ಕುಶಾಲನಗರ, ಫೆ. ೮: ರೋಟರಿ ಕುಶಾಲನಗರದ ಸುವರ್ಣ ಸಂಭ್ರಮ ಆಚರಣೆಯ ಅಂಗವಾಗಿ ನಡೆಯುತ್ತಿರುವ “ಕ್ಲೀನ್ ಸಿಟಿ - ಸ್ವಚ್ಛ ಕುಶಾಲನಗರ ನಮ್ಮ ಅಭಿಯಾನ” ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ.

ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಒಂದು ತಿಂಗಳ ಕಾಲ ನಡೆಯುವ ಅಭಿಯಾನದ ಭಾಗವಾಗಿ ಕಾವೇರಿ ಸೇತುವೆಯ ಎರಡೂ ಕಡೆ ಇರುವ ತಡೆಗೋಡೆಗಳನ್ನು ಸ್ವಚ್ಛಗೊಳಿಸಿ, “ಸ್ವಚ್ಛತೆಯನ್ನು ಕಾಪಾಡಿ” ಎಂಬ ಸಂದೇಶದೊAದಿಗೆ ಕೊಡಗಿನ ಪ್ರವಾಸೋದ್ಯಮ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆ, ಒಣ ಹಾಗೂ ಹಸಿ ಕಸದ ಸಂಗ್ರಹಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಇದರ ಜೊತೆಗೆ, ಸ್ವಚ್ಛತಾ ಜಾಗೃತಿ ಚಿತ್ರಕಲೆ (ಪೇಂಟಿAಗ್) ಕಾರ್ಯವನ್ನು ಕುಶಾಲನಗರ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಜಿ.ಎಂ.ಪಿ. ಶಾಲಾ ಆವರಣ, ಕೆಎಸ್‌ಆರ್‌ಟಿಸಿ ಗೋಡೆ, ಅರಣ್ಯ ಇಲಾಖೆ ಆವರಣ, ಸರ್ಕಾರಿ ಆಸ್ಪತ್ರೆ ಆವರಣ ಸೇರಿದಂತೆ ಹಲವು ಪ್ರಮುಖ ಬೀದಿಗಳ ಗೋಡೆಗಳ ಮೇಲೆ ಒಣ ಮತ್ತು ತೇವ ಕಸದ ನಿರ್ವಹಣೆ ಕುರಿತ ಜಾಗೃತಿ ಚಿತ್ರಗಳನ್ನು ಗೋಡೆಗಳ ಮೇಲೆ ಬಿತ್ತರಿಸಲಾಗಿದೆ. ಜೊತೆಗೆ ಕೊಡಗಿನ ಸುಂದರ ಪ್ರಕೃತಿ ಹಾಗೂ ಪ್ರವಾಸೋದ್ಯಮವನ್ನು ಪ್ರತಿಬಿಂಬಿಸುವ ಚಿತ್ರಗಳು ಮೂಡಿಬರುತ್ತಿವೆ.

ಈ ಬಗ್ಗೆ ಮಾತನಾಡಿದ ರೋಟರಿ ಕುಶಾಲನಗರದ ಅಧ್ಯಕ್ಷ ಮನು ಪೆಮ್ಮಯ್ಯ, “ಸ್ವಚ್ಛ ಕುಶಾಲನಗರ ಎಂಬುದು ಕೇವಲ ಅಭಿಯಾನವಲ್ಲ, ನಗರದ ಸ್ವಚ್ಛತೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಸಿಇಓ ಗಿರೀಶ್, ಆರೋಗ್ಯಾಧಿಕಾರಿ ಉದಯ್ ಸೇರಿದಂತೆ ರೋಟರಿ ಸದಸ್ಯರಾದ ಮಹೇಶ್ ನಾಲ್ವಾಡೆ, ಡಾ. ಹರೀಶ್ ಎ. ಶೆಟ್ಟಿ, ಉಲ್ಲಾಸ್ ಕೃಷ್ಣ, ಪ್ರಮುಖರಾದ ಮಂಜುನಾಥ ಹೆಚ್.ಪಿ. ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಎಸ್‌ಎಲ್‌ಎನ್ ಸಂಸ್ಥೆಯಿAದ ತ್ಯಾಜ್ಯ ವಿಂಗಡಣೆ ಯಂತ್ರವನ್ನು ದೇಣಿಗೆಯಾಗಿ ನೀಡಲಾಗಿದೆ. ಶಾಸಕ ಡಾ. ಮಂತರ್ ಗೌಡ ಅವರು ರೋಟರಿ ಕುಶಾಲನಗರದೊಂದಿಗೆ ಕೈಜೋಡಿಸಿ ಈ ಸ್ವಚ್ಛತಾ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅಧ್ಯಕ್ಷ ಮನು ಪೆಮ್ಮಯ್ಯ ಮಾಹಿತಿ ನೀಡಿದರು.