ವೀರಾಜಪೇಟೆ, ಫೆ. ೧೦: ವೀರಾಜಪೇಟೆ ಸಮೀಪದ ಕೊಟ್ಟೋಳಿಯ ಶ್ರೀ ಧಾರಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಎರಡು ದಿನಗಳ ಕಾಲ ಅತ್ಯಂತ ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿತು.
ಸುಮಾರು ೮೦೦ ವರ್ಷಗಳ ಇತಿಹಾಸ ಹೊಂದಿರುವ ಉದ್ಭವಲಿಂಗ ಶ್ರೀ ಈಶ್ವರ ದೇವರಿಗೆ ವಿವಿಧ ಪೂಜೆಗಳು ಸಲ್ಲಿಕೆಯಾದವು.
ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮೊದಲ ದಿನ ಬೆಳಿಗ್ಗೆಯಿಂದಲೇ ಗಣಪತಿ ಹೋಮ, ಪ್ರಾರ್ಥನೆ, ಸ್ವಸ್ಥಿ ಪುಣ್ಯವಾಚನ, ಪುಣ್ಯಾಹುತಿ, ದೇವನಾಂದಿ ಮಹಾಗಣಪತಿ ಪೂಜೆ, ಪಂಚಗವ್ಯ ಶುದ್ಧಿ, ಋತ್ವಿಕ್ ವರ್ಣನೆ ಸೇರಿದಂತೆ ರಾತ್ರಿಯವರೆಗೂ ವಿವಿಧ ಪೂಜೆ, ಅನ್ನ ಸಂತರ್ಪಣೆ, ಹೋಮ ಹವನ ನಡೆಯಿತು.
ಸಂಜೆ ಯಾಗ ಶಾಲೆ ಪ್ರವೇಶ, ಕ್ಷೇತ್ರಪಾಲ ಪ್ರಾರ್ಥನೆ, ಕಲಶ ಸ್ಥಾಪನೆ, ವಾಸ್ತು ಹೋಮ, ಆದಿವಾಸ, ಮಹಾಮಂಗಳಾರತಿ, ಗಣಪತಿ ಪೂಜೆ, ಮಂಡಳ ಪೂಜೆ, ರಾಕ್ಷೆÆÃಘ್ನ ಹೋಮ, ಆದಿವಾಸಾದಿ ಹೋಮ, ಪೂರ್ಣಾಹುತಿ ನಡೆದು ತೀರ್ಥಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು.
ಎರಡನೆಯ ದಿನ ಬೆಳಿಗ್ಗೆಯಿಂದ ಮಹಾಗಣಪತಿ ಪೂಜೆ, ತತ್ವ ಹೋಮ, ದೇವರಿಗೆ ಅಷ್ಟಬಂಧ ಪ್ರತಿಷ್ಠೆ, ಪ್ರಾಣ ಪ್ರತಿಷ್ಠೆ, ಮೂಲ ಮಂತ್ರ ಹೋಮ, ರುದ್ರ ಹೋಮ, ಕಲಾಶಾಭಿಷೇಕ, ಪುಣ್ಯಾಹವಾಚನ, ಪ್ರತಿಷ್ಠಾಂಗ ಹೋಮ, ಬ್ರಹ್ಮಕಲಶ ಸ್ಥಾಪನೆ, ಕಲಾ ಹೋಮ, ನವಗ್ರಹ ಹೋಮ, ಮಹಾ ಪೂರ್ಣಾಹುತಿ ಅಲಂಕಾರ ಸೇರಿದಂತೆ ವಿವಿಧ ಪೂಜೆಗಳು ನಡೆದವು.
ನಂತರ ದೇವರು ಹೊರಗೆ ಬರುವ ಪೂಜೆ, ದೇವರ ನೃತ್ಯ ಬಲಿ ನಡೆದು ಮಹಾಪೂಜೆ ನಡೆಯಿತು. ಬಳಿಕ ಮಹಾಪೂಜೆ, ಮಹಾ ಮಂಗಳಾರತಿ ಸೇವೆ ನಡೆಯಿತು. ಇದೇ ಸಂದರ್ಭ ನವಗ್ರಹ ಪ್ರತಿಷ್ಠಾಪನೆ ಪೂಜೆ ನಡೆಯಿತು.
ನೆರೆದ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಮಾಡಲಾಯಿತು.
