*ಗೋಣಿಕೊಪ್ಪ, ಫೆ. ೧೨: ರಾಷ್ಟಿçÃಯ ಜಂತುಹುಳು ನಿವಾರಣಾ ದಿನವನ್ನು ಇಲ್ಲಿಗೆ ಸಮೀಪದ ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು. ತಿತಿಮತಿ ಆರೋಗ್ಯ ಕೇಂದ್ರದ ಬಿಎಚ್‌ಈಓ ಶಿವಯ್ಯ, ಆರೋಗ್ಯ ಸಹಾಯಕ ಯಶವಂತ್, ಆಶಾ ಕಾರ್ಯಕರ್ತೆ ಚಿತ್ರ, ಅಂಗನವಾಡಿ ಕಾರ್ಯಕರ್ತೆ ಲತಾ ಸಹಾಯಕಿ ಯಮುನ, ಮಕ್ಕಳು ಮತ್ತು ಪೋಷಕ ವೃಂದದವರು ಪಾಲ್ಗೊಂಡಿದ್ದರು.

ಅAಗನವಾಡಿ ಕೇಂದ್ರದಲ್ಲಿ ೧-೬ ವರ್ಷದೊಳಗಿನ ಮಕ್ಕಳಿಗೆ, ವರ್ಷದಲ್ಲಿ ಎರಡು ಬಾರಿ ಮಾತ್ರೆಗಳನ್ನು ನೀಡಲಾಗುವುದು. ಮಕ್ಕಳಲ್ಲಿ ಜಂತುಹುಳುಗಳಿAದ ಕಂಡುಬರುವ ಆರೋಗ್ಯ ಸಮಸ್ಯೆಗಳು ಯಾವುದು, ಜಂತುಹುಳು ನಿವಾರಣೆಯಿಂದ ಆಗುವ ಪ್ರಯೋಜನಗಳ ಕುರಿತು ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು.