ಮಡಿಕೇರಿ, ಫೆ. ೧೨: ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಮತ್ತು ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅವರು ಕರೆ ನೀಡಿದರು. ಶಾದಿ ಮಹಲ್ ಸಮುದಾಯ ಭವನದಲ್ಲಿ ನಡೆದ ಚೆಟ್ಟಿಮಾನಿ ಕುಂದಚೇರಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಗ್ರಾ.ಪಂ ಚುನಾವಣೆ ಸಮೀಪಿಸುತ್ತಿದ್ದು, ಸರ್ವರು ಒಗ್ಗೂಡಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕೆಂದರು.
ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್ ಮಾತನಾಡಿ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಕೇಂದ್ರ ಸರಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಖಂಡಿಸಿದರು. ವಲಯ, ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರದ ನಿಲುವನ್ನು ವಿರೋಧಿಸಲಾಗುವುದು, ಅಲ್ಲದೆ ಕಾರ್ಯಾಗಾರ ನಡೆಸಲಾಗುವುದು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಚೆಟ್ಟಿಮಾನಿ ಕುಂದಚೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕೆ.ಎಂ ಅವರು ಪಕ್ಷ ಸಂಘಟನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು. ಡಿಸಿಸಿ ಸದಸ್ಯ ಹಾಗೂ ಕುಂದಚೇರಿ ಗ್ರಾ.ಪಂ ಸದಸ್ಯ ಹ್ಯಾರಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೊಡಗಿನ ಜಮ್ಮಾಬಾಣೆ ಸಮಸ್ಯೆಗೆ ಪರಿಹಾರ ಸೂಚಿಸಿದ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿರುವ ಹಿನ್ನೆಲೆ ಶಾಸಕ ಪೊನ್ನಣ್ಣ ಹಾಗೂ ನಿರ್ಗಮಿತ ಅಧ್ಯಕ್ಷ ಕೆದಂಬಾಡಿ ಹರೀಶ್ ಅವರನ್ನು ವಲಯ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಹಿರಿಯರಾದ ಇಂದೂಮತಿ ರಾಣಿ, ಪಂಚಾಯ್ತಿ ಮಾಜಿ ಅಧ್ಯಕ್ಷೆ ಹೆಚ್.ಜೆ.ಲಲಿತ, ವಿಎಸ್ಎಸ್ಎನ್ ನಿರ್ದೇಶಕಿ ಲೋಲಾಕ್ಷಿ ರೀನಾ, ಪ್ರಮುಖರಾದ ದಿನೇಶ್, ಕೊಟ್ಟುಕತ್ತಿರ ಪೊನ್ನಣ್ಣ, ಪೊನ್ನೇಟಿ ಗೋವರ್ಧನ್, ಅಲ್ಲಂಗಡ ಸದಾ ಬೋಪಯ್ಯ, ಅಲ್ಲಂಗಡ ಪಟ್ಟು ಪೊನ್ನಪ್ಪ ಅವರುಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ವಲಯ ಕಾಂಗ್ರೆಸ್ ನೂತನ ಅಧ್ಯಕ್ಷ ನಾಪುಲಿರ ಕೀರ್ತಿ ಉತ್ತಪ್ಪ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಪ್ರಮುಖರಾದ ಕೆದಂಬಾಡಿ ರಘುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕರಿಕೆ ಗ್ರಾ.ಪಂ ಅಧ್ಯಕ್ಷ ಬಾಲಚಂದ್ರನ್ ನಾಯರ್, ಪ್ರಮುಖರಾದ ಕೊಳಕೇರಿ ಹ್ಯಾರಿಸ್, ಹಂಸ ಕೋಡಿ, ನೇತ್ರಾವತಿ, ಜಗದೀಶ್ ಸೋಮಯ್ಯ, ಕೆದಂಬಾಡಿ ರಮೇಶ್, ತಮೀಮ್, ಪಂಚಾಯ್ತಿ ಸದಸ್ಯ ವಿಶು ಪ್ರವೀಣ್, ಬೂತ್ ಅಧ್ಯಕ್ಷ ಮುಕ್ಕಾಟಿ ಗಣೇಶ್, ದೀರ್ಘಕೋಪಟ್ಟಿ, ಬೆಳ್ಳಿಪಾಡಿ ಜಯಪ್ರಕಾಶ್, ಚೆರ್ಕನ ಪ್ರಸನ್ನ ಕುಮಾರ್, ಕೋಟೆ ನಂದ, ಪ್ರಮುಖರಾದ ಕೆ.ಎಸ್.ಅಣ್ಣಯ್ಯ, ವೇಣುಗೋಪಾಲ್, ಮಂಗೇರಿದ ಗಂಗಮ್ಮ, ಕೆದಂಬಾಡಿ ಚೇತನ್ ಮಂಜು, ಮುತಾಲಿಬ್, ಸುಹೇಬ್, ಸಿ.ಎಂ.ಕರೀA, ನಾರಾಯಣ ಗುತ್ತಿಗೆದಾರ ರಶೀದ್ ಮತ್ತಿತರರು ಉಪಸ್ಥಿತರಿದ್ದರು.
ವಲಯ ಮಹಿಳಾ ಅಧ್ಯಕ್ಷೆ ಮುಕ್ಕಾಟಿ ನೇತ್ರಾವತಿ ಪ್ರಾರ್ಥಿಸಿ, ವಲಯ ಪ್ರಧಾನ ಕಾರ್ಯದರ್ಶಿ ಫೈಝಲ್ ಸ್ವಾಗತಿಸಿದರು. ಗ್ರಾ.ಪಂ ಸದಸ್ಯ ಹ್ಯಾರಿಸ್ ನಿರೂಪಿಸಿದರು, ಕೆದಂಬಾಡಿ ಹರೀಶ್ ವಂದಿಸಿದರು.