ಮಡಿಕೇರಿ, ಫೆ. ೯: ಬೀರುಗ ಗ್ರಾಮದ ಅಜ್ಜಮಾಡ ತಾಸ್ಯ ನೀಲಮ್ಮ ಅವರು ಭರತನಾಟ್ಯ ರಂಗಪ್ರವೇಶ-ಆರAಗ್ರೇಟ್ರA ಕಾರ್ಯಕ್ರಮ ಗುರು ವಿದುಷಿ ರೂಪಾ ಗಿರೀಶ್ (ನೃತ್ಯ ಲಹರಿ ಕಲಾಕೇಂದ್ರ) ಅವರ ಮುಂದಾಳತ್ವದಲ್ಲಿ ತಾ.೮ ರಂದು ಬೆಂಗಳೂರಿನ ಮಲ್ಲೇಶ್ವರಂ ಸೇವಾಸಧನ ಸಭಾಂಗಣದಲ್ಲಿ ನಡೆಯಿತು. ಬೆಂಗಳೂರಿನ ಸೈಂಟ್ ಕ್ಲಾರೆಟ್ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ವ್ಯಾಸಂಗ ಮಾಡುತ್ತಿರುವ ಇವರು ಬೀರುಗ ಗ್ರಾಮದ ಅಜ್ಜಮಾಡ ಪ್ರಸಾದ್ ಹಾಗೂ ಭವ್ಯ ಪ್ರಸಾದ್ ದಂಪತಿಯ ಪುತ್ರಿ.