ವೀರಾಜಪೇಟೆ, ಫೆ. ೧೨: ಪಟ್ಟಣದಲ್ಲಿರುವ ಸಂತ ಅನ್ನಮ್ಮ ದೇವಾಲಯ ಹಾಗೂ ಲೂರ್ದು ಮಾತೆಯ ವಾರ್ಷಿಕ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮಹೋತ್ಸವದ ಅಂಗವಾಗಿ ತಾ.೧೧ ರಂದು ಸಂತ ಅನ್ನಮ್ಮ ದೇವಾಲಯದಲ್ಲಿ ಮೈಸೂರು ಧರ್ಮ ಕೇಂದ್ರದ ಫ್ರಾನ್ಸಿಸ್ ಸೆರಾವೋ ಅವರಿಂದ ಆಡಂಬರ ಗಾಯನ ಬಲಿಪೂಜೆ, ಧಾರ್ಮಿಕ ಆಶೀರ್ವಚನ ಹಾಗೂ ಪರಮ ಪ್ರಸಾದ ವಿತರಣೆ ನಡೆಯಿತು.

ಬಳಿಕ ಸಂತ ಅನ್ನಮ್ಮ ಮತ್ತು ಲೂರ್ದು ಮಾತೆಯ ವಿದ್ಯುತ್ ದೀಪಾಲಂಕೃತ ಮಂಟಪವು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಹೊರಟು ಚರ್ಚ್ ರಸ್ತೆಗಾಗಿ, ದಖ್ಖನಿ ಮೊಹಲ್ಲ, ತೆಲುಗರ ಬೀದಿ, ಜೈನರ ಬೀದಿ, ಗಡಿಯಾರ ಕಂಬದ ಬಳಿಯಿಂದ ಮುಖ್ಯ ರಸ್ತೆಗಾಗಿ, ಖಾಸಗಿ ಬಸ್ ನಿಲ್ದಾಣ ಮಾರ್ಗವಾಗಿ, ಸುಣ್ಣದ ಬೀದಿ, ಗೋಣಿಕೊಪ್ಪ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿಂದ, ಮುಖ್ಯರಸ್ತೆಗಾಗಿ ದೊಡ್ಡಟ್ಟಿಚೌಕಿ ಮಾರ್ಗವಾಗಿ ಸಂತ ಅನ್ನಮ್ಮ ದೇವಾಲಯದವರೆಗೆ ಸಾಗಿ ಬಂತು. ನೂರಾರು ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಾ. ೮ ರಂದು ವಾರ್ಷಿಕೋತ್ಸವಕ್ಕೆ ಧ್ವಜಾರೋಹಣ ನೆರವೇರಿಸಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಜಪಸರ ಮತ್ತು ದಿವ್ಯ ಬಲಿಪೂಜೆ ನಡೆಯಿತು, ತಾ. ೯ ಮತ್ತು ೧೦ ರಂದು ಪ್ರಾರ್ಥನೆ ಜಪಸರ, ದಿವ್ಯ ಬಲಿಪೂಜೆ ಪ್ರಬೋಧನೆಯನ್ನು ಬೆಂಗಳೂರಿನ ರಾಬಿನ್ ಅವರು ನಡೆಸಿಕೊಟ್ಟರು. ಈ ವೇಳೆ ಸಂತ ಅನ್ನಮ್ಮ ದೇವಾಲಯದ ಧರ್ಮಗುರುಗಳಾದ ಜೇಮ್ಸ್ ಡೊಮಿನಿಕ್, ಮದಲೈ ಮುತ್ತು, ಐಸಾಕ್ ರತ್ನಾಕರ, ಅವಿನಾಶ್, ದಯಾನಂದ ಪ್ರಭು, ವಿಜಯಕುಮಾರ್ ಹಾಗೂ ಆರ್ಜಿ, ಪೊನ್ನಂಪೇಟೆ, ಅಮ್ಮತ್ತಿ, ಸೋಮವಾರಪೇಟೆ ಇತರೆಡೆಯಿಂದ ಧರ್ಮ ಕೇಂದ್ರದ ಗುರುಗಳು, ಕನ್ಯಾಸ್ತಿçÃಯರು, ಸಲಹಾ ಸಮಿತಿ ಸದಸ್ಯರುಗಳಿದ್ದರು