ಕಣಿವೆ, ಫೆ. ೮: ಕುಶಾಲನಗರ - ಮಡಿಕೇರಿ ರಾಷ್ಟಿçÃಯ ಹೆದ್ದಾರಿಯ ಆನೆಕಾಡು ಬಳಿ ಉಪಹಾರಕ್ಕೆ ಬಳಸಿದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಅರಣ್ಯದಂಚಿಗೆ ಎಸೆದವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡು ಅವರಿಂದಲೇ ತ್ಯಾಜ್ಯ ಸಂಗ್ರಹಿಸಿ ಕಳುಹಿಸಿದ ಘಟನೆ ನಡೆದಿದೆ.

ಟಿಟಿ ವಾಹನದಲ್ಲಿ ಕೊಡಗು ಜಿಲ್ಲೆಗೆ ಪ್ರವಾಸ ಬಂದ ಮೈಸೂರು ಮೂಲದ ಪ್ರವಾಸಿಗರು ಆನೆಕಾಡು ಅರಣ್ಯದ ಬಳಿ ವಾಹನ ನಿಲ್ಲಿಸಿ ತಾವು ತಂದಿದ್ದ ಬೆಳಗ್ಗಿನ ಉಪಹಾರವನ್ನು ಸೇವಿಸಿ ಅಲ್ಲೇ ಪ್ಲಾಸ್ಟಿಕ್ ತಟ್ಟೆ ಲೋಟಗಳನ್ನು ಎಸೆದಿದ್ದಾರೆ. ಇದನ್ನು ಗಮನಿಸಿದ ಸ್ಥಳದಲ್ಲಿದ್ದವರು ಪ್ರವಾಸಿಗರನ್ನು ತೀವ್ರವಾಗಿ ತರಾಟೆಗೆ ತೆಗದುಕೊಂಡರು. ಬಳಿಕ ಪ್ರವಾಸಿಗರು ಎಸೆದಿದ್ದ ತ್ಯಾಜ್ಯಗಳನ್ನು ಅವರೇ ಶುಚಿಗೊಳಿಸಿ ಅದನ್ನು ಕೊಂಡೊಯ್ದರು.