ಮಡಿಕೇರಿ, ಫೆ. ೧೧: ಮಡಿಕೇರಿ ತಾಲೂಕಿನ ಕಿಗ್ಗಾಲು ಗ್ರಾಮದ ಪ್ರಗತಿಪರ ಕೃಷಿಕ ಪಡಿಞರಂಡ ವೇಣು ಕುಮಾರ್ ಮಂದಪ್ಪ (ಕಟ್ಟಿ) ಅವರಿಗೆ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ಲಭಿಸಿದೆ. ೨೦೨೩- ೨೦೨೪ನೇ ಸಾಲಿನಲ್ಲಿ ಮಳೆ ಆಶ್ರಿತ ಕೃಷಿ ಚಟುವಟಿಕೆ ವಿಭಾಗದಲ್ಲಿ ಹೆಕ್ಟೇರ್ಗೆ ೧೧೩.೪೯ ಕ್ವಿಂಟಾಲ್ ಭತ್ತ ಇಳುವರಿ ಪಡೆದು ರಾಜ್ಯ ಮಟ್ಟಕ್ಕೆ ದ್ವಿತೀಯ ಸ್ಥಾನವನ್ನು ಪಡೆದು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಅವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.