ಸಿದ್ದಾಪುರ, ಫೆ. ೧೧: ಕಾಫಿ ತೋಟದಲ್ಲಿ ನೀರು ಹಾಯಿಸಲು ಸ್ಪಿಂಕ್ಲರ್ ಪೈಪ್ ಜೋಡಣೆ ಮಾಡುತ್ತಿರುವ ಸಂದರ್ಭ ವಿದ್ಯುತ್ ಸ್ಪರ್ಶಗೊಂಡು ಕಾಫಿ ಬೆಳೆಗಾರ, ಸರ್ವೆ ಇಲಾಖೆಯಲ್ಲಿ ನಿವೃತ್ತ ಉದ್ಯೋಗಿಯಾಗಿದ್ದ ಜಿಮ್ಮ (೬೮) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ನಡೆದಿದೆ. ಹಾಲುಗುಂದ ಗ್ರಾಮದ ಜಿಮ್ಮ ಅವರು ತಮ್ಮ ಕಾಫಿ ತೋಟದೊಳಗೆ ನೀರು ಹಾಯಿಸಲು ಸ್ಪಿಂಕ್ಲರ್ ಪೈಪ್ ಅಳವಡಿಸುತ್ತಿದ್ದ ಸಂದರ್ಭ ಕಾಫಿ ತೋಟದ ಒಳಗೆ ಹಾದು ಹೋಗಿದ್ದ ೧೧ ಕೆ.ವಿ. ವಿದ್ಯುತ್ ತಂತಿ ಸ್ಪಿçಂಕ್ಲರ್ ಪೈಪ್‌ಗೆ ತÀಗುಲಿ ದುರ್ಘಟನೆ ಸಂಭವಿಸಿದೆ. ಈ ವಿಚಾರ ತಿಳಿದು ಸ್ಥಳೀಯ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ನಿವಾಸಿಗಳು ಆಗಮಿಸಿ ವಿದ್ಯುತ್ ಇಲಾಖೆ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಸ್ಥಳಕ್ಕೆ ವಿದ್ಯುತ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡುವಂತೆ ಸ್ಥಳೀಯರು ಒತ್ತಾಯಿಸಿದರು. ಘಟನೆಯ ಸಂಬAಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