವಾಸಿ ತಾಣದಲ್ಲಿ ರಸ್ತೆ ದುರಸ್ತಿ ಹಾಗೂ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದರಿಂದ ತಾ. ೧೬ ರಿಂದ ೨೮ರ ತನಕ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಹಾಗೂ ವಾಹನಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದು ಸಾರ್ವಜನಿಕ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ರಸ್ತೆ ದುಸ್ಥಿತಿಯಲ್ಲಿರುವ ಕಡೆಗಳಲ್ಲಿ ಕಲ್ಲುಹಾಸು ಕಾಮಗಾರಿ ನಡೆಯಲಿದೆ ಎಂದು ಅಭಿಷೇಕ್ ತಿಳಿಸಿದ್ದಾರೆ.