ಕಣಿವೆ, ಫೆ. ೮: ಭಾರತೀಯತೆಯ ಉನ್ನತವಾದ ಪದ್ಧತಿ-ಪರಂಪರೆ, ಜಾತ್ರೆಗಳು ಹಾಗೂ ಯಾತ್ರೆಗಳು, ಈ ನೆಲದ ವೀರಚರಿತ್ರೆಗಳು, ರಾಜನೈತಿಕವಾದ ಅಪೂರ್ವ ಜ್ಞಾನದ ಸಮುಚ್ಛಯವೇ ವಿಕಸಿತ ಬದುಕಿನ ಸಮಗ್ರ ಸಂವಿಧಾನವೇ ಹಿಂದುತ್ವ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಮಂಗಳೂರು ವಿಭಾಗದ ಸಂಯೋಜಕರಾದ ಕೇಶವ ಬಂಗೇರ ಪ್ರತಿಪಾದಿಸಿದರು.
ಗುಡ್ಡೆಹೊಸೂರು ಬಸವೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಸಮಾವೇಶದಲ್ಲಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದ ಅವರು, ನಿರಂತರ ಸಂಪರ್ಕ, ಸಂವಹನಗಳ ಮೂಲಕ ಸಮಾಜವನ್ನು ಸೇರಿಸಿಕೊಂಡು ನಿರ್ಮಾಣವಾದ ಹಿಂದುತ್ವದ ಮೇರು ಗೀತೆ ವಂದೇ ಮಾತರಂ ೧೫೦ ವಸಂತಗಳನ್ನು ಪೂರೈಸಿರುವುದು ಭಾರತೀಯರ ಅಭಿಮಾನದ ಸಂಗತಿಯಾಗಿದೆ. ಹಿಂದೂ ಸಂಗಮ ಯಾರ ವಿರುದ್ಧವೂ ಅಲ್ಲ. ಅಥವಾ ದೇಶದಲ್ಲಿನ ಯಾವುದೇ ಪ್ರತಿಕೂಲ ಪರಿಸ್ಥಿತಿಗೂ ಅಲ್ಲ. ಜಾತಿ ಸಂಕೋಲೆಗಳನ್ನು ಕಿತ್ತೆಸೆದು ನಾವೆಲ್ಲಾ ಒಂದು. ನಾವೆಲ್ಲಾ ಬಂಧು ಎಂಬ ಧ್ಯೇಯದೊಂದಿಗೆ ಮಾನಸಿಕ ಹಾgU ಬೌದ್ಧಿಕ ಶಕ್ತಿಯ ಸಂಚಲನದ ಮೂಲಕ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವ ಉದ್ದೇಶ ಹಿಂದೂ ಸಂಗಮದ ಆಶಯವಾಗಿದೆ ಎಂದರು.
ಹಿಂದೂಗಳು ಆರಾಧಿಸುವ. ಪ್ರಕೃತಿ ಹಾಗೂ ಪರಿಸರವನ್ನು ಅಭಿವೃದ್ದಿ ಹೆಸರಿನಲ್ಲಿ ಹಾಳು ಮಾಡದೇ ಸಂರಕ್ಷಿಸಬೇಕಿದೆ. ಹಿಂದೂಗಳು ಹಬ್ಬ ಹರಿದಿನಗಳಲ್ಲಿ ಮಕ್ಕಳನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ಪೂರ್ವಜರು ಉಳಿಸಿಕೊಂಡು ಬಂದು ಹಿಂದೂ ಪದ್ಧತಿ, ಪರಂಪರೆಗಳನ್ನು ಸಂರಕ್ಷಿಸಬೇಕಿದೆ. ಹಿಂದೂಗಳು ಎಲ್ಲರೂ ಒಂದಾಗಿ ಒಗ್ಗೂಡುವ ಮೂಲಕ ಸಮೃದ್ಧ ಹಾಗೂ ಸಮರ್ಥ ರಾಷ್ಟç ಕಟ್ಟ ಬೇಕಿದೆ ಎಂದು ಕರೆ ನೀಡಿದರು.
ಸಮಾವೇಶಕ್ಕೂ ಮುನ್ನ ಕುಶಾಲನಗರದ ರಾಷ್ಟಿçÃಯ ಹೆದ್ದಾರಿಯಿಂದ ಗುಡ್ಡೆಹೊಸೂರು ಡಾ.ಶಿವಕುಮಾರ ಸ್ವಾಮೀಜಿ ವೃತ್ತದ ಮೂಲಕ ಹಾರಂಗಿ ರಸ್ತೆಯ ಬಳ್ಳೂರು ಬಸವೇಶ್ವರ ದೇವಾಲಯದವರೆಗೂ ಶೋಭಾಯಾತ್ರೆ ನಡೆಯಿತು. ಗುಡ್ಡೆಹೊಸೂರು ಡಾ.ಶಿವಕುಮಾರ ಸ್ವಾಮೀಜಿ ವೃತ್ತವನ್ನು ಕೇಸರಿ ಭಾವುಟಗಳು ಹಾಗೂ ತೋರಣಗಳಿಂದ ಅಲಂಕಾರಗೊಳಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗುಡ್ಡೆಹೊಸೂರು ಗ್ರಾಪಂ ಪೌರಕಾರ್ಮಿಕ ವಿಜಯ್, ಸುಣ್ಣದಕೆರೆ ಗ್ರಾಮದ ನಾಟಿವೈದ್ಯೆ ಕಮಲ, ಯೋಗ ಶಿಕ್ಷಕಿ ಪಾರ್ವತಿ, ನಿವಾಸಿ ಕಾಳಯ್ಯ ಇದ್ದರು.
ಬಸವನಹಳ್ಳಿಯ ಪ್ರಗತಿ ಪರ ಕೃಷಿಕರೂ ಆದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಿ.ಎಂ.ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಸಂಗಮ ಆಯೋಜಕ ಸಮಿತಿಯ ತಾಲೂಕು ಅಧ್ಯಕ್ಷ ದೇವಿ ಪ್ರಸಾದ್, ಪ್ರಮುಖರಾದ ಬಿ.ಬಿ.ಭಾರತೀಶ್, ಹೇರೂರು ಚಂದ್ರು, ಹರೀಶ್, ಮಹೇಂದ್ರ ಕುಮಾರ, ರಮೇಶ, ಉದಯ, ನಿತ್ಯಾನಂದ, ರವಿ, ಶಶಿಕುಮಾರ್, ಮನು ಇದ್ದರು.
ವಿದ್ಯಾರ್ಥಿನಿ ಅನುಷಾ ಸ್ವಾಗತಿಸಿ, ವಂದಿಸಿದರು. ರೋಹಿತ್ ನಿರೂಪಿಸಿದರು.