ಪೂಜಾ ವಿಧಿ-ವಿಧಾನಗಳನ್ನು ಮುಖ್ಯ ತಂತ್ರಿಗಳಾದ ಜನಾರ್ಧನ್ ಭಟ್ ಅವರ ನೇತೃತ್ವದಲ್ಲಿ ಹಾಗೂ ದೇವಸ್ಥಾನದ ನಿತ್ಯ ಅರ್ಚಕರಾದ ವೆಂಕಟೇಶ್ ಭಟ್ ಹಾಗೂ ಇತರರು ನಡೆಸಿದರು.
ದೇವಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಚಂಗಚAಡ ಚೇತನ್ ಬೆಳ್ಯಪ್ಪ ಹಬ್ಬದ ಕುರಿತು ಮಾತನಾಡಿ, ಈಗಾಗಲೇ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸರ್ವ ಭಕ್ತಾದಿಗಳ ಸಹಕಾರದಿಂದ ಶ್ರದ್ಧಾಭಕ್ತಿಯಿಂದ ನಡೆದಿದೆ. ತಾ.೧೪ರಿಂದ ೧೮ ರವರೆಗೆ ಶಿವರಾತ್ರಿ ಹಾಗೂ ದೇವಾಲಯದ ವಾರ್ಷಿಕ ಉತ್ಸವ ನಡೆಯಲಿದೆ. ಇದರ ಅಂಗವಾಗಿ ತಾ.೧೪ರ ಸಂಜೆ ೫ ಗಂಟೆಗೆ ದೇವತಕ್ಕರಾದ ಚಂಗಚAಡ ಕುಟುಂಬದಿAದ ಭಂಢಾರವನ್ನು ದೇವಾಲಯಕ್ಕೆ ತರಲಾಗುತ್ತದೆ. ತಾ.೧೫ ರಂದು ಬೆಳಿಗ್ಗೆ ಎತ್ತ್ ಪೋರಾಟ್ ಸೇರಿದಂತೆ ವಿವಿಧ ಪೂಜೆ ಪುನಸ್ಕಾರಗಳು ನಡೆಯಲಿವೆ ಎಂದರು.
ಬ್ರಹ್ಮಕಲಶೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಕೋದಂಡ ಅಜಯ್ ಮುತ್ತಣ್ಣ, ಸಹ ಕಾರ್ಯದರ್ಶಿ ಜಗನ್ನಾಥ್ ಬಬ್ಬಿ, ಚಂಗಚAಡ ಸಿ ಲಕ್ಷö್ಮಣ್, ಗುಂಬಿರ ಶಾಂತಕುಮಾರ್, ಕೋಣೇರಿರ ರಂಜಿ ಕಾವೇರಪ್ಪ, ಚಂಗಚAಡ ವೇಣು, ಪುರುಷೋತ್ತಮ್ ಕೊಟ್ಟೋಳಿ, ಹಿರಿಯ ಸಲಹೆಗಾರರಾದ ಚಂಗಚAಡ ಕಟ್ಟಿ ಕಾವೇರಪ್ಪ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು, ಊರಿನವರು, ನೆರೆಯ ಗ್ರಾಮಸ್ಥರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.
ಪೂಜಾ ಕಾರ್ಯಕ್ರಮದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಪಾಲ್ಗೊಂಡು ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಶಾಸಕರು, ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸುವುದಾಗಿ ತಿಳಿಸಿದರಲ್ಲದೆ ತಮ್ಮ ವೈಯಕ್ತಿಕ ನೆರವು ರೂ ೧.ಲಕ್ಷ ಧನಸಹಾಯ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೋದಂಡ ಅಜಯ್, ಕಾರ್ಯದರ್ಶಿ ಚಂಗಚAಡ ಚೇತನ್ ಬೆಳ್ಯಪ್ಪ ಹಾಗೂ ಆಡಳಿತ ಮಂಡಳಿಯವರು, ವೀರಾಜಪೇಟೆ ತಾಲೂಕು ಕೆಡಿಪಿ ಸದಸ್ಯರಾದ ಮಾಳೇಟಿರ ಪ್ರಶಾಂತ್, ವೀರಾಜಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಇಸ್ಮಾಯಿಲ್ ಸೇರಿದಂತೆ ಪ್ರಮುಖರು ಹಾಜರಿದ್ದರು.